ಗುಂಡ್ಲುಪೇಟೆ: ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರು ಬಿಟ್ಟುಹೋಗಿದ್ದ ಟ್ರಾಲಿ ಸೂಟ್‌ಕೇಸ್ ಪರಿಶೀಲನೆ ವೇಳೆ 12.6 ಕೆಜಿ ಗಾಂಜಾ ಪತ್ತೆಯಾಗಿದೆ.
ಗುಂಡ್ಲುಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಟ್ರಾಲಿ ಸೂಟ್‌ಕೇಸ್ ಹಿಡಿದು ಹತ್ತಿದ್ದ ವ್ಯಕ್ತಿ, ಊಟಿಗೆ ತಲುಪಿದ ಬಳಿಕ ಸೂಟ್‌ಕೇಸ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಗುರುವಾರ ಬಸ್ ನಿರ್ವಾಹಕ ಉಮೇಶ್ ಹಾಗೂ ಚಾಲಕ ವಿಜಯಕುಮಾರ್ ಡಿಪೋ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು. ನಂತರ ಗುಂಡ್ಲುಪೇಟೆ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಬ್ಯಾಗ್ ಪರಿಶೀಲಿಸಿದಾಗ 12.645 ಕೆಜಿ ಗಾಂಜಾ ಪತ್ತೆಯಾಯಿತು.
ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








