ಮುಂಬೈ: ನಕಲಿ ದಾಖಲೆಗಳ ಸಹಾಯದಿಂದ ಅಕ್ರಮವಾಗಿ ಭಾರತದಲ್ಲಿ ವಾಸವಿದ್ದ 17 ಬಾಂಗ್ಲಾದೇಶಿ ಪ್ರಜೆಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ವಾಸಿಸುತ್ತಿದ್ದ ಈ ಪ್ರಜೆಗಳು ಭಾರತೀಯ ನಾಗರಿಕರಾಗಿರುವುದಕ್ಕೆ ಯಾವುದೇ ಪ್ರಾಮಾಣಿಕ ಪುರಾವೆ ನೀಡಲು ಸಾಧ್ಯವಾಗದ ಕಾರಣ, ಪೊಲೀಸರು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಭಾರತದ ಒಳಗೆ ಪ್ರವೇಶಿಸಲು ಮಾನ್ಯ ದಾಖಲೆಗಳಿಲ್ಲದೆ ವಾಸಿಸುವ ವಿದೇಶಿ ಪ್ರಜೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
24/03/2025 ರಂದು ಮುಂಬೈನ ಶಿವಾಜಿನಗರ ಪೊಲೀಸ್ ಠಾಣೆಯ ಪೊಲೀಸ್ ತಂಡಕ್ಕೆ ದೊರೆತ ಗೌಪ್ಯ ಮಾಹಿತಿಯ ಅನ್ವಯ, ಶಂಕಿತ ವ್ಯಕ್ತಿಗಳನ್ನು ಬಲೆ ಹಾಕುವ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ತನಿಖೆಯ ನಂತರ ಅವರು ಬಾಂಗ್ಲಾದೇಶದ ಪ್ರಜೆಗಳಾಗಿರುವುದು ದೃಢಪಟ್ಟಿದೆ. ಅವರ ವಿರುದ್ಧ ವಿದೇಶಿ ಪ್ರಜೆಗಳ ಆದೇಶ 1948 ಮತ್ತು ಪಾಸ್ (ಭಾರತ ಪ್ರವೇಶ) ನಿಯಮ 1950 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದೇ ರೀತಿ, 25/03/2025 ರಂದು RCF ಪೋಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿ, ಬಾಂಗ್ಲಾದೇಶದ ಪ್ರಜೆಗಳಾಗಿರುವ ಅನುಮಾನಿತ 09 ಜನರನ್ನು (04 ಪುರುಷರು, 05 ಮಹಿಳೆಯರು) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ.