- – ಏ.28ರಂದು ವಿಚಾರಣೆ
ಹೈದರಾಬಾದ್: ಸ್ಥಳೀಯ ರಿಯಲ್ ಎಸ್ಟೇಟ್ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತೆಲುಗು ನಟ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಈ ಪ್ರಕರಣವು ಹೈದರಾಬಾದ್‌ನ ವೆಂಗಲ್ ರಾವ್ ನಗರದಲ್ಲಿರುವ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್, ಸುರಾನಾ ಗ್ರೂಪ್ ಮತ್ತು ಇತರ ಕೆಲವು ಕಂಪನಿಗಳ ವಿರುದ್ಧದ ತನಿಖೆಗೆ ಸಂಬಂಧಿಸಿದೆ. ಈ ಪ್ರಕರಣದ ಭಾಗವಾಗಿ ಏಪ್ರಿಲ್ 16ರಂದು ಸಿಕಂದರಾಬಾದ್, ಜುಬಿಲಿ ಹಿಲ್ಸ್ ಮತ್ತು ಬೋವೆನ್‌ಪಲ್ಲಿ ಪ್ರದೇಶಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು.
ಮಹೇಶ್ ಬಾಬು ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂಬ ಶಂಕೆ ಇದ್ದರೂ, ಅವರೂ ಗೊತ್ತಿಲ್ಲದೆ ಈ ವಂಚನೆಯೊಂದಿಗೆ ನಂಟು ಹೊಂದಿರಬಹುದು ಎಂಬ ಅನುಮಾನದಿಂದಾಗಿ ವಿಚಾರಣೆಗೆ ಕರೆಯಲಾಗಿದೆ. ಮಹೇಶ್ ಬಾಬು ಅವರು ಸಾಯಿ ಸೂರ್ಯ ಡೆವಲಪರ್ಸ್ ಕಂಪನಿಯೊಂದಿಗೆ ಸುಮಾರು ₹5.9 ಕೋಟಿಯ ವ್ಯವಹಾರ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನು ಓದಿ –ಭಾರತೀಯ ರೈಲ್ವೆಯಲ್ಲಿ 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದೊಂದು ಪೂರ್ವಜಾಗ್ರತಾ ವಿಚಾರಣೆ ಆಗಿದ್ದು, ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರ ಬೀಳುವ ನಿರೀಕ್ಷೆಯಿದೆ.