ಬೆಂಗಳೂರು: 2026ರ ಹೊಸ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕೈಹಾಕಿದ್ದು, ಒಟ್ಟು 68 ಮಂದಿ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ. ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಾಟೇರಿಯಾ, ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಸೇರಿದಂತೆ ಒಟ್ಟು 68 ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ.
ಬೆಂಗಳೂರಿಗೆ ಐವರು ಡಿಸಿಪಿಗಳ ವರ್ಗಾವಣೆ
ಪೊಲೀಸ್ ಉಪ ಆಯುಕ್ತರಾದ ಎನ್. ಯತೀಶ್ (ಪಶ್ಚಿಮ), ವಿಕ್ರಮ್ ಅಮಟೆ (ಪೂರ್ವ), ಸೈದುಲು ಅದಾವತ್ (ವೈಟ್‌ಫೀಲ್ಡ್), ಮೊಹಮ್ಮದ್ ಸುಜೀತಾ (ಆಗ್ನೇಯ) ಹಾಗೂ ಮಿಥುನ್ ಕುಮಾರ್ (ಈಶಾನ್ಯ) ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಎಸ್ಪಿಗಳ ವರ್ಗಾವಣೆ
ಎಂ.ವಿ. ಚಂದ್ರಕಾಂತ್ (ಬೆಂಗಳೂರು ಗ್ರಾಮಾಂತರ), ಮಲ್ಲಿಕಾರ್ಜುನ ಬಾಲದಂಡಿ (ಮೈಸೂರು), ಕೆ. ರಾಮರಾಜನ್ (ಬೆಳಗಾವಿ), ಬಿ. ನಿಖಿಲ್ (ಶಿವಮೊಗ್ಗ), ಅರುಣಾಂಶು ಗಿರಿ (ರಾಯಚೂರು), ಶುಭನ್ವಿತಾ (ಹಾಸನ), ಜಿತೇಂದ್ರ ಕುಮಾರ್ ದಯಂ (ಚಿಕ್ಕಮಗಳೂರು), ಕನ್ನಿಕಾ ಸುಕ್ರಿವಾಲ್ (ಕೋಲಾರ), ಬಿಂದುಮಣಿ (ಕೊಡಗು), ಶೋಭಾರಾಣಿ (ಮಂಡ್ಯ), ಸಾರಾ ಫಾತಿಮಾ (ರೈಲ್ವೆ), ಎಂ. ಮುತ್ತುರಾಜ್ (ಚಾಮರಾಜನಗರ), ಡಾ. ಬಿ.ಟಿ. ಕವಿತಾ (ಸಿಐಡಿ), ವಿ.ಜೆ. ಸಜಿತ್ (ಐಎಸ್‌ಡಿ) ಹಾಗೂ ಪವನ್ ನೆಜ್ಜೂರು (ಬಳ್ಳಾರಿ) ಅವರನ್ನು ವರ್ಗಾವಣೆ ಮಾಡಲಾಗಿದೆ.
ಐಜಿಪಿಯಾಗಿ ಮುಂಬಡ್ತಿ
ಡಾ. ಎಂ.ಬಿ. ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್‌ನಿವಾಸ್ ಸೆಪಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್‌ವಾಲ್ (ಸಿಆರ್‌ಪಿಎಫ್), ಅಜಯ್ ಹಿಲೋರಿ (ಸಿಸಿಬಿ, ಬೆಂಗಳೂರು) ಮತ್ತು ಡಾ. ರೋಹಿಣಿ ಕಟೋಚ್ ಸೆಪಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ) ಅವರಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ.
ಡಿಐಜಿಯಾಗಿ ಮುಂಬಡ್ತಿ
ಡಾ. ಭೀಮಾಶಂಕರ್ ಎಸ್. ಗುಳೇದ್, ನಿಕಂ ಪ್ರಕಾಶ್ ಅಮ್ರಿತ್, ಜಿ. ರಾಧಿಕಾ, ರಾಹುಲ್ ಕುಮಾರ್ ಶಹಪುರ್‌ವಾದ್, ಧರ್ಮೇಂದ್ರ ಕುಮಾರ್ ಮೀನಾ, ಇಲಾಕಿಯಾ ಕರುಣಾಕರನ್, ಡಾ. ಸಿ.ಬಿ. ವೇದಮೂರ್ತಿ, ಕೆ.ಎಂ. ಶಾಂತರಾಜು, ಹನುಮಂತರಾಯ, ಡಿ. ದೇವರಾಜ್, ಡಾ. ಡಿ.ಆರ್. ಸಿರಿಗೌರಿ, ಡಾ. ಕೆ. ಧರಣಿದೇವಿ, ಎಸ್. ಸವಿತಾ, ಸಿ.ಕೆ. ಬಾಬಾ, ಅಬ್ದುಲ್ ಅಹದ್, ಎಸ್. ಗಿರೀಶ್, ಎಂ. ಪುಟ್ಟಮಾದಯ್ಯ, ಟಿ. ಶ್ರೀಧರ್, ಎಂ. ಅಶ್ವಿನಿ, ಎ.ಎನ್. ಪ್ರಕಾಶ್ ಗೌಡ ಸೇರಿದಂತೆ ಹಲವು ಅಧಿಕಾರಿಗಳಿಗೆ ಡಿಐಜಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.ಇದನ್ನು ಓದಿ –ತಂದೆ–ತಾಯಿ ಬೇರ್ಪಟ್ಟ ನೋವಿಗೆ ಬಾಲಕಿ ಆತ್ಮಹತ್ಯೆ
ಇತರೆ ಮುಂಬಡ್ತಿಗಳು
ಡಾ. ಅನೂಪ್ ಶೆಟ್ಟಿ, ಹರೀಶ್ ಪಾಂಡೆ, ಸುಮನಾ ಡಿ. ಪನ್ನೇಕರ್, ದಿವ್ಯಾ ಸಾರಾ ಥಾಮಸ್, ಡಿಕಾ ಕಿಶೋರ್ ಬಾಬು, ಸಿ.ಬಿ. ರಿಷ್ಯಂತ್, ನಿಶಾ ಜೇಮ್ಸ್, ಮಧುರ ವೀಣಾ ಹಾಗೂ ಎಂ.ವಿ. ಚಂದ್ರಕಾಂತ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಪದೋನ್ನತಿ ಲಭಿಸಿದೆ.








