ಮೈಸೂರು: ಮೈಸೂರಿನ ಹೆಚ್.ಡಿ. ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಶನಿವಾರ ಮಾನಸಿಕ ಆಘಾತಕ್ಕೆ ಒಳಗಾಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಕುಟುಂಬದ ಹೆಗ್ಗಳಿಕೆಗೆ ಧಕ್ಕೆಯಾದಂತ ಶೋಕಾಂತಿಕೆಯಲ್ಲಿ ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಮರಣವಪ್ಪಿಕೊಂಡಿದ್ದಾರೆ.
ಮೃತರು ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ ಮತ್ತು ಕಿರಿಯ ಮಗಳು ಹರ್ಷಿತಾ. ಮಹದೇವಸ್ವಾಮಿ ಅವರ ಎರಡು ಹೆಣ್ಣುಮಕ್ಕಳಲ್ಲಿ, ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು, ಮತ್ತೊಬ್ಬಳು ಬಿ.ಸಿ.ಎ. ವ್ಯಾಸಂಗ ಮಾಡುತ್ತಿದ್ದಳು.
ಅರ್ಪಿತಾ ತನ್ನ ಸಮುದಾಯದ ಹೊರಗಿನ ಯುವಕನ ಜೊತೆ ಪ್ರೀತಿಸುತ್ತಿದ್ದಾಳೆ ಮತ್ತು ಆತನನ್ನು ಮದುವೆಯಾಗುವುದೆಂದು ತೀರ್ಮಾನಿಸಿದ್ದಳು. ಇದನ್ನು ತಿರಸ್ಕರಿಸಿದ ತಂದೆ ಮಹದೇವಸ್ವಾಮಿ, ಕುಟುಂಬದ ಮಾನ-ಮರ್ಯಾದೆ ಹಾಳಾಗುತ್ತದೆ ಎಂಬ ಆತಂಕದಿಂದ, ಪತ್ನಿ ಮತ್ತು ಕಿರಿಯ ಪುತ್ರಿಯೊಂದಿಗೆ ಆತ್ಮಹತ್ಯೆಗೆ ಶರಣಾಗಲು ತೀರ್ಮಾನಿಸಿದ್ದಾರೆ.

ಮಹದೇವಸ್ವಾಮಿ ತಮ್ಮ ಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿ ಹೆಚ್.ಡಿ. ಕೋಟೆಯಲ್ಲಿ ವಾಸವಿದ್ದರೂ, ಈ ಶೋಕಾಂತಿಕೆಯನ್ನು ತಡೆಗಟ್ಟಲಾಗಲಿಲ್ಲ. ಅರ್ಪಿತಾ ಮನೆ ಬಿಟ್ಟು ಹೋಗಿದ್ದರಿಂದ ಮನಸ್ಸು ಭಾರವಾದ ಮಹದೇವಸ್ವಾಮಿ ಅವರು ಮರ್ಯಾದೆ ಹಾಳಾಗಿದೆ ಎಂಬ ಭಾವನೆಗೆ ಒಳಗಾಗಿ, ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಎಲ್ಲರೂ ಕೆರೆಗೆ ಹಾರಿದ್ದಾರೆ.
ಮೃತದೇಹಗಳ ಮರಣೋತ್ತರ ಪರೀಕ್ಷೆ ಮಳೆಯ ನಡುವೆ ಶನಿವಾರ ರಾತ್ರಿ ನಡೆಯಿತು. ನಂತರ, ಅವರದೇ ಜಮೀನಿನಲ್ಲಿ ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಇದನ್ನು ಓದಿ –ರಾಜ್ಯದಲ್ಲಿ ಕೊರೋನಾಗೆ ಮೊದಲ ಬಲಿ
ಇಡೀ ಘಟನೆಗೆ ಕಾರಣವೆನ್ನಲ್ಪಟ್ಟಿರುವ ಅರ್ಪಿತಾ ಅಂತಿಮ ದರ್ಶನಕ್ಕೂ ಹಾಜರಾಗಿಲ್ಲ. ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ನಿರ್ಧಾರದಿಂದ ಕುಟುಂಬವೇ ಸಾಯಬೇಕಾಯಿತು ಎಂಬ ಕಾರಣಕ್ಕೆ ಕಠಿಣವಾಗಿ ಟೀಕಿಸಿದ್ದಾರೆ.