ಧರ್ಮಸ್ಥಳ: ಬಹುಚರ್ಚಿತ ‘ಧರ್ಮಸ್ಥಳ ಪ್ರಕರಣ’ಕ್ಕೆ ತಿರುವು ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಗುರುತಿಸಿದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳದಲ್ಲಿ ನಡೆದ ತೀವ್ರ ಶೋಧ ಕಾರ್ಯದ ವೇಳೆ 2 ಎಲುಬುಗಳ ಅವಶೇಷಗಳು ಪತ್ತೆಯಾಗಿದ್ದು, ನ್ಯಾಯ ವಿಜ್ಞಾನ ತಜ್ಞರ ತಂಡವು ಹೆಚ್ಚಿನ ಪರೀಕ್ಷೆಗಾಗಿ ಅವುಗಳನ್ನು ವಶಕ್ಕೆ ಪಡೆದಿದೆ. ಎಸ್‌ಐಟಿ (SIT) ಅಧಿಕಾರಿಗಳು ಈ ಕುರಿತು ಸ್ಪಷ್ಟತೆ ನೀಡಿದ್ದು, ದೇಹದ ಪೂರ್ಣ ಅವಶೇಷಗಳು ಲಭ್ಯವಾಗಿಲ್ಲದಿದ್ದರೂ, ಕೇವಲ ಕೆಲವು ಭಾಗಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಅವಶೇಷಗಳು ಪತ್ತೆಯಾದ ಗರ್ಭದಲ್ಲಿ ಇನ್ನಷ್ಟು ಆಳಕ್ಕೆ ಅಗೆಯುವ ಕಾರ್ಯಕ್ಕೆ ಎಸ್‌ಐಟಿ ಮುಂದಾಗಿದೆ. ಜೊತೆಗೆ, ಅಕ್ಕಪಕ್ಕದ ಜಾಗಗಳಲ್ಲೂ ಶೋಧ ಕಾರ್ಯ ಜೋರಾಗಿದೆ.
ಇದು ತನಿಖೆಯಲ್ಲಿ ಮಹತ್ವದ ಸಾಧನೆ ಎನಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ವಿಧಿವಿಜ್ಞಾನ ತಂಡವು ಸಿಕ್ಕಿರುವ ಎಲುಬುಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಿರುವುದು ತನಿಖೆಯ ಮುಂದಿನ ಹಂತಕ್ಕೆ ದಾರಿ ತೆರೆದಿದೆ.ಇದನ್ನು ಓದಿ –ಬೆಂಗಳೂರು : ಆಗಸ್ಟ್ 1ರಿಂದ ಆಟೋ ದರ ಏರಿಕೆ
ಈ ಬೆಳವಣಿಗೆಯಿಂದಾಗಿ ಧರ್ಮಸ್ಥಳ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.