ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದ ಬಳಿ ನಡೆದ ದುರ್ಘಟನೆಯಲ್ಲಿ ಎರಡು ಕಾಡಾನೆಗಳು ವಿದ್ಯುತ್ ಪ್ರವಹದಿಂದ ಸಾವನ್ನಪ್ಪಿವೆ.
ಮಾಹಿತಿಯ ಪ್ರಕಾರ, ಸ್ಥಳೀಯ ರೈತರು ತಮ್ಮ ಜಮೀನಿನ ಸುತ್ತಮುತ್ತ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು. ಈ ವೇಳೆ ಕಾಡಿನಲ್ಲಿ ಆಹಾರ ಹುಡುಕುತ್ತಿದ್ದ ಆನೆಗಳು ಆ ಬೇಲಿಗೆ ತಗುಲಿ ಕರೆಂಟ್ ಶಾಕ್ ಹೊಡೆದು ತಕ್ಷಣವೇ ಸಾವನ್ನಪ್ಪಿವೆ.ಇದನ್ನು ಓದಿ –“ಟನಲ್ ಯೋಜನೆ ವಿಐಪಿ ಕಾರಿಡಾರ್, ಸಾರ್ವಜನಿಕರ ಹಿತವಲ್ಲ”
ಘಟನೆಯ ನಂತರ ಅರಣ್ಯ ಇಲಾಖೆ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.








