By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತಾಯಿ ಗುರುವಾದಾಗ
    February 11, 2026
    ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
    February 10, 2026
    ಶರಣ ಲೋಕದ ಧ್ರುವತಾರೆ…ಸಮಗಾರ ಹರಳಯ್ಯ
    February 10, 2026
    ಭಕ್ತಿಯ ಮೌಲ್ಯವನ್ನು ಸಾರಿದ ಶಬರಿ
    February 7, 2026
    ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
    February 7, 2026
  • Sports
  • National
  • International
  • Crime
Reading: ಮೈಸೂರು–ಕುಶಾಲನಗರ ರೈಲ್ವೆ ಯೋಜನೆಗೆ ಯದುವೀರ್ ಮನವಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಮೈಸೂರು–ಕುಶಾಲನಗರ ರೈಲ್ವೆ ಯೋಜನೆಗೆ ಯದುವೀರ್ ಮನವಿ
KarnatakaMysore

ಮೈಸೂರು–ಕುಶಾಲನಗರ ರೈಲ್ವೆ ಯೋಜನೆಗೆ ಯದುವೀರ್ ಮನವಿ

Team Varthaman
Last updated: February 11, 2026 8:34 PM
Team Varthaman
Published: February 11, 2026
Share
SHARE

ಮೈಸೂರು: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲ್ವೆ ಯೋಜನೆಗೆ ಮರು ಚಾಲನೆ ನೀಡಬೇಕು. ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸಂಸದರು, ಮೈಸೂರು (ಬೆಳಗೊಳ)–ಕುಶಾಲನಗರ 89 ಕಿ.ಮೀ ಉದ್ದದ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಯೋಜನೆ ಮುಂದುವರಿಯದೆ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ. ಅಗತ್ಯ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಕಾರ್ಯಗತಗೊಳಿಸುವ ಹಂತಕ್ಕೆ ತಲುಪದಿರುವುದು ಜನರಲ್ಲಿ ನಿರಾಶೆ ಉಂಟುಮಾಡಿದೆ. ಈ ಯೋಜನೆಗೆ ಪುನರುಜ್ಜೀವನ ನೀಡಲು ರೈಲ್ವೆ ಸಚಿವಾಲಯ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Join WhatsApp Group

ಕೊಡಗು ಜಿಲ್ಲೆಗೆ ಇಂದಿಗೂ ನೇರ ರೈಲು ಸಂಪರ್ಕವಿಲ್ಲ. ಪ್ರವಾಸೋದ್ಯಮ, ಕಾಫಿ ತೋಟಗಾರಿಕೆ ಹಾಗೂ ಕೃಷಿ ಆಧಾರಿತ ಆರ್ಥಿಕತೆಯು ಸಂಪೂರ್ಣವಾಗಿ ರಸ್ತೆ ಸಾರಿಗೆಯ ಮೇಲೆ ಅವಲಂಬಿತವಾಗಿದೆ. ಮಳೆಗಾಲದಲ್ಲಿ ಭೂಕುಸಿತ, ರಸ್ತೆ ದುರಸ್ತಿ ಸಮಸ್ಯೆಗಳು ಹಾಗೂ ವಾಹನ ದಟ್ಟಣೆ ರೈತರು ಮತ್ತು ವ್ಯಾಪಾರಿಗಳಿಗೆ ಭಾರೀ ತೊಂದರೆ ಉಂಟುಮಾಡುತ್ತಿದೆ ಎಂದು ಯದುವೀರ್ ತಿಳಿಸಿದ್ದಾರೆ.

ರೈಲು ಮಾರ್ಗ ಆರಂಭವಾದರೆ ಮೈಸೂರು, ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ಸಿಗಲಿದೆ. ಜೊತೆಗೆ, ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಾಗಿಸಲು ಸಾಧ್ಯವಾಗಲಿದೆ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆ ರಾಜ್ಯದ ಒಳನಾಡು ಸಂಪರ್ಕವನ್ನು ಬಲಪಡಿಸುವ ಮಹತ್ವದ ಮೂಲಸೌಕರ್ಯವಾಗಿದ್ದು, ದಕ್ಷಿಣ ಕರ್ನಾಟಕದ ಅಭಿವೃದ್ಧಿಗೆ ದಿಕ್ಕು ತೋರಿಸಲಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಬಜೆಟ್ ಅನುದಾನವನ್ನು ಮೀಸಲಿಟ್ಟು ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಸಂಸದರು ಕೇಂದ್ರ ಸಚಿವರನ್ನು ಆಗ್ರಹಿಸಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು, ವ್ಯಾಪಾರಿಗಳು ಮತ್ತು ರೈತ ಸಂಘಟನೆಗಳೂ ಈ ಯೋಜನೆಗೆ ತ್ವರಿತ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದು, ಕೇಂದ್ರ ಸರ್ಕಾರದ ಪ್ರತಿಕ್ರಿಯೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

  • ಮೈಸೂರು–ಕುಶಾಲನಗರ ರೈಲ್ವೆ ಯೋಜನೆಗೆ ಯದುವೀರ್ ಮನವಿ
    by Team Varthaman
  • ತಾಯಿ ಗುರುವಾದಾಗ
    by Team Varthaman
  • ಹಿರಿಯ ಪತ್ರಕರ್ತ , ವಿಧಾನ ಪರಿಷತ್ತಿನ ಮಾಜಿ ಸದಸ್ಯಪಿ . ರಾಮಯ್ಯ ಇನ್ನಿಲ್ಲ
    by Team Varthaman
  • ಕೆಯುಡಬ್ಲ್ಯೂಜೆ:ಬೆಂಗಳೂರು ನಗರ ಘಟಕ ಚುನಾವಣೆಗೆ ತಡೆಯಾಜ್ಙೆ ತೆರವು ಮಾಡಿದ ನ್ಯಾಯಲಯ
    by Team Varthaman
  • ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
    by Team Varthaman
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆತ್ಮಹತ್ಯೆಗೆ ಶರಣು
ಬಿಹಾರ ವಿಧಾನಸಭಾ ಚುನಾವಣೆ: ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ
ಆರೋಗ್ಯಕಿಂ ಮಿಗಿಲೇನಿಹುದು
TAGGED:breakingnewslatestnewsಮೈಸೂರು–ಕುಶಾಲನಗರಯದುವೀರ್ರೈಲ್ವೆ ಯೋಜನೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaLatest NewsMandyaTrending

ಮಂಡ್ಯದಲ್ಲಿ 39 ವರ್ಷಗಳ ಬಳಿಕ ಜರುಗುತ್ತಿರುವ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

Team Varthaman
Team Varthaman
April 22, 2025
ಡಿಎಪಿಗೆ ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಸಿ
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ
ಲೋಕಾಯುಕ್ತ ದಾಳಿ: ಮಾಜಿ ಪಿಎಸ್ ಮನೆ ಮೇಲೆ ಧಾಳಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?