ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2025ರ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಒಟ್ಟು 500 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ unionbankofindia.co.in ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 20, 2025
ಹುದ್ದೆಗಳ ವಿವರ:
- ಅಸಿಸ್ಟೆಂಟ್ ಮ್ಯಾನೇಜರ್ (ಕ್ರೆಡಿಟ್): 250 ಹುದ್ದೆಗಳು
- ಅಸಿಸ್ಟೆಂಟ್ ಮ್ಯಾನೇಜರ್ (ಐಟಿ): 250 ಹುದ್ದೆಗಳು
ಅರ್ಹತಾ ಮಾನದಂಡಗಳು:
ವಿವರವಾದ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರೆ ಅರ್ಹತಾ ನಿಯಮಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದಾಗಿದೆ. ನೇರ ಲಿಂಕ್: https://ibpsonline.ibps.in/ubisoapr25
ಅರ್ಜಿಗೆ ಶುಲ್ಕ:
- ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು: ₹177 (ಜಿಎಸ್ಟಿ ಒಳಗೊಂಡು)
- ಇತರ ವರ್ಗಗಳ ಅಭ್ಯರ್ಥಿಗಳು: ₹1180 (ಜಿಎಸ್ಟಿ ಒಳಗೊಂಡು)
ಪಾವತಿಗೆ ಡೆಬಿಟ್/ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ, ಮೊಬೈಲ್ ವಾಲೆಟ್ ಮುಂತಾದ ಮಾರ್ಗಗಳ ಬಳಕೆ ಸಾಧ್ಯ.
ಅರ್ಜಿಯ ವಿಧಾನ:
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – unionbankofindia.co.in
- “Recruitments” ವಿಭಾಗ ಕ್ಲಿಕ್ ಮಾಡಿ
- “Click here to view current recruitment” ಆಯ್ಕೆಮಾಡಿ
- SO ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ – “Apply Online” ಆಯ್ಕೆ ಮಾಡಿ
- ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಶುಲ್ಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ
- ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಇದನ್ನು ಓದಿ –ಗೋವಾ ಶಿರಗಾವ್ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ, ಗುಂಪು ಚರ್ಚೆ (ನಡೆಸಿದರೆ), ಅರ್ಜಿ ಸ್ಕ್ರೀನಿಂಗ್ ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರಬಹುದು. ಆಯ್ಕೆ ವಿಧಾನವನ್ನು ನಿರ್ಧರಿಸುವ ಹಕ್ಕು ಯೂನಿಯನ್ ಬ್ಯಾಂಕ್‌ಗೇ ಮೀಸಲಿರುತ್ತದೆ.