ನವದೆಹಲಿ, ಮೇ 6: ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಗಾಲಿ ಜನಾರ್ದನ್ ರೆಡ್ಡಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಓಬಳಾಪುರಂ ಮೈನಿಂಗ್ ಕಂಪನಿಯಿಂದ ಉಂಟಾದ ಅಕ್ರಮದಲ್ಲಿ ರೆಡ್ಡಿ ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದೆ.
ಒಮ್ಮೆ ಜೈಲಿನ ಅನುಭವ ಹೊಂದಿದ್ದ ಜನಾರ್ದನ್ ರೆಡ್ಡಿಗೆ ಮತ್ತೆ ಶಿಕ್ಷೆಯಾದ ಹಿನ್ನೆಲೆಯಲ್ಲಿ, ಅವರು ನ್ಯಾಯಾಲಯದ ಮುಂದೆ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. “ನಾನು ಈಗ ಸಾರ್ವಜನಿಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಬಳ್ಳಾರಿ ಹಾಗೂ ಗಂಗಾವತಿ ಜನ ನನ್ನ ಆಯ್ಕೆ ಮಾಡಿದ್ದಾರೆ. ನಾಲ್ಕು ವರ್ಷಗಳಷ್ಟು ಜೈಲಿನಲ್ಲಿದ್ದೇನೆ. ದಯವಿಟ್ಟು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ,” ಎಂದು ಅವರು ವಿನಂತಿಸಿದ್ದಾರೆ.
ಆದರೆ ನ್ಯಾಯಾಧೀಶರು ರೆಡ್ಡಿಯ ಈ ಮನವಿಯನ್ನು ತಿರಸ್ಕರಿಸಿ, “ನೀವು ಜೀವಾವಧಿ ಶಿಕ್ಷೆಗೆ ಕೂಡ ಅರ್ಹರು. ನಿಮಗೆ 10 ವರ್ಷಗಳ ಶಿಕ್ಷೆ ಯಾಕೆ ಕೊಡಬಾರದು?” ಎಂಬ ಪ್ರಖರ ಅಭಿಪ್ರಾಯ ವ್ಯಕ್ತಪಡಿಸಿದರು.ಇದನ್ನು ಓದಿ –ಆಸ್ತಿ ವಿವಾದದಲ್ಲಿ ಅಣ್ಣನಿಂದ ತಮ್ಮನ ಹತ್ಯೆ: ಗುಂಡು ಹಾರಿಸಿ ಕೊಲೆ
ಈ ತೀರ್ಪಿನಿಂದಾಗಿ ಜನಾರ್ದನ್ ರೆಡ್ಡಿಗೆ ಇನ್ನಷ್ಟು ಕಾನೂನು ಸಂಕಷ್ಟಗಳು ಎದುರಾಗಲಿವೆ ಎಂದು ಕಾನೂನು ವೃತ್ತಾಂತಗಾರರು ಅಭಿಪ್ರಾಯಪಟ್ಟಿದ್ದಾರೆ.