ಮಾಗಡಿ : ತಾಲೂಕಿನ ಒಕ್ಕಲಿಗರ ಸಂಘದ ನಿರ್ದೇಶಕರು ಸೀಬೇಗೌಡರು ಕಾರ್ಯನಿಮಿತ್ತ ಕುಣಿಗಲ್ ಗೆ ತೆರಳುತ್ತಿದ್ದಾಗ ಒನ್ ವೇ ನಲ್ಲಿ ಕಾರ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕ್ಯಾಂಟರ್ ಚಾಲಕನ ಅಜಾಗರೂಕತೆಯ ಚಾಲನೆಯೇ ದುರ್ಘಟನೆಗೆ ಕಾರಣವಾಗಿದೆ.
ಸೀಬೇಗೌಡರು, ಪತ್ನಿ ಶೋಭಾ, ಎರಡನೇ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳು ದುಂಭಿಶ್ರೀ, ಕುಣಿಗಲ್ ನ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗ ಭಾನುಕಿರಣ್ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿ –ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 10 ಕಾರ್ಮಿಕರು ಸಾವು, ಹಲವರಿಗೆ ಗಂಭೀರ ಗಾಯ
ಕಳೆದ ವರ್ಷ ಹಿರಿಯ ಮಗಳ ಮದುವೆಯನ್ಜ ಅದ್ದೂರಿಯಾಗಿ ನೆರವೇರಿಸಿದ್ದಾರೆ. ತಂದೆ ತಾಯಿ ತಂಗಿ ತಮ್ಮನನ್ನು ಕಳೆದುಕೊಂಡ ಹಿರಿಯ ಮಗಳ ಆಕ್ರಂದನ ಮುಗಿಲುಮುಟ್ಟಿತ್ತು.