By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Sports > IPL 2025 > IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!
IPL 2025SportsTrending

IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!

Team Varthaman
Last updated: March 31, 2025 1:31 PM
Team Varthaman
Published: March 22, 2025
Share
SHARE

ಕೋಲ್ಕತಾ: ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 7 ವಿಕೆಟ್‌ ಸೋಲುಣಿಸಿದ ಆರ್‌ಸಿಬಿ 18ನೇ IPL ಪಂದ್ಯಾವಳಿಯನ್ನು ಅಧಿಕಾರಯುತವಾಗಿ ಆರಂಭಿಸಿದೆ. ರಜತ್‌ ಪಾಟಿದಾರ್‌ ನಾಯಕತ್ವಕ್ಕೂ ಗೆಲುವಿನ ಆರಂಭ ಲಭಿಸಿತು.

ಶನಿವಾರ ಈಡನ್‌ ಗಾರ್ಡನ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್‌ 8 ವಿಕೆಟಿಗೆ 174 ರನ್‌ ಗಳಿಸಿದರೆ, ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

Contents
  • ಕೋಲ್ಕತಾ: ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 7 ವಿಕೆಟ್‌ ಸೋಲುಣಿಸಿದ ಆರ್‌ಸಿಬಿ 18ನೇ IPL ಪಂದ್ಯಾವಳಿಯನ್ನು ಅಧಿಕಾರಯುತವಾಗಿ ಆರಂಭಿಸಿದೆ. ರಜತ್‌ ಪಾಟಿದಾರ್‌ ನಾಯಕತ್ವಕ್ಕೂ ಗೆಲುವಿನ ಆರಂಭ ಲಭಿಸಿತು.
  • ರಹಾನೆ ವೇಗದ ಅರ್ಧ ಶತಕ

ಆರ್‌ಸಿಬಿಗೆ ಸಾಲ್ಟ್-ಕೊಹ್ಲಿ ಪ್ರಚಂಡ ಆರಂಭ ಒದಗಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಸಾಲ್ಟ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಸಿಡಿತಕ್ಕೆ ನಾಂದಿ ಹಾಡಿದರು.

ಪವರ್‌ ಪ್ಲೇಯಲ್ಲಿ ಬರೋಬ್ಬರಿ 80 ರನ್‌ ಹರಿದು ಬಂತು. ಇದು ಮೊದಲ 6 ಓವರ್‌ಗಳಲ್ಲಿ ಆರ್‌ಸಿಬಿ ದಾಖಲಿಸಿದ 2ನೇ ಅತ್ಯಧಿಕ ಗಳಿಕೆ. ಸಾಲ್ಟ್ ಆರ್‌ಸಿಬಿ ಪರ ಆಡಿದ ಪದಾರ್ಪಣ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ವಿಕೆಟಿಗೆ 8.3 ಓವರ್‌ಗಳಿಂದ 95 ರನ್‌ ಒಟ್ಟುಗೂಡಿತು. ಇದರಲ್ಲಿ ಸಾಲ್ಟ್ ಕೊಡುಗೆ 31 ಎಸೆತಗಳಿಂದ 56 ರನ್‌ (9 ಬೌಂಡರಿ, 2 ಸಿಕ್ಸರ್‌). 10 ಓವರ್‌ಗಳಲ್ಲಿ ತಂಡದ ಸ್ಕೋರ್‌ 104ಕ್ಕೆ ಏರಿತು.

ಈ ನಡುವೆ ಕೊಹ್ಲಿ ಕೆಕೆಆರ್‌ ವಿರುದ್ಧ ಸಾವಿರ ರನ್‌ ಪೂರ್ತಿಗೊಳಿಸಿದರು. ಕೊಹ್ಲಿ ಕೊಡುಗೆ ಅಜೇಯ 59 ರನ್‌ (36 ಎಸೆತ, 4 ಬೌಂಡರಿ, 3 ಸಿಕ್ಸರ್‌). ನಾಯಕ ರಜತ್‌ ಪಾಟಿದಾರ್‌ ರಭಸದ ಬ್ಯಾಟಿಂಗ್‌ ಮೂಲಕ 34 ರನ್‌ ಬಾರಿಸಿದರು (16 ಎಸೆತ, 5 ಬೌಂಡರಿ, 1 ಸಿಕ್ಸರ್‌).

ರಹಾನೆ ವೇಗದ ಅರ್ಧ ಶತಕ

ಕೆಕೆಆರ್‌ಗೆ ವೇಗಿ ಜೋಶ್‌ ಹೇಝಲ್‌ವುಡ್‌ ಆರಂಭಿಕ ಓವರ್‌ನಲ್ಲೇ ಆಘಾತವಿಕ್ಕಿದರು. ಅಪಾಯಕಾರಿ ಆರಂಭಕಾರ ಕ್ವಿಂಟನ್‌ ಡಿ ಕಾಕ್‌ (4) ಅವರನ್ನು 5ನೇ ಎಸೆತದಲ್ಲೇ ಪೆವಿಲಿಯನ್‌ಗೆ ರವಾನಿಸಿದರು. ಇದಕ್ಕೂ ಮುನ್ನ ಅವರು ಈ ಐಪಿಎಲ್‌ನ ಬೌಂಡರಿ ಖಾತೆ ತೆರೆದಿದ್ದರು. ದ್ವಿತೀಯ ವಿಕೆಟಿಗೆ ಜತೆಗೂಡಿದ ಸುನೀಲ್‌ ನಾರಾಯಣ್‌ ಮತ್ತು ಇದೇ ಮೊದಲ ಸಲ ಕೆಕೆಆರ್‌ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆ ಸೇರಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ಪವರ್‌ ಪ್ಲೇಯಲ್ಲಿ 65 ರನ್‌ ಬಂತು. ಈ ಜೋಡಿಯಿಂದ ಕೇವಲ 55 ಎಸೆತಗಳಿಂದ 103 ರನ್‌ ಒಟ್ಟುಗೂಡಿತು. ಅಂತಿಮವಾಗಿ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 174 ರನ್‌ಗಳಿಸಿತು.

ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ 29ಕ್ಕೆ 3 ವಿಕೆಟ್‌ ಕೆಡವಿ ಹೆಚ್ಚಿನ ಯಶಸ್ಸು ಕಂಡರು. ಹೇಝಲ್‌ವುಡ್‌ ಪಂದ್ಯದ ಮೊದಲ ಹಾಗೂ ಅಂತಿಮ ಓವರ್‌ಗಳಲ್ಲಿ ವಿಕೆಟ್‌ ಕೆಡವಿದರು.

  • ಬಿಡದಿ ಟೌನ್‌ಶಿಪ್‌: ಭೂಮಿ ನೀಡುವ ರೈತರ ಜಮೀನು ಪಡೆಯುತ್ತೇವೆ – ಡಿಕೆಶಿ
    by Team Varthaman
    August 11, 2026
    ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ… Read more: ಬಿಡದಿ ಟೌನ್‌ಶಿಪ್‌: ಭೂಮಿ ನೀಡುವ ರೈತರ ಜಮೀನು ಪಡೆಯುತ್ತೇವೆ – ಡಿಕೆಶಿ
  • ರಾಜ್ಯಕ್ಕೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು?
    by Team Varthaman
    August 11, 2026
    ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಮುಂದಿನ… Read more: ರಾಜ್ಯಕ್ಕೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು?
  • ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ
    by Team Varthaman
    August 11, 2026
    ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು,… Read more: ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ
  • ‘ಸಂವಿಧಾನ ಬಿಕ್ಕಟ್ಟು ಸೃಷ್ಟಿಸಲು ವಿಪಕ್ಷಗಳ ಸಂಚು’: ಡಿಕೆಶಿ ಆರೋಪ
    by Team Varthaman
    August 10, 2026
    ನವದೆಹಲಿ: ವಿಧಾನ ಪರಿಷತ್ತಿನ ನೂತನ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ… Read more: ‘ಸಂವಿಧಾನ ಬಿಕ್ಕಟ್ಟು ಸೃಷ್ಟಿಸಲು ವಿಪಕ್ಷಗಳ ಸಂಚು’: ಡಿಕೆಶಿ ಆರೋಪ
  • ‘ಆಪರೇಷನ್ ಮುಕ್ತ’; 4 ಶಂಕಿತ ಬಾಂಗ್ಲಾದೇಶಿ ವಶಕ್ಕೆ
    by Team Varthaman
    August 8, 2026
    ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳ ಪತ್ತೆಗೆ ಬೆಂಗಳೂರಿನಲ್ಲಿ ವೈಟ್‌ಫೀಲ್ಡ್ ಪೊಲೀಸರು ಭರ್ಜರಿ… Read more: ‘ಆಪರೇಷನ್ ಮುಕ್ತ’; 4 ಶಂಕಿತ ಬಾಂಗ್ಲಾದೇಶಿ ವಶಕ್ಕೆ

ipl

ರೈಲ್ವೆ ಇಲಾಖೆ: 9970 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ
ಮಂಜುಳಾ ಬಿ. ಸಿ. ನಿಧನ
‘ಕಲ್ಯಾಣ ಕರ್ನಾಟಕ’ ಅಭಿವೃದ್ಧಿಗೆ ₹5,000 ಕೋಟಿ ಮೀಸಲು: ಮುಖ್ಯಮಂತ್ರಿ ಸಿದ್ದರಾಮಯ್ಯ
ನಂಬರ್‌ ಪ್ಲೇಟ್ ಇಲ್ಲದೇ ವಾಹನ ಚಲಾಯಿಸಿದರೆ ವಂಚನೆ ಕೇಸ್ ದಾಖಲು
ಡಿಪ್ಲೋಮಾ ವಿದ್ಯಾರ್ಥಿಗೆ ಹೃದಯಾಘಾತ – ಸ್ಥಳದಲ್ಲೇ ದುರ್ಮರಣ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

“ಅಕ್ಷರಗಳ ಮೇಲಿನ‌ ಅತ್ಯಾಚಾರ”

Team Varthaman
Team Varthaman
April 25, 2026
ರೈಲ್ವೆ ಇಲಾಖೆ: 9970 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ
ಯುವಜನರಿಂದ ಭಾರತ ಮುಂಚೂಣಿಗೆ
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮೈಸೂರಿನೆಲ್ಲೆಡೆ ಯೋಗಾ ಯೋಗ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?