ಬೆಂಗಳೂರು: ನಿಯಮಗಳನ್ನು ಪಾಲಿಸದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳ ವಿರುದ್ಧ ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಟ್ಟು 89 ಪಿಜಿಗಳಿಗೆ ₹61 ಸಾವಿರ ದಂಡ ವಿಧಿಸಲಾಗಿದ್ದು, 19 ಪಿಜಿಗಳ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು, ಸಿಸಿಟಿವಿ ಅಳವಡಿಕೆ ಮತ್ತು ಆಹಾರ ಸುರಕ್ಷತಾ ಪ್ರಮಾಣಪತ್ರ ಸೇರಿದಂತೆ ವಿವಿಧ ಮಾನದಂಡಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅನೇಕ ಪಿಜಿಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ.
ನ್ಯೂನತೆಗಳು ಕಂಡುಬಂದ ಪಿಜಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗಿದ್ದು, ಗಂಭೀರ ಉಲ್ಲಂಘನೆ ಮಾಡಿದ 19 ಪಿಜಿಗಳ ಮೆಸ್‌ಗಳಿಗೆ ಬೀಗ ಜಡಿಸಲಾಗಿದೆ.
ಪ್ರದೇಶವಾರು ಕ್ರಮ:
ಪದ್ಮನಾಭನಗರ: 3 ಪಿಜಿಗಳ ಪರಿಶೀಲನೆ; ₹5 ಸಾವಿರ ದಂಡ
ಜಯನಗರ: 13 ಪಿಜಿಗಳ ಪರಿಶೀಲನೆ; ₹11 ಸಾವಿರ ದಂಡ; 3 ಮೆಸ್‌ಗಳಿಗೆ ಬೀಗ
ಬೆಂಗಳೂರು ದಕ್ಷಿಣ: 18 ಪಿಜಿಗಳ ಪರಿಶೀಲನೆ; ₹9 ಸಾವಿರ ದಂಡ; 4 ಮೆಸ್‌ಗಳಿಗೆ ಬೀಗ
ಬಿಟಿಎಂ ಲೇಔಟ್: 24 ಪಿಜಿಗಳ ಪರಿಶೀಲನೆ; 3 ಮೆಸ್‌ಗಳಿಗೆ ಬೀಗ
ಬೊಮ್ಮನಹಳ್ಳಿ: 32 ಪಿಜಿಗಳ ಪರಿಶೀಲನೆ; ₹39 ಸಾವಿರ ದಂಡ; 9 ಮೆಸ್‌ಗಳಿಗೆ ಬೀಗ
ಇದನ್ನು ಓದಿ —ಜವಳಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೂನ್ಯ ಸುಂಕ ಸಾಧ್ಯತೆ: ಪಿಯೂಷ್ ಗೋಯಲ್
ಒಟ್ಟಾರೆ 89 ಪಿಜಿಗಳಿಗೆ ದಂಡ ವಿಧಿಸಲಾಗಿದ್ದು, 19 ಅಡುಗೆ ಕೋಣೆಗಳನ್ನು ಮುಚ್ಚಲಾಗಿದೆ.








