- ಗಿಲ್ ನಾಯಕ, ಪಂತ್ ಉಪನಾಯಕ
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ, ಭಾರತದ ಟೆಸ್ಟ್ ತಂಡದ ನಾಯಕರಾಗಿ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಉಪನಾಯಕನ ಸ್ಥಾನಕ್ಕೆ ರಿಷಬ್ ಪಂತ್ ನೇಮಕಗೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ, 67 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿ 11 ವರ್ಷಗಳ ಕಾಲ ಅತ್ಯುತ್ತಮ ವೃತ್ತಿಜೀವನ ನಡೆಸಿದ ಬಳಿಕ, 2025ರ ಮೇ 7 ರಂದು ಅವರು ನಿವೃತ್ತಿ ಘೋಷಿಸಿದ್ದರು.
ಇದನ್ನು ಓದಿ –ಕರ್ನಾಟಕ ಯುಜಿಸಿಇಟಿ 2025 ಫಲಿತಾಂಶ ಪ್ರಕಟ
ಈ ಹಿಂದೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನಿತ್ತಿದ್ದ ಗಿಲ್ ಮತ್ತು ಪಂತ್ ಇಬ್ಬರೂ ಇದೀಗ ನಾಯಕತ್ವ ಹೊಣೆಗಾರಿಕೆಗೆ ತಯಾರಾಗಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಈ ಹೊಸ ನಾಯಕತಂಡದತ್ತ ನಿರೀಕ್ಷೆಗಳಿಂದ ನೋಟ ಹಾಕುತ್ತಿದ್ದಾರೆ.