ಬೆಂಗಳೂರು: ಈಗಾಗಲೇ ವಿವಿಧ ಸೇವೆಗಳ ದರ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರು ನಾಗರಿಕರಿಗೆ ಮತ್ತೊಂದು ಹೊಡೆತ ಬಿದ್ದಿದ್ದು, ಹೊಸೂರು ರಸ್ತೆಯ ಎರಡು ಪ್ರಮುಖ ಟೋಲ್ ಗೇಟ್‌ಗಳಲ್ಲಿ ದರ ಏರಿಕೆ ಜಾರಿಯಾಗಿದೆ. ಈ ದರ ಏರಿಕೆ ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್ ವೇ ಹಾಗೂ ಅತ್ತಿಬೆಲೆ ಟೋಲ್ ಗೇಟ್‌ಗಳಲ್ಲಿ ವಾಹನ ಸವಾರರಿಗೆ ಈಗ ಹಿಂದಿನಗಿಂತ ಹೆಚ್ಚು ಟೋಲ್ ಶುಲ್ಕವನ್ನು ಪಾವತಿಸಬೇಕಾಗಿದೆ.
Contents
ಇದನ್ನು ಮಾರ್ಚ್ 31ರ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಪರಿಷ್ಕರಿಸಲಾಗಿದ್ದು, ಬಿಟಿಪಿಎಲ್ ಸಂಸ್ಥೆ ಹೊಸ ದರ ನಿಗದಿಪಡಿಸಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ದರಗಳು (BTPL):
- ಕಾರು/ಜೀಪ್/ವ್ಯಾನ್:
- ಏಕ ಬದಿ: ₹65 (ಹಳೆ ದರ ₹60)
- ಎರಡು ಕಡೆ: ₹95 (ಹಳೆ ದರ ₹90)
- ಮಾಸಿಕ ಪಾಸ್: ₹1,885 (ಹಳೆದು ₹1,830)
- ಬಸ್/ಟ್ರಕ್:
- ಒಂದೇ ಬದಿ: ₹175 (ಹಳೆ ದರ ₹170)
- ಮಾಸಿಕ ಪಾಸ್: ₹5,275
- ಮಲ್ಟಿ ಆಕ್ಸೆಲ್ ವಾಹನಗಳು:
- ಪ್ರತಿ ಟ್ರಿಪ್: ₹350 (ಹಳೆ ದರ ₹345)
- ಮಾಸಿಕ ಪಾಸ್: ₹10,550
- ದ್ವಿಚಕ್ರ ವಾಹನಗಳು:
- ಪ್ರತಿ ಟ್ರಿಪ್: ₹25 (ದಾರ ಬದಲಾವಣೆ ಇಲ್ಲ)
ಇದನ್ನು ಓದಿ –ಆರೋಗ್ಯ ಇಲಾಖೆಯಲ್ಲಿ 6,770 ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿ
ಅತ್ತಿಬೆಲೆ ಟೋಲ್ ದರಗಳು:
- ಕಾರುಗಳು: ₹40 (ಹಳೆ ದರ ₹35)
- ಲಘು ವಾಹನಗಳು/ಮಿನಿ ಬಸ್: ₹65 (ಹಳೆ ದರ ₹60)
- ಟ್ರಕ್/ಬಸ್: ₹125 (ಹಳೆ ದರ ₹120)
- ಮಲ್ಟಿ ಆಕ್ಸೆಲ್ ವಾಹನಗಳು: ₹265 (ಹಳೆ ದರ ₹260)