ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಗೆ ತಕ್ಷಣ ಪ್ರತೀಕಾರ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಧೃಢ ನಿಲುವು ಪ್ರಕಟಿಸಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರನ್ನು ಭೇಟಿಯಾಗಿ, ಭಯೋತ್ಪಾದಕರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
“ಭಯೋತ್ಪಾದನೆಗೆ ತಕ್ಕ ಪ್ರತೀಕಾರ ನಮ್ಮ ರಾಷ್ಟ್ರದ ಸಂಕಲ್ಪ. ಸೇನೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಸಭೆಯ ಕೆಲವೇ ಸಮಯದ ಬಳಿಕ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡಾ ಪ್ರಧಾನ ಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿದರು.
ಈ ದಾಳಿ 2019 ರ ಪುಲ್ವಾಮಾ ಉಗ್ರ ದಾಳಿಯ ನಂತರ ನಡೆದ ಅತ್ಯಂತ ಭೀಕರ ದಾಳಿ ಎನ್ನಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಜನರು ಹತರಾದ ಹಿನ್ನೆಲೆ, ಭದ್ರತಾ ಪಡೆಗಳಿಂದ ತಕ್ಷಣದ ಮಿಲಿಟರಿ ಪ್ರತಿಕ್ರಿಯೆಗೆ ಪ್ರಧಾನಿ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಇದನ್ನು ಓದಿ –ಎಕ್ಸ್‌ಪ್ರೆಸ್ ವೇನಲ್ಲಿ ಪ್ರವಾಸಿಗರಿಗೆ ಹೊಸ ದಾರಿ: ಕಣ್ವ ಜಂಕ್ಷನ್‌ನಲ್ಲಿ ಎಂಟ್ರಿ-ಎಕ್ಸಿಟ್ ಕಟ್ಟಡಕ್ಕೆ ಕೇಂದ್ರ ಅನುಮತಿ
ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ ನಡೆಸಿದ ಬಾಲಕೋಟ್ ವಾಯುದಾಳಿಯಂತೆಯೇ, ಈ ಬಾರಿ ಕೂಡ ಉಗ್ರರ ತಾಣಗಳನ್ನು ನಿಖರವಾಗಿ ತಡೆದು ಹಾಕುವ ಸಾಧ್ಯತೆ ಇದೆ. ಬಾಲಕೋಟ್ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಸಂಘಟನೆಗಳ ತಾಂಡವ ಶಿಬಿರಗಳು ನಾಶವಾಗಿದ್ದವು.