By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಉಂಡುಭತ್ತಿ ಕೆರೆ ಅಪಘಾತ: ಹದಿನೈದು ವರ್ಷದ ಬಳಿಕ ಆರೋಪಿಗಳಿಗೆ ಶಿಕ್ಷೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಉಂಡುಭತ್ತಿ ಕೆರೆ ಅಪಘಾತ: ಹದಿನೈದು ವರ್ಷದ ಬಳಿಕ ಆರೋಪಿಗಳಿಗೆ ಶಿಕ್ಷೆ
CrimeKarnatakaLatest NewsMysore

ಉಂಡುಭತ್ತಿ ಕೆರೆ ಅಪಘಾತ: ಹದಿನೈದು ವರ್ಷದ ಬಳಿಕ ಆರೋಪಿಗಳಿಗೆ ಶಿಕ್ಷೆ

Team Varthaman
Last updated: April 25, 2025 12:01 PM
Team Varthaman
Published: April 25, 2025
Share
SHARE

ಮೈಸೂರು: ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಉಂಡಭತ್ತಿ ಕೆರೆಗೆ ಟೆಂಪೋ ಉರುಳಿ ೩೧ ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ೩ ವರ್ಷ ೬ ತಿಂಗಳು ಜೈಲು ವಾಸದ ಬಗ್ಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ.

೨೦೧೦ರ ಡಿ.೧೪ರಂದು ಉಂಡಭತ್ತಿ ಕೆರೆ ಏರಿಯ ಮೇಲೆ ಆರೋಪಿಯು ಕೆಎ-09-4622 ನಂಬರಿನ ಪ್ಯಾಸೆಂಜರ್ ಟೆಂಪೋದಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಅಂದರೆ 40 ಜನರನ್ನು ಕೊರಿಸಿಕೊಂಡು ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಯ ಕೆರೆಗೆ ಟೆಂಪೋವನ್ನು ಮೊಗಚಿಸಿದ್ದರು.

Join WhatsApp Group

ಈ ಪರಿಣಾಮ ಟೆಂಪೋ ಕೆರೆಯ ನೀರಿನಲ್ಲಿ ಮುಳುಗಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಪೈಕಿ 31 ಜನರು ಸ್ಥಳದಲ್ಲೇ ಮೃತಪಟ್ಟಿದ್ದು ಹಾಗೂ ಸ್ವಲ್ಪ ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ನಂತರ ಅಪಾದಿತ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೆ ಟೆಂಪೋವನ್ನು ಬಿಟ್ಟು ಪರಾರಿಯಾಗಿದ್ದರು.
ಆರೋಪಿಯು ಸದರಿ ವಾಹನದ ಪರ್ಮಿಟ್‌ನ ಷರತ್ತನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದನು.

ಜತೆಗೆ ಆಪಾದಿತ 2 ವಾಹನದ ಮಾಲೀಕನಾಗಿದ್ದನು. ವಾಹನದ ಪರ್ಮಿಟ್‌ನ ಷರತ್ತುಗಳನ್ನು ಉಲ್ಲಂಘನೆ ಮಾಡಿ ತಮ್ಮ ವಾಹನದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕಳುಹಿಸಿಕೊಟ್ಟಿರುವುದು ತನಿಖೆಯಿಂದ ದೃಢಪಟ್ಟಿರುವುದರಿಂದ ಆಪಾದಿತ-1(ಚಾಲಕ ಚೇತನ್)ನ ಮೇಲೆ ಕಲಂ: 279, 337, 304(2) 2 ಎಂ 2/2, 187, 177 ಹಾಗೂ ಅಪಾದಿತ 2(ವಾಹನದ ಮಾಲೀಕ ಸಂಜೀವ್ ಮೂರ್ತಿ) ಮೇಲೆ ಕಲಂ 192(ಎ), ಐಎಂ.ವಿ ಆಕ್ಟ್ ರೀತ್ಯಾ ತನಿಖೆ ಕೈಗೊಳ್ಳಲಾಗಿತ್ತು.

ಡಿ.ವೈ.ಎಸ್.ಪಿ ಸಿ.ಡಿ.ಜಗದೀಶ್ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜತೆಗೆ ನ್ಯಾಯಾಲಯದ ಪೊಲೀಸ್ ಸಿಬ್ಬಂದಿ ಮಹದೇವಸ್ವಾಮಿ ಈ ಪ್ರಕರಣದಲ್ಲಿ ಸಾಕ್ಷಿದಾರರನ್ನು ಕರೆತರುವಲ್ಲಿ ಸಹಕರಿಸಿದ್ದರು.

ಆಪಾದಿತರ ವಿರುದ್ಧದ ಆಪಾದನೆ ರುಜುವಾತುಪಡಿಸುವ ಸಲುವಾಗಿ ಅಭಿಯೋಜನೆಯು 27 ಜನ ಸಾಕ್ಷಿಗಳನ್ನು ಹಾಗೂ 83 ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

ಜತೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಹೆಸರಿಸಿ ವಾದ ಮಂಡಿಸಿದ್ದರಿಂದ ಮೈಸೂರು ನಗರದ 11ನೇ ಅಧಿಕ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶ ಸಂಜಯ್ ಎಂ.ಮಲ್ಲಿಕಾರ್ಜುನಯ್ಯ ವಿಚಾರಣೆ ನಡೆಸಿ ಆಪಾದಿತರ ವಿರುದ್ಧ ಆಪಾದಿಸಲಾದ ಆಪಾದನೆಯು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದರು.ಇದನ್ನು ಓದಿ –ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್‌ ಸೆಲ್‌ಗಳನ್ನು ಮಟ್ಟ ಹಾಕಬೇಕು – ಅಶೋಕ್

ಐಎಂವಿ ಆಕ್ಟ್ ರಡಿಯಲ್ಲಿ ಮೊದಲ ಆರೋಪಿಗೆ ಒಟ್ಟಾರೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು ಒಟ್ಟಾರೆ 12,600 ದಂಡ ಮತ್ತು ಎರಡನೇ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ಎನ್.ಸೌಮ್ಯ ಸದರಿ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಿಚಾರಣೆ ನಡೆಸಿ ಸಮರ್ಥವಾಗಿ ವಾದ ಮಂಡಸಿದ್ದರು.

  • ಮುಡಾ ಹಗರಣ : ಸಿದ್ದರಾಮಯ್ಯ ದಂಪತಿಗೆ ಹೈಕೋರ್ಟ್ ನೋಟಿಸ್
    by Team Varthaman
    March 26, 2026
  • ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    by Team Varthaman
    March 26, 2026
  • ಏ.1ರಿಂದ ನೀರಿನ ದರ ಏರಿಕೆ
    by Team Varthaman
    March 26, 2026
  • ಹಾರ್ಮುಜ್ ಜಲಸಂಧಿ ತೆರೆ :ಭಾರತಕ್ಕೆ ಇರಾನ್ ಸಡಿಲಿಕೆ
    by Team Varthaman
    March 26, 2026
  • ಹೈಕಮಾಂಡ್ ತೀರ್ಮಾನದವರೆಗೆ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ
    by Team Varthaman
    March 25, 2026
ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ
ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶ ಪ್ರಕಟ
ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
PUC ಫಲಿತಾಂಶದ ದುಗುಡ : ರಾಜ್ಯದ ಐದು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣು
ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜುಕಿಕ್ ಔಟ್
TAGGED:breakingnewscrimelatestnewsMysore NewsUndubhatti lake
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaLatest NewsMadikeri

ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ವ್ಯಕ್ತಿ ಸಾವು

Team Varthaman
Team Varthaman
April 25, 2025
ಬೆಂ–ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರ ದುರ್ಮರಣ
ಇಂದು ಬೆಂಗಳೂರಿನಲ್ಲಿ  RCBಯ ವಿಜಯ ಮೆರವಣಿಗೆ
ಸರ್ಕಾರದ ಸಮಾರಂಭಗಳಲ್ಲಿ ಜನಪ್ರತಿನಿಧಿಗಳ ಆಹ್ವಾನಕ್ಕೆ ಹೊಸ ನಿಯಮ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಆಸ್ಪತ್ರೆಗೆ ದಾಖಲು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?