ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ನಾವು ಚಿಕ್ಕವಯಸ್ಸಿನಿಂದಲೂ ಕೇಳುತ್ತಾ ಬೆಳೆದವರು. ತನ್ನ ದೇಹದ ಸಂಪೂರ್ಣ ಬದಲಾವಣೆ ಜೊತೆ ಎಷ್ಟು ಇಷ್ಟ ಕಷ್ಟಗಳನ್ನ ತ್ಯಜಿಸಿ ಗರ್ಭದರಿಸಿ 9 ತಿಂಗಳು ತನ್ನ ಗರ್ಭದಲ್ಲಿ ಜೋಪಾನ ಮಾಡಿ ಪ್ರಪಂಚಕ್ಕೆ ಅರ್ಪಿಸುವ ಏಕೈಕ ಜೀವಿ ಎಂದರೆ ಅದು ತಾಯಿ , ತನ್ನ ರಕ್ತವನ್ನು ಹಾಲಾಗಿ ಮಾರ್ಪಾಡಾಗಿಸಿಕೊಂಡು ಅದಕ್ಕೆ ಮಮತೆಯನ್ನು ಬೆರೆಸಿ ಆಗತ್ತಾನೆ ಕಣ್ಣು ಬಿಟ್ಟಿರುವ ಮಗುವಿಗೆ ಹಾಲುಣಿಸಿ ಮತ್ತೊಮ್ಮೆ ಜೀವದಾನ ಮಾಡುವವಳೆ ತಾಯಿ.
ತನ್ನ ಮಗು ಅಂಬೆಗಾಲು ಇಡುವುದರಿಂದ ಹಿಡಿದು ಅಲ್ಲೇ ಇರಮ್ಮ ನಾನೇ ಹೋಗಿ ಬರುತ್ತೇನೆ ಅನ್ನುವವರೆಗೂ ಪ್ರತಿಯೊಂದು ಹೆಜ್ಜೆಯಲ್ಲೂ ಬೆನ್ನ ಹಿಂದೆ ನಿಂತು ಸರಿಯಾದ ಮಾರ್ಗದ ಜೊತೆ ಕಾವಲು ಇದ್ದವಳು ಅಮ್ಮ ಒಂದರ ಜೊತೆ ಇನ್ನೊಂದಿದ್ದರೆ ಏನಾಗಬಹುದು ಎಂದು ಹೇಳಿಕೊಡುವ ಗಣಿತ ಮೇಷ್ಟ್ರು ಇರಬಹುದು , ಹಿಂದೆ ಏನಾಗಿರಬಹುದು ಎಂಬ ಪ್ರಶ್ನೆಗೆ ಉತ್ತರಿಸುವ ಇತಿಹಾಸ ಮೇಷ್ಟ್ರು ಇರಬಹುದು, ಮುಂದೆ ಏನಾಗಬಹುದು ಎಂಬ ಆಲೋಚನೆಗೆ ಹೇಳಿಕೊಡುವ ಸಮಾಜ ಮೇಷ್ಟ್ರು ಇರಬಹುದು ಕನ್ನಡಾಂಬೆಯ ಬೆಂಬಲವಾಗಿ ನಿಲ್ಲುವ ಕನ್ನಡ ಮೇಷ್ಟ್ರು ಇರಬಹುದು ಆದರೆ ಇಡೀ ಜೀವನಕ್ಕೆ ಅಡಿಪಾಯವನ್ನು ಹಾಕಿ ಅದರ ಮೇಲೆ ಸಂಸ್ಕಾರವೆಂಬ ಗಿಡ ನೆಟ್ಟು ಆಚಾರ ವಿಚಾರ ಏಳು ಬೀಳು ಎಂಬ ಎಷ್ಟು ವಿಚಾರಗಳ ನೀರನ್ನು ಸಸಿಯಿಂದ ಮರವಾಗುವವರೆಗೂ ನೆರವಾದವಳು ಅಮ್ಮ.
ಆದರೆ ಇಂದಿನ ಆಧುನಿಕ ಯುಗದಲ್ಲಿ ತಾಯಂದಿರು ಮಕ್ಕಳಿಗೆ ನೀಡುವ ಸಂಸ್ಕಾರದಲ್ಲಿ ಕೊಂಚಮಟ್ಟಿಗೆ ಕುಗ್ಗಿದೆ . ಒಂದು ಮಗು ಪ್ರಪಂಚದ ಯಾವ ವ್ಯಕ್ತಿಯ ಮಾತಾಗಲಿ ಕಡೆಗಣಿಸಬಹುದು ಆದರೆ ಒಬ್ಬ ತಾಯಿಯ ಮಾತನ್ನು ಎಂದಿಗೂ ಪಾಲಿಸದೆ ಇರಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬ ತಾಯಂದಿರು ತನ್ನ ಮಕ್ಕಳಿಗೆ ಪಾಠ ಆಟದ ಜೊತೆ ಜೀವನವನ್ನ ಸರಿದೂಗಿಸುವ ಸಹನೆ ಕಷ್ಟವನ್ನು ಎದುರಿಸುವ ಮನೋಬಲ, ಸೋಲೆ ಗೆಲುವಿನ ಸೋಪಾನ ಅನ್ನುವ ವಿಚಾರ, ಹಿರಿಯರನ್ನು ಗೌರವಿಸುವ ರೀತಿ, ತಾಳ್ಮೆ, ಸಹನೆಯಿಂದ ಎಷ್ಟು ಆಧ್ಯಾತ್ಮಿಕ ವಿಚಾರಗಳನ್ನು ದಿನದಲ್ಲಿ ಒಂದು ತಾಸಾದರೂ ಮಕ್ಕಳಿಗೆ ಹೇಳಿಕೊಡಬೇಕಾಗುವುದು ಅನಿವಾರ್ಯವಾಗಿದೆ . ಅಲ್ಲದೆ ಒಬ್ಬ ತಾಯಿಯ ಆದ್ಯ ಕರ್ತವ್ಯವೂ ಆಗಿದೆ.
ತಾಯ್ತನ ಎಂಬ ಅದ್ಭುತ ಆನಂದವನ್ನು ಮಕ್ಕಳ ನಾವು ಕೊಂಚ ಜೀವನದ ಎಲ್ಲಾ ಅನುಭವಗಳನ್ನು ಆತ್ಮತೃಪ್ತಿಯಿಂದ ಅನುಭವಿಸುವ ರೀತಿಯನ್ನು ನಾವು ಹೇಳಿಕೊಡಬೇಕಾದದ್ದು ನಮ್ಮ ಕರ್ತವ್ಯವೂ ಆಗಿದೆ . ಇದು ಎಲ್ಲಾ ದೈವಸ್ವರೂಪ ತಾಯಂದಿರ ಆಶಯವಾಗಬೇಕೆಂಬುದೇ ನನ್ನ ಆಶಯ
ಸತ್ಯಶ್ರೀ ನಾಗರಾಜು ಮಂಡ್ಯ








