By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
    April 22, 2026
    ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ತಡೆಗಳು ಹಾಗೂ ಪರಿಹಾರಗಳು
    April 21, 2026
    ನಮ್ಮ ಮಕ್ಕಳ ಶಿಕ್ಷಣ
    April 20, 2026
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
  • Sports
  • National
  • International
  • Crime
Reading: ಮಕ್ಕಳ ಬಾಲ್ಯ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಮಕ್ಕಳ ಬಾಲ್ಯ
Articles

ಮಕ್ಕಳ ಬಾಲ್ಯ

Team Varthaman
Last updated: February 15, 2026 10:19 AM
Team Varthaman
Published: February 15, 2026
Share
SHARE

ಮಕ್ಕಳ ಬಾಲ್ಯ ಹೇಗಿದ್ದರೆ ಚೆನ್ನ

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಬಾಲ್ಯದ ದಿನಗಳು ಅತಿ ಮುಖ್ಯವಾಗುತ್ತವೆ, ಅದು ಒಂದು ರೀತಿ ಒಂದು ಮನೆಗೆ ಬುನಾದಿ ಹೇಗೋ ಹಾಗೆ ಅನ್ನಬಹುದು.. ಬಾಲ್ಯ ಎಂದರೆ ಕೇವಲ ಸಿಹಿ ಅನುಭವಗಳು,ಸುಖದ ದಿನಗಳು, ಎಲ್ಲರಿಂದ ಪ್ರೀತಿ ಪಾತ್ರರಾಗುವುದು,, ಉತ್ತಮ ಓದು, ಅಂಕಗಳಿಸುವಿಕೆ,ಇಷ್ಟೇ ಅಲ್ಲ ಅದು ಸಿಹಿ ಕಹಿ ಎರಡರ ಸಮ್ಮಿಲನವಾಗಿರಬೇಕು ಏಕೆಂದರೆ ನಾವು ಚಿಕ್ಕವರಿದ್ದಾಗ ಏನು ಕಲಿಯುತ್ತೇವೆಯೋ ದೊಡ್ಡವರಾದ ಮೇಲೆ ಕೂಡ ಅದರ ಪರಿಣಾಮ ವಿರುತ್ತದೆ..

Join WhatsApp Group

ಕೇವಲ ಸುಖವನ್ನ ಅಷ್ಟೇ ನೋಡಿಕೊಂಡು ಬೆಳೆದರೆ ಮುಂದೆ ಸಣ್ಣ ಪುಟ್ಟ ಕಷ್ಟಗಳಿಗೂ ಕೂಡ ತುಂಬಾ ದುಃಖ ಅನುಭವಿಸಬೇಕಾಗುತ್ತದೆ, ಮನೆಯಲ್ಲಿ ಕಷ್ಟ ಇದ್ದಾಗ ಅಪ್ಪ ಅಮ್ಮ ಅಥವಾ ಹಿರಿಯರು ಹೇಗೆ ಅದನ್ನು ನಿಭಾಯಿಸಿದರು ಎಂಬುದನ್ನು ನೋಡಿ ಬೆಳೆದರೆ ಮಾತ್ರ ತಾವು ಕೂಡ ಅಂತ ಸಂದರ್ಭವನ್ನು ನಿಭಾಯಿಸಬಲ್ಲರು ಮಕ್ಕಳು.
ಶಾಲೆಯಲ್ಲಿ ಕೂಡ ಮಕ್ಕಳ ಮೇಲಿನ ಓದುವ ಬಾರ ಸ್ವಲ್ಪ ಕಡಿಮೆಯಾಗಬೇಕು, ಸದಾ ಓದು ಬರಹ ಇಷ್ಟರಲ್ಲೇ ಇರದೇ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ತಿಳಿದು ಅದರ ಮೇಲೆ ಮುಂದೆ ಏನಾದರೂ ಮಾಡುವಂತ ದಾರಿಯನ್ನು ತೋರಿಸುವಂತಹ ಕೋರ್ಸ್ಗಳು ಬರಬೇಕು ಹಾಗೂ ಅದರ ಮಾಹಿತಿಯನ್ನು ಯಾವಾಗಲೂ ತಿಳಿಸುತ್ತಿರಬೇಕು .


ಮೊದಲಿನಂತೆ ಕೊಕ್ಕೋ, ಕಬಡ್ಡಿ, ಕ್ರಿಕೆಟ್ ಎಲ್ಲಾ ಆಟಗಳನ್ನು ಆಟದ ಮೈದಾನದಲ್ಲಿ ತುಂಬಾ ಸಮಯದವರೆಗೂ ಆಡುವಂತಹ, ಇಂಟರ್ನೆಟ್ ರಹಿತ ಪರಿಸ್ಥಿತಿ ಮರುಕಳಿಸಬೇಕು,

ಓದುವುದು ತಪ್ಪಲ್ಲ ಹಾಗಂತ ಇನ್ನುಳಿದ ಸಾಂಸ್ಕೃತಿಕ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗದೇ ಇರುವುದು ಮಾತ್ರ ತುಂಬಾ ತಪ್ಪು, ತಾವು ಚಿಕ್ಕವರಿದ್ದಾಗ ಕಲಿತ ರಂಗೋಲಿ, ಹಾಡುಗಳು, ಅಥವಾ ಡ್ರಾಯಿಂಗ್ ಮಾಡೋ ರೀತಿಯೋ, ಆಡಿದ ಆಟಗಳು, ಅಮ್ಮನಿಗೆ ಮಾಡಿದ ಚಿಕ್ಕ ಪುಟ್ಟ ಸಹಾಯ ಅಪ್ಪನೊಂದಿಗೆ ಬ್ಯಾಂಕಿಗೆ ಹೋದ ಅನುಭವ ಇವೆಲ್ಲವೂ ಸಣ್ಣ ವಿಚಾರಗಳ ಆದರೂ ಕೂಡ ಮಧುರ ಅನುಭವಗಳು. ಹೀಗೆ ಕಲಿತ ಹಾಡುಗಳು ಮುಂದೆ ಅವರ ಕಾಲೇಜಿನ ದಿನಗಳಲ್ಲಿ ಪ್ರಾರ್ಥನೆ ಹಾಡಲು ಅಥವಾ ರಂಗೋಲಿ ಹಾಕಲು ಉಪಯೋಗವಾಗುತ್ತದೆ .

ನಾವು ಚಿಕ್ಕವರಿದ್ದಾಗ ಮಣ್ಣಿನಲ್ಲಿ ಆಟ ಆಡುವಾಗ ಅದರಿಂದ ಬರುತ್ತಿದ್ದ ಸುವಾಸನೆಯು ಈಗ ಮಳೆ ಬಂದರೆ ನಮ್ಮ ಬಾಲ್ಯವನ್ನು ನೆನಪಿಸುತ್ತದೆ, ಬಿದ್ದಾಗ ಆಗಿದ್ದ ಗಾಯಗಳು, ಒಂದು ಅಥವಾ ಎರಡು ರೂಪಾಯಿ ಕೊಟ್ಟು,ಕೊಂಡು ತಿನ್ನುತ್ತಿದ್ದ ಹಣ್ಣುಗಳು, ಚಾಕ್ಲೇಟ್ಗಳು ಹುಣಸೆಹಣ್ಣಿನ ಕುಟ್ಟುಂಡಿ, ನಿಂಬೆಹುಳಿ ಪೆಪ್ಪರ್ ಮೆಂಟ್, ದಾರಿಯಲ್ಲಿ ಬರುತ್ತಿದ್ದ ಅಜ್ಜಿ ಕೂದಲು, ಹೀಗೆ ಎಲ್ಲವೂ ಚಿಕ್ಕ ಖುಷಿಗಳೇ ಆದರೆ ದೊಡ್ಡ ನೆನಪು. ಹೀಗೆ ಬೀದಿಯಲ್ಲಿ ಬೆಳೆದು,ದಾರಿಯಲ್ಲಿ ಬರುತ್ತಿದ್ದ ದಿನಸುಗಳನ್ನು ತಿಂದರೂ ಕೂಡ ನಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಇತ್ತು, ಈ ರೀತಿಯಾಗಿ ನಮ್ಮ ಮಕ್ಕಳು ಬೆಳೆದರೆ ಎಷ್ಟು ಸಂತೋಷ ಅಲ್ಲವೇ. ಆದರೆ ಈಗ ಯಾರನ್ನು ನಂಬದಂತಹ, ಗೊತ್ತಿರುವವರ ಮನೆಗೂ ಕೂಡ ಮಕ್ಕಳನ್ನು ಕಳಿಸದಂತಹ ಸ್ಥಿತಿ ಉಂಟಾಗಿದೆ..

ಮನೆಯಲ್ಲಿ ಅಪ್ಪ ಅಮ್ಮ ಕಷ್ಟ ಪಡುವುದನ್ನು ಮಕ್ಕಳಿಗೆ ತಿಳಿಸುವುದೇ ಬೇಡ ಅಂದುಕೊಳ್ಳುವುದು ಕೂಡ ನನ್ನ ಪ್ರಕಾರ ತಪ್ಪು ಅನಿಸುತ್ತದೆ, ಕಷ್ಟದ ಅನುಭವ ತಿಳಿಯದಿದ್ದರೆ ಅವರಿಗೆ ದುಡ್ಡಿನ ಬೆಲೆ ಗೊತ್ತಾಗುವುದಿಲ್ಲ, ಬೆಲೆ ಗೊತ್ತಿದ್ದರೆ ಖರ್ಚು ಮಾಡುವಾಗ ಹಿಡಿತವಿರುತ್ತದೆ. ಅವರ ಮೇಲಿರುವ ಗೌರವೂ ಕೂಡ ದುಪ್ಪಟ್ಟಾಗುತ್ತದೆ ಅವರ ಕಷ್ಟಪಡುವುದು ನಮಗಾಗಿ ಅಲ್ಲವೇ ಎನ್ನುವ ಪ್ರೀತಿ ಹೆಚ್ಚುತ್ತೆ,ಜವಾಬ್ದಾರಿ ಕೂಡ ಇರುತ್ತದೆ.


ಜೀವನವು ಯಾಂತ್ರಿಕವಾಗದೆ ಮಕ್ಕಳು ಕೂಡ ತಮ್ಮ ಜೀವನವನ್ನು ಜೀವಿಸುವಂತೆ ಇರಲಿ, ಹಾಡು ಕುಣಿತ ಮಕ್ಕಳೊಂದಿಗೆ ಜಗಳ ಮತ್ತೆ ಒಂದಾಗುವಿಕೆ .. ಹೀಗೆ ಪ್ರತಿಯೊಂದನ್ನು ಮಕ್ಕಳು ಸಂತೋಷದಿಂದ ಅನುಭವಿಸಬೇಕು.

ನಂದಿನಿ ವಿವೇಕ್.
ಹೊಸದುರ್ಗ

  • ಕಬಿನಿ ಹಿನ್ನೀರಿನಲ್ಲಿ ಮುಳುಗಿ ಅರಣ್ಯ ರಕ್ಷಕ ಸಾವು
    by Team Varthaman
  • SSLC ಫಲಿತಾಂಶ : ದಾಖಲೆಯ 94.10% ಉತ್ತೀರ್ಣತೆ
    by Team Varthaman
  • ಬೆಂಗಳೂರಿನ ಒನ್8 ಕಮ್ಯೂನ್‌ಗೆ ಬೀಗ
    by Team Varthaman
  • ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ಬಳಿಕ ಸಾವು
    by Team Varthaman
  • ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮತದಾನ
    by Team Varthaman
ನೀವು ಯಾರಿಗೂ ಸರಿಯಾಗಿ ಅರ್ಥ ಆಗಿಲ್ಲವೇ..‌‌‌?
“ಸೀಮಾತೀತ ಸ್ವಾದದ ಸೀಬೆಯ ಸೊಬಗು ಬಲ್ಲಿರಾ?”
ಕರುಣೆಯ ವಾರಿಧಿ ನಮ್ಮ ಗುರುನಾಥ
” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
ತಾಯ್ತಂದೆಯರ ಪ್ರೀತಿಗೆ ಸಮವುಂಟೇ?
TAGGED:childhoodchildrens storiesಮಕ್ಕಳ ಬಾಲ್ಯ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

SIT ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಕಾಪಾಡಬೇಕು – ಸ್ಪೀಕರ್ ಯು.ಟಿ. ಖಾದರ್

Team Varthaman
Team Varthaman
August 13, 2025
ಖ್ಯಾತ ನಿರ್ದೇಶಕ ಪ್ರೇಮ್‌ಗೆ ಎಮ್ಮೆ ಕೊಡಿಸುವ ನೆಪದಲ್ಲಿ ₹4.5 ಲಕ್ಷ ವಂಚನೆ
ಆರೋಗ್ಯ ಇಲಾಖೆಯಲ್ಲಿ 6,770 ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿ
ಯುವರಾಜ್‌ ಸಿಂಗ್, ರಾಬಿನ್‌ ಉತ್ತಪ್ಪಗೆ ED ನೋಟಿಸ್‌
ಉಬರ್, ರಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?