By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
    ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    April 18, 2026
    ಅಪ್ರತಿಮ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
    April 14, 2026
    ಫನ ಮಹಿಮ ಶರಣ ಶಂಕರ ದಾಸಿಮಯ್ಯ
    April 14, 2026
  • Sports
  • National
  • International
  • Crime
Reading: ಚಂದ್ರಘಂಟಾದೇವಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಚಂದ್ರಘಂಟಾದೇವಿ
Articles

ಚಂದ್ರಘಂಟಾದೇವಿ

Team Varthaman
Last updated: September 24, 2025 9:38 AM
Team Varthaman
Published: September 24, 2025
Share
SHARE

ನವರಾತ್ರಿ ಇಡೀ ಭಾರತದೇಶವೆ ಆಚರಿಸುವ ವಿಜೃಂಭಣೆಯ ಸಂಭ್ರಮದ ಹಬ್ಬ. ದುರ್ಗಾದೇವಿಯ ಒಂಬತ್ತು ರೂಪಗಳು ಈ ಒಂಬತ್ತು ದಿನವೂ ಎಲ್ಲಲ್ಲೂ ಸಂಭ್ರಮದ ವಾತಾವರಣ, ದುರ್ಗಾದೇವಿಯ ವಿವಿಧ ರೂಪಗಳ ಆರಾಧನೆಯಿಂದ ಜೀವನದಲ್ಲಿ ಸುಖ,ಸಂಪತ್ತು, ಸಮೃದ್ಧಿ ಪ್ರಾಪ್ತವಾಗುತ್ತದೆ.

ಆಕೆಯ ಶಕ್ತಿ ಮತ್ತು ಪವಾಡಗಳ ಅಂಶವಾಗಿರುವ ನವದುರ್ಗೆಯರು ಅಸುರ ಶಕ್ತಿಯ ಹುಟ್ಟಡಗಿಸಲು ಒಂಬತ್ತು ರೂಪಗಳಲ್ಲಿ ಜನ್ಮತಾಳಿ ದುಷ್ಠರನ್ನು ವಧಿಸಿ ಶಿಷ್ಠರ ರಕ್ಷಣೆಯನ್ನು ಮಾಡಲು ಮತ್ತು ಅದರ ಮಹತ್ವವನ್ನು ಇಡೀ ವಿಶ್ವಕ್ಕೆ ತಿಳಿಸಲು ಆ ತಾಯಿ ಅವತಾರತಾಳುವಳು.

Join WhatsApp Group

ಮನೆ-ಮನೆಗಳಲ್ಲಿ, ದೇವಸ್ಥಾನಗಳಲ್ಲಿ ವಿಶೇಷವಾಗಿ ಪೂಜೆ ಸ್ವೀಕರಿಸುವಳು, ದಕ್ಷಿಣ ಭಾರತದಲ್ಲಿ ದುರ್ಗಾದೇವಿಯ ಪಂಚದುರ್ಗಾರೂಪಗಳಾದ ಶ್ರೀದುರ್ಗಾ, ಭೂದುರ್ಗಾ, ಆಕಾಶದುರ್ಗಾ, ಅಗ್ನಿ ದುರ್ಗಾ, ವಾಯುದುರ್ಗಾ, ಎಂಬ ಪಂಚಭುತಾತ್ಮಕ ರೂಪಗಳನ್ನು ಕ್ರಮವಾಗಿ, ದುರ್ಗಾ ನಮಸ್ಕಾರ, ದುರ್ಗಾದೀಪ ನಮಸ್ಕಾರವನ್ನು ದುರ್ಗಾದೇವಿಯ ಈ ಚಿಂತನೆಯೊಂದಿಗೆ ಮಾಡುವರು ಅದು ಮೂಲ ಅಥವಾ ಆದಿ ದುರ್ಗಾ, ಅಗ್ನಿ ದುರ್ಗಾ, ಶಾಂತ ದುರ್ಗಾ, ಶೂಲ ದುರ್ಗಾ, ಮಹಿಷಮರ್ಧಿನಿ ದುರ್ಗಾಎಂದು ಆರಾಧಿಸುವರು.

ನವಶಕ್ತಿ ರೋಪಗಳಾದಂತಹ “ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಮಹಾಗೌರಿ, ಸಿದ್ಧಿರಾತ್ರಿ”, ಎಂಬುದಾಗಿ ನವವಿಧ ಭಕ್ತಿಯಿಂದ ಪೂಜಿಸಲ್ಪಡುವಳು. ಈ ನವವಿಧ ಶಕ್ತಿಯ ಆರಾಧನೆಯಿಂದ ಮಾನವನ ದೇಹ ನವದ್ವಾರಗಳಿಂದ ಕೂಡಿದ ಪಿಂಡಾಂಡವು ಪ್ರಕೃತಿಬದ್ಧತೆಯಿಂದ ಶುದ್ಧಿಗೊಳ್ಳುತ್ತದೆ. ವೈಜ್ಞಾನಿಕ ದೃಷ್ಟಿಕೋನದಿಂದ ಋತುಮಾನಕ್ಕೆ ಹೋಲಿಸಿ ನೋಡಿದರೆ, ಮಳೆಗಾಲ ಅಂತ್ಯವಾಗುತ್ತಿದ್ದು, ಸೂರ್ಯರಷ್ಮಿಯ ಪ್ರಖರತೆ ಹೆಚ್ಚಾಗಿರುವಾಗ ಪ್ರಕೃತಿಯ ಅಸಮತೋಲನೆಯಿಂದಾಗುವ ಭಾಧೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ದೇವಿಯ ಆರಾಧನೆ, ಆಶೀರ್ವಾದ ಬಹುಮುಖ್ಯ.

ಚಂದ್ರಘಂಟಾದೇವಿ:- ನವರಾತ್ರಿ ಹಬ್ಬದ ಮೂರನೇ ದಿನದಂದು ಪಾರ್ವತಿ ದೇವಿಯ ಚಂದ್ರಘಂಟಾ ರೂಪವನ್ನು ಪೂಜಿಸಲಾಗುತ್ತದೆ ಮತ್ತು ಅವಳು ಪಾರ್ವತಿ ದೇವಿಯ ವಿವಾಹಿತ ರೂಪವನ್ನು ಪ್ರತಿನಿಧಿಸುತ್ತಾಳೆ ಮತ್ತು ಅವಳು ಪಾರ್ವತಿ ದೇವಿಯ ವಿವಾಹಿತ ರೂಪವನ್ನು ಪ್ರತಿನಿಧಿಸುತ್ತಾಳೆ ಆದ್ದರಿಂದ ಆಕೆಯನ್ನು ಚಂದ್ರಘಂಟಾದೇವಿ ಎನ್ನುವರು.

ಶಿವಪುರಾಣದ ಪ್ರಕಾರ ರುದ್ರನು ಚಂದ್ರಶೇಖರ, ಈ ಚಂದ್ರಶೇಖರನ ಶಕ್ತಿ ಸ್ವರೂಪಿಣಿಯೇ ಚಂದ್ರಘಂಟಾ ದೇವಿ. ಮೂರನೇ ದಿನ ತದಿಗೆಯಂದು ಚಂದ್ರಘಂಟಾದೇವಿಯನ್ನು ಪೂಜಿಸುತ್ತೇವೆ.

ಶಾಂತಿದಾಯಕ ಸ್ವರೂಪದ ದೇವಿ ನಮಗೆ ಶ್ರೇಯಸ್ಸನ್ನು ಕೊಡುವವಳಾಗಿದ್ದಾಳೆ. ನಕಾರಾತ್ಮಕ ದುಷ್ಟಶಕ್ತಿಗಳನ್ನು ಹೊಡೆದೋಡಿಸುವ ಚಂದ್ರಘಂಟಾದೇವಿಯು ಭಕ್ತರಿಗೆ ಆರೋಗ್ಯ, ಸಮೃದ್ಧಿ ಮತ್ತು ಸಂತಸಗಳನ್ನು ಹಂಚುತ್ತಾಳೆ.

ಅವಳ ಮಸ್ತಕದಲ್ಲಿ ಗಂಟೆ ಆಕಾರ ಚಂದ್ರನಿರುವ ಕಾರಣ ಅವಳಿಗೆ ಚಂದ್ರಘಂಟಾ ದೇವಿ ಎನ್ನಲಾಗಿದೆ. ಹೊಂಬಣ್ಣದೇಹ
ಹೊಂದಿರುವ ದೇವಿಗೆ ೧೦ ಕೈಗಳಿದ್ದು ದುಷ್ಟಸಂಹಾರಿಣಿ ಎಂದೇ ಪ್ರಸಿದ್ದಳು.

ಅವಳು ಒಂದು ಕೈಲಿ ತ್ರಿಶೂಲ, ಗದೆ, ಬಾಣ, ಧನಸ್ಸು, ಖಡ್ಗ ಕಮಲ, ಗಂಟೆ ಮತ್ತು ಒಂದರಲ್ಲಿ ಕಮಂಡಲ
ಮತ್ತೊಂದರಲ್ಲಿ ಕಮಂಡಲು ಮತ್ತೊಂದರಲ್ಲಿ ಭಕ್ತರಿಗೆ ಅಭಯ ಹಸ್ತವನ್ನು ನೀಡಿದ್ದಾಳೆ. ಅವಳ ತಲೆಯಲ್ಲಿ ಅರ್ಧ ಚಂದ್ರನಿದ್ದಾನೆ.

ಅವಳ ಮುದ್ರೆ ಯುದ್ಧಾಸನ್ನಳಾದಂತೆ ಇರುತ್ತದೆ ವ್ಯಾಘ್ರವು ಅವಳ ವಾಹನವಾಗಿದ್ದು ಕಡು ನೀಲಿಬಣ್ಣ ಅವಳ ಪ್ರಿಯ ಬಣ್ಣವಾಗಿದೆ. ಅವಳು ಕೆಂಪು ವಸ್ತ್ರ ಧರಿಸಿರುತ್ತಾಳೆ.

ದೇವಿಗೆ ಖೀರನ್ನು ನಿವೇಧಿಸಿದರೆ ಅಥವಾ ಹಾಲಿನ ಯಾವುದೇ ಸಿಹಿಯನ್ನು ನಿವೇದಿಸಿದರೆ ಅವಳಿಗೆ ಬಹಳ ಪ್ರೀತಿ, ಅವಳು ಭಕ್ತರ ನೋವನ್ನು ಹರಣ ಮಾಡುತ್ತಾಳೆ. ದೇವಿಗೆ ಮಲ್ಲಿಗೆಯ ಹೂವು ಇಷ್ಟವಾದ ಪುಷ್ಪವಾಗಿದೆ.

ಚಂದ್ರಘಂಟಾದೇವಿಯ ಮಂತ್ರ
“ಓಂ ಚಂದ್ರಘಂಟಾಯೈ ನಮಃ”
ಅವಳನ್ನು ” ಯಾ ದೇವಿ ಸರ್ವಭೂತೇಷು ಚಂದ್ರಘಂಟಾ
ರೂಪೇಣಾ ಸಂಸ್ಥಿತಾ, ನಮಸ್ತೆö್ಯೈ ನಮಸ್ತೆö್ಯೈ
ನಮಸ್ತೆö್ಯೈ ನಮೋನಮಃ” ಎಂದು ಸ್ತುತಿಸಬೇಕು.

ಹೀಗೆ ದೇವಿಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಮ್ಮ ಭಾರತ ದೇಶದಲ್ಲಿ ಆರಾಧಿಸುವರು. ಒಂದು ಸಂಭ್ರಮದ ಹಬ್ಬದ ವಾತಾವರಣ ಎಲ್ಲೆಲ್ಲೂ ಕಾಣಬಹುದಾಗಿದೆ.

ವೀಣಾ ರವಿಕುಮಾರ್.

  • ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    by Team Varthaman
    April 18, 2026
  • ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    by Team Varthaman
    April 18, 2026
  • ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    by Team Varthaman
    April 18, 2026
  • ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
    by Team Varthaman
    April 17, 2026
  • ಚಾರಣಿಗರಿಗೆ ಕಡ್ಡಾಯ ಟ್ರ್ಯಾಕಿಂಗ್ ಆಪ್: ಗೈಡ್ ಇಲ್ಲದೆ ಅರಣ್ಯ ಪ್ರವೇಶಕ್ಕೆ ನಿಷೇಧ
    by Team Varthaman
    April 17, 2026
ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
ಸೊಪ್ಪು ತರಕಾರಿ ಕೊಂಡು ಫೋನ್ ಪೇ ಮಾಡುವ‌ ಮುನ್ನ…!!
ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ 
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಇವು ಬೇಕು
ಹೆಣ್ಣು ಮಕ್ಕಳ ವ್ಯಥೆ
TAGGED:ChandraghantadeviDasara 2025Kannada ArticleNavarathriಚಂದ್ರಘಂಟಾದೇವಿನವರಾತ್ರಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ತಾಯ್ತಂದೆಯರ ಪ್ರೀತಿಗೆ ಸಮವುಂಟೇ?

Team Varthaman
Team Varthaman
July 27, 2025
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ–ವಿಜಯ್ ಜೋಡಿ
ಸತತ 8ನೇ ದಿನ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ – ಭಾರತೀಯ ಸೇನೆಯ ತೀವ್ರ ಪ್ರತಿಕ್ರಿಯೆ
ಏರ್‌ಪೋರ್ಟ್–ರಾಮನಗರದಲ್ಲಿ 3 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಛತ್ತೀಸ್‌ಗಢ : ಎನ್‌ಕೌಂಟರ್‌ನಲ್ಲಿ 14 ನಕ್ಸಲೀಯರ ಹತ್ಯೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?