- ಡ್ರಾಗರ್ ನಿಂದ ಇರಿದು ಹತ್ಯೆ ಯತ್ನ, ದರೋಡೆ ನಾಟಕ: ನಾಲ್ವರ ಬಂಧನ
ಮೈಸೂರು: ಪತಿ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ ಮತ್ತು ಇತರ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೌಟಂಬಿಕ ಕಲಹದಿಂದ ಬೇಸತ್ತು ಪತಿ ಕೊಲೆಗೆ ಮಾಡಿದ್ದ ಸಂಚು ಆಕಸ್ಮಿಕವಾಗಿ ವಿಫಲವಾಗಿತ್ತು.
ರಾಜೇಂದ್ರ ಎಂಬುವರನ್ನು ಡ್ರಾಗರ್ ನಿಂದ ಇರಿದು ಹತ್ಯೆ ಮಾಡಲು ಪತ್ನಿ ಮತ್ತು ಆಕೆಯ ಸಹೋದರ ಸಂಚು ಮಾಡಿದ್ದರು. ತೀವ್ರ ಗಾಯಗೊಂಡಿರುವ ರಾಜೇಂದ್ರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸಂಚು ರೂಪಿಸಿದ್ದ ಕಂಪ್ಯೂಟರ್ ಆಪರೇಟರ್ ಆಗಿರುವ ಪತ್ನಿ ಸಂಗೀತಾ, ಈಕೆ ಸಹೋದರ ಸಂಜಯ್ ಮತ್ತು ಈತನ ಸ್ನೇಹಿತ ವಿಘ್ನೇಶ್ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದು ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ್ದ ಪತ್ನಿ ಪೊಲೀಸರು ಹಣೆದ ಬಲೆಗೆ ಸಿಲುಕಿದ್ದಾಳೆ. ಸಹೋದರ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯವಿತ್ತು. ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಫೈಬರ್ ಡೋರ್ ಫಿಟ್ ಮಾಡುತ್ತಿದ್ದ ರಾಜೇಂದ್ರ ಅವರನ್ನ ಹತ್ಯೆ ಮಾಡಲು ಅಕ್ಟೋಬರ್ 25ರಂದು ಸ್ಕೆಚ್ ಹಾಕಿದ್ದರು. ರಾಜೇಂದ್ರ ಅವರು ಪತ್ನಿ ಸಂಗೀತಾಳನ್ನ ತಮ್ಮ ಸ್ಕೂಟರ್ ನಲ್ಲಿ ನಂಜನಗೂಡಿನ ಹಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದ ಸಮಯದಲ್ಲಿ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಅಡ್ಡವಾಗಿ ನಿಂತಿದೆ.
ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಸ್ಕೂಟರ್ ಬೀಳಿಸಿ ಹರಿತವಾದ ಆಯುಧದಿಂದ ರಾಜೇಂದ್ರ ಅವರಿಗೆ ತಿವಿದಿದ್ದಾನೆ. ಈ ಸಂಧರ್ಭದಲ್ಲಿ ಒಂದು ವಾಹನ ಬಂದಾಗ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಹೀಗಾಗಿ ರಾಜೇಂದ್ರ ಬಚಾವ್ ಆಗಿದ್ದಾರೆ.
ಕಾರನ್ನು ಬಾಡಿಗೆಗೆ ಪಡೆದ ಸಹೋದರ ಸಂಗೀತ ಸಹೋದರ ಸಂಜಯ್ ಮತ್ತು ಸ್ನೇಹಿತ ವಿಘ್ನೇಶ್ ಅವರು ಅಪ್ರಾಪ್ತ ಬಾಲಕನ ನೆರವಿನಿಂದ ಹತ್ಯೆಗೆ ಸಂಚು ರೂಪಿಸಿದ್ದಾರೆ. ಸಂಗೀತಾಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಸಂಚು ಬಯಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪತ್ನಿಯ ಸಂಚು ಭೇದಿಸಿದ ನಂಜನಗೂಡು ಪೊಲೀಸರ ಕಾರ್ಯಕ್ಷಮತೆಗೆ ಎಸ್ಪಿ ವಿಷ್ಣುವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ –ರಾಜ್ಯೋತ್ಸವ ಪ್ರಶಸ್ತಿ 2025–26 ಪ್ರಕಟ: 70 ಸಾಧಕರ ಆಯ್ಕೆ
ಹೆಚ್ಚುವರಿ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್, ಡಿವೈಎಸ್ಪಿ ರಘು ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರವೀಂದ್ರ, ಪಿಎಸ್ಸೈಗಳಾದ ಕೃಷ್ಣಕಾಂತ, ಎಎಸ್ಸೈ ದೇವರಾಜಯ್ಯ ತನಿಖೆ ನಡೆಸಿದ್ದರು.








