ಬೆಂಗಳೂರು: ರಾಜ್ಯ ಸರ್ಕಾರ 2025–26ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಇಂದು (ಮೇ 15) ರಿಂದ ಆರಂಭಿಸಿದ್ದು, ಜೂನ್ 14ರವರೆಗೆ ಇಡೀ ತಿಂಗಳು ಈ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ್ದು, ಮಾರ್ಗಸೂಚಿಗಳೂ ಪ್ರಕಟಿಸಲಾಗಿದೆ.
ಈ ಮಾರ್ಗಸೂಚಿಗಳು, ಈಗಾಗಲೇ ಪ್ರತ್ಯೇಕ ಅಧಿನಿಯಮ ಅಥವಾ ನಿಯಮಗಳ ಅಡಿಯಲ್ಲಿ ಬರುವ ನೌಕರರಿಗೆ ಅನ್ವಯಿಸುವುದಿಲ್ಲ.
Contents
ಬೆಂಗಳೂರು: ರಾಜ್ಯ ಸರ್ಕಾರ 2025–26ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಇಂದು (ಮೇ 15) ರಿಂದ ಆರಂಭಿಸಿದ್ದು, ಜೂನ್ 14ರವರೆಗೆ ಇಡೀ ತಿಂಗಳು ಈ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ್ದು, ಮಾರ್ಗಸೂಚಿಗಳೂ ಪ್ರಕಟಿಸಲಾಗಿದೆ.ವಿವರಣೆಗಳು:ವರ್ಗಾವಣಾ ಪ್ರಕ್ರಿಯೆ:ಅಧಿಕೃತ ಪ್ರಾಧಿಕಾರ ಮತ್ತು ನೌಕರರ ಜವಾಬ್ದಾರಿ:ವರ್ಗಾವಣೆಗೆ ಹೊರತಾದ ಸಂದರ್ಭಗಳು:
ವಿವರಣೆಗಳು:
- ಸಕ್ಷಮ ಪ್ರಾಧಿಕಾರ ಎಂದರೆ – ನೌಕರರ ನೇಮಕಾತಿ ಅಥವಾ ವರ್ಗಾವಣೆಗೆ ಅಧಿಕಾರ ಹೊಂದಿರುವ ಅಧಿಕಾರಿಗಳು.
- ವರ್ಗಾವಣೆ ಎಂದರೆ – ನೌಕರನನ್ನು ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ಸ್ಥಳಾಂತರಿಸಿ ಕರ್ತವ್ಯ ನಿರ್ವಹಣೆ ನಡೆಸುವ ಸ್ಥಳ ಬದಲಾವಣೆ.
- ಚಲನವಲನ ಎಂದರೆ – ಅದೇ ನಗರದಲ್ಲಿರುವ ಕಛೇರಿಗಳ ನಡುವೆ ನೌಕರರನ್ನು ಸ್ಥಳಾಂತರಿಸುವುದು. ಇದರಿಗಾಗಿ ಈ ಮಾರ್ಗಸೂಚಿಗಳು ಅನ್ವಯಿಸದು.
- ಗುಂಪು-ಎ, ಬಿ, ಸಿ ಮತ್ತು ಡಿ ಹುದ್ದೆಗಳು – 1957ರ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ವರ್ಗೀಕರಿಸಲಾದ ರಾಜ್ಯ ಸರ್ಕಾರಿ ಹುದ್ದೆಗಳು.
ವರ್ಗಾವಣಾ ಪ್ರಕ್ರಿಯೆ:
- ವರ್ಗಾವಣೆಯು ಸಾರ್ವಜನಿಕ ಹಿತದೃಷ್ಟಿಯಲ್ಲಿ ಪಾರದರ್ಶಕವಾಗಿ ನಡೆಯಬೇಕು.
- ಮಾರ್ಗಸೂಚಿಯಂತೆ, ಈ ಬಾರಿ ವರ್ಗಾವಣೆ ಸಂಖ್ಯೆಯು ಪ್ರತಿ ಗುಂಪಿನ ಸಿಬ್ಬಂದಿ ಬಲದ ಗರಿಷ್ಠ 6% ಮೀರಿ ಹೋಗಬಾರದು.
ಅಧಿಕೃತ ಪ್ರಾಧಿಕಾರ ಮತ್ತು ನೌಕರರ ಜವಾಬ್ದಾರಿ:
- ಸ್ಥಳ ನಿಯುಕ್ತಿ ಕಡ್ಡಾಯ – ವರ್ಗಾವಣೆ ಆದ ನಂತರ ಯಾವುದೇ ನೌಕರ ಸ್ಥಳ ನಿಯುಕ್ತಿಗಾಗಿ ಕಾಯುವಂತಿಲ್ಲ. ತಕ್ಷಣವಾದೆ ಕರ್ತವ್ಯಕ್ಕೆ ಹಾಜರಾಗಬೇಕು.
- ದೋಷಾರೋಪಣೆಯ ನೌಕರರು – ಅವರ ವಿರುದ್ಧ ಕ್ರಿಮಿನಲ್/ವಿಭಾಗೀಯ ತನಿಖೆ ಇದ್ದರೆ ಕಾರ್ಯನಿರ್ವಹಣೆಯಲ್ಲದ ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಬೇಕು.
- ವೈದ್ಯಕೀಯ ಕಾರಣಗಳು – ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ನೌಕರರು ದೃಢೀಕರಣ ಪತ್ರದೊಂದಿಗೆ ರಜೆಗೆ ಅರ್ಜಿ ಸಲ್ಲಿಸಬಹುದು. ಹೊರರೋಗಿಯಾಗಿ ಇದ್ದರೆ ಮೊದಲಿಗೆ ಕರ್ತವ್ಯಕ್ಕೆ ಹಾಜರಾಗಿ ನಂತರವೇ ರಜೆಗೆ ಹೋಗಬೇಕು.
ವರ್ಗಾವಣೆಗೆ ಹೊರತಾದ ಸಂದರ್ಭಗಳು:
ಸರ್ವಜನಿಕ ವರ್ಗಾವಣಾ ಅವಧಿಯ ಹೊರಗೆ ವರ್ಗಾವಣೆಗೆ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ಅವಕಾಶ:
- ಅಮಾನತಿಗೆ ಬದಲಾಗಿ ವರ್ಗಾವಣೆ ಮಾಡುವ ಸಂದರ್ಭ.
- ಹುದ್ದೆಗಳ ತೆರವು ಅಥವಾ ಹೊಸ ಹುದ್ದೆ ಸೃಷ್ಟಿಯಾದಾಗ.
- ಅಪವಾದಾತ್ಮಕ / ತುರ್ತು ಸಂದರ್ಭಗಳಲ್ಲಿ – ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಮಾತ್ರ.
- ಗಂಭೀರ ಆರೋಪ ಇರುವ ನೌಕರರ ಬಗ್ಗೆ ಮೇಲ್ನೋಟಕ್ಕೆ ದೃಢವಾದ ದಾಖಲಾತಿ ಇರುವಾಗ.
ಇದನ್ನು ಓದಿ –ಇಂದಿನಿಂದ ಮದ್ಯದ ದರಗಳಲ್ಲಿ ಬದಲಾವಣೆ
ಈ ಆದೇಶದಿಂದ ರಾಜ್ಯದ ನೌಕರರಲ್ಲಿ ವರ್ಗಾವಣೆಯ ನಿರೀಕ್ಷೆ ಹೆಚ್ಚಾಗಿದ್ದು, ಎಲ್ಲ ವರ್ಗಗಳು ನಿರೀಕ್ಷಿತ ಪಾರದರ್ಶಕತೆ ಹಾಗೂ ನಿಯಮಿತ ನಿಯಮಗಳಡಿ ವರ್ಗಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇದೆ.