By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಮಿಷನ್ ಆಸ್ಪತ್ರೆ ಕಾರ್ಯಕಲಾಪಕ್ಕೆ ಕಾರ್ಮಿಕರೇ ಅಡ್ಡಿ!
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಮಿಷನ್ ಆಸ್ಪತ್ರೆ ಕಾರ್ಯಕಲಾಪಕ್ಕೆ ಕಾರ್ಮಿಕರೇ ಅಡ್ಡಿ!
KarnatakaMysoreTrending

ಮಿಷನ್ ಆಸ್ಪತ್ರೆ ಕಾರ್ಯಕಲಾಪಕ್ಕೆ ಕಾರ್ಮಿಕರೇ ಅಡ್ಡಿ!

Team Varthaman
Last updated: April 17, 2025 1:15 PM
Team Varthaman
Published: April 17, 2025
Share
SHARE

ಮೈಸೂರು: ೧೧೯ ವರ್ಷಗಳ ಸುದೀರ್ಘ ಇತಿಹಾಸವಿರುವ ಮೈಸೂರಿನ ಹೆಸರಾಂತ ಮಿಷನ್ ಆಸ್ಪತ್ರೆ (ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆ)ಯ ಕಾರ್ಯಕಲಾಪಕ್ಕೆ ಅಮಾನತ್ತಿನಲ್ಲಿರುವ ಕೆಲವು ಕಾರ್ಮಿಕರು ಅಡ್ಡಿಪಡಿಸುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಆಡಳಿತಾಧಿಕಾರಿ ರೆವರೆಂಡ್ ಎಲಿಶ್ ಕುಮಾರ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು.

ದಯಾಪ್ರಕಾಶ್, ವಿಲ್ಸನ್ ಪ್ರಭಾಕರ್, ಮಂಜುನಾಥ್, ಪಾಲ್ ಡೇವಿಡ್, ಪ್ರಕಾಶ್ ಬಾಬು, ಮ್ಯಾಥ್ಯೂ, ಶಂಕರ್ ಎಂಬವರೇ ಆಸ್ಪತ್ರೆ ಆಡಳಿತ ಮತ್ತು ಕಾರ್ಯ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವುದಲ್ಲದೇ, ಕಾರ್ಮಿಕರನ್ನು ಆಡಳಿತ ಮಂಡಳಿ ವಿರುದ್ಧ ಎತ್ತಿ ಕಟ್ಟಿ ಸುಖಾ ಸುಮ್ಮನೆ ಪ್ರತಿಭಟನೆ ನಡೆಸುವುದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಪಪ್ರಚಾರ ಮಾಡುವುದು ಮತ್ತು ವೈದ್ಯರು, ದಾದಿಯರು ಮತ್ತಿತರ ಕೆಲಸಗಾರರಿಗೂ ಅನಗತ್ಯ ಕಿರುಕುಳ ನೀಡಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದನ್ನು ಕಳೆದ ಹಲವಾರು ತಿಂಗಳಿನಿಂದ ಮಾಡುತ್ತಿದ್ದಾರೆ.

Join WhatsApp Group

ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ವೈದ್ಯರು ಮತ್ತು ದಾದಿಯರಿಗೂ ಕಿರುಕುಳ ನೀಡಿ ಕೆಲಸಕ್ಕೆ ಬಾರದಂತೆ ತಡೆ ಒಡ್ಡುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಎಲಿಷ್ ಕುಮಾರ್ ತಮ್ಮ ದೂರಿನಲ್ಲಿ ಒತ್ತಾಯಿಸಿದರು.

ಅಲ್ಲದೇ, ಕೆಲವು ಕಾರ್ಮಿಕರು ಕಳೆದ ಹಲವಾರು ತಿಂಗಳಿನಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ, ಆಸ್ಪತ್ರೆ ಆವರಣದಲ್ಲಿ ಬೀಡುಬಿಟ್ಟು ನಿತ್ಯವೂ ಪ್ರತಿಭಟನೆ ನಡೆಸುತ್ತಾ ವೈದ್ಯರಿಗೆ, ಸಿಬ್ಬಂದಿಗೆ ಕಿರುಕುಳ ನೀಡುತ್ತಾರೆ. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದಿಲ್ಲ ಮತ್ತು ಕೆಲಸಕ್ಕೂ ಹಾಜರಾಗುವುದಿಲ್ಲ, ನಂತರ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಸಂಬಳ ಕೊಡಿ ಎನ್ನುತ್ತಾರೆ. ಕೆಲಸವನ್ನೇ ಮಾಡದೆ ಸಂಬಳ ಕೊಡಲು ಹೇಗೆ ಸಾಧ್ಯ ಇದಕ್ಕೆ ಆಸ್ಪತ್ರೆ ಆಡಳಿತ ಒಪ್ಪುವುದಿಲ್ಲ ಎಂದು ಹೇಳಿದರೆ ನಮ್ಮ ಮೇಲೆ ಗಲಾಟೆ ಮಾಡುತ್ತಾರೆ. ಇದನ್ನು ಓದಿ –ಉದ್ಯೋಗ ಮಾರುಕಟ್ಟೆಯಲ್ಲೀಗ ಹೆಚ್ಚಿದ ಸ್ಪರ್ಧೆ: ಡಾ.ಎಂ.ಬಿ.ಬೋರಲಿಂಗಯ್ಯ

ಇದು ದಿನ ನಿತ್ಯವೂ ನಡೆಯುತ್ತಿದೆ. ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆಯು ಒಂದು ಚಾರಿಟಿ ಆಸ್ಪತ್ರೆಯಾಗಿದ್ದು, ಕರ್ತವ್ಯ ನಿರ್ವಹಿಸದೆ ಕೇವಲ ಗಲಾಟೆ ಮಾಡುತ್ತಿರುವ ಕೆಲವು ಕಾರ್ಮಿಕರನ್ನು ಆಡಳಿತ ಮಂಡಳಿ ಅಮಾನತ್ತಿನಲ್ಲಿ ಇಟ್ಟಿದೆ. ಆಸ್ಪತ್ರೆ ಆದಾಯ ಕಡಿಮೆಯಾದರೂ ನಾವು ನೌಕರರಿಗೆ ಸಂಬಳ ನೀಡಿದ್ದೇವೆ. ಕೆಲವು ತಿಂಗಳ ಸಂಬಳ ಬಾಕಿ ಇದ್ದು, ಆಸ್ಪತ್ರೆಯು ಆರ್ಥಿಕ ಮುಗ್ಗಟ್ಟಿನಲ್ಲಿ ಇರುವ ಕಾರಣ ಕೆಲವು ದಿನಗಳ ನಂತರ ಬಾಕಿ ವೇತನವನ್ನೂ ಪಾವತಿಸುವುದಾಗಿ ಹೇಳಿದ್ದೇವೆ. ಆದಾಗ್ಯೂ ನಮಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದರು.

  • ವೋಟರ್ ಲಿಸ್ಟ್ ಪರಿಷ್ಕರಣೆ : ಹೆಸರು ಅಳಿದರೆ ಗ್ಯಾರಂಟಿ ಗೆ ಕತ್ತರಿ?
    by Team Varthaman
    June 29, 2026
  • ಭಾರಿ ಮಳೆಯ ಮುನ್ಸೂಚನೆ : ಯೆಲ್ಲೋ ಅಲರ್ಟ್ ಘೋಷಣೆ
    by Team Varthaman
    June 29, 2026
  • ರಾಮ ಮಂದಿರ ಪ್ರಕರಣ: ವಕಾಲತ್ತು ವಹಿಸದಿರಲು ನಿರ್ಧಾರ
    by Team Varthaman
    June 29, 2026
  • ರಾಜ್ಯದಲ್ಲಿ ಮತ್ತೆ ಬಸ್‌ ಟಿಕೆಟ್ ದರ ಏರಿಕೆ ಸಾಧ್ಯತೆ
    by Team Varthaman
    June 27, 2026
  • ಪಾಸ್‌ಪೋರ್ಟ್ ಶುಲ್ಕ ಏರಿಕೆ: ಹೊಸ ದರಗಳು ತಕ್ಷಣದಿಂದಲೇ ಜಾರಿ
    by Team Varthaman
    June 25, 2026
ಜಿಲ್ಲೆಯ ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಡಾ. ಕುಮಾರ
ಅರಮನೆ ಮೈದಾನ ಭೂಮಿಗೆ 3,400 ಕೋಟಿ ಟಿಡಿಆರ್ ನೀಡಲು ಸುಪ್ರೀಂ ಕೋರ್ಟ್ ಆದೇಶ
ಬ್ರಾಂಡೆಡ್ ಔಷಧಿಗಳಿಗೆ 100% ಸುಂಕ
IND- PAK ಉದ್ವಿಗ್ನತೆ: ಬಂದ್ ಆಗಿದ್ದ 32 ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾರಂಭಕ್ಕೆ ಸಿದ್ಧ
SIT ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಕಾಪಾಡಬೇಕು – ಸ್ಪೀಕರ್ ಯು.ಟಿ. ಖಾದರ್
TAGGED:constructionlatestnewsMission HospitalMysore News
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruEducationKarnataka

SSLC ತೃತೀಯ ಭಾಷೆ ಗ್ರೇಡಿಂಗ್ ವಿವಾದ: ‘ಹೈ’ ಮೆಟ್ಟಿಲೇರಿದ ನಿರ್ಧಾರ

Team Varthaman
Team Varthaman
April 2, 2026
ಲಂಚಕ್ಕೆ ಬೇಡಿಕೆ; ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರ ಬಂಧನ
CM ಸಿದ್ದರಾಮಯ್ಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಿಂದನೆ – ನಿವೃತ್ತ ಯೋಧ ಬಂಧನ
SSLC ಪರೀಕ್ಷೆ ಅಂಕಗಳಲ್ಲಿ ಬದಲಾವಣೆ: 625ರಿಂದ 525ಕ್ಕೆ ಇಳಿಕೆ
ರೈಲ್ವೆ ಇಲಾಖೆಯಲ್ಲಿ 6374 ತಂತ್ರಜ್ಞ ಹುದ್ದೆಗಳಿಗೆ ನೇಮಕಾತಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?