ಬೆಂಗಳೂರು, ಜುಲೈ 07:ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ದಿಢೀರ್ ಇಳಿಕೆಯಾಗಿದ್ದು, ಮುಂದೆ 60,000 ರಿಂದ 70,000 ರೂಪಾಯಿಯವರೆಗೆ ಇಳಿಯುವ ಸಾಧ್ಯತೆ ಇದೆ ಎಂಬ ಅಂದಾಜು ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ದೇಶದಾದ್ಯಂತವೂ ಇದೇ ಸ್ಥಿತಿ ಕಂಡುಬಂದಿದೆ.
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತೆಗೆದುಕೊಂಡ ಪ್ರಮುಖ ಆರ್ಥಿಕ ನಿರ್ಧಾರವೇ ಈ ಬೆಲೆ ಇಳಿಕೆಯ ಪ್ರಮುಖ ಕಾರಣವೆಂದು ನಿಪುಣರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನದ ಖರೀದಿ ಪ್ರಮಾಣವನ್ನು ಆರ್‌ಬಿಐ ಕಡಿಮೆ ಮಾಡಿರುವುದು ಚಿನ್ನದ ಮೌಲ್ಯಕ್ಕೆ ನೇರ ಪರಿಣಾಮ ಬೀರಿದೆ. ವಿಶ್ವದ ಹಲವಾರು ದೇಶಗಳು ಚಿನ್ನ ಖರೀದಿಯನ್ನು ಹೆಚ್ಚಿಸುತ್ತಿರುವಾಗ ಭಾರತದಲ್ಲಿ ಮಾತ್ರ ಇಳಿಕೆಯಾಗಿದೆ.
Contents
ಬೆಂಗಳೂರು, ಜುಲೈ 07:ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ದಿಢೀರ್ ಇಳಿಕೆಯಾಗಿದ್ದು, ಮುಂದೆ 60,000 ರಿಂದ 70,000 ರೂಪಾಯಿಯವರೆಗೆ ಇಳಿಯುವ ಸಾಧ್ಯತೆ ಇದೆ ಎಂಬ ಅಂದಾಜು ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ದೇಶದಾದ್ಯಂತವೂ ಇದೇ ಸ್ಥಿತಿ ಕಂಡುಬಂದಿದೆ.ಇಂದಿನ ಚಿನ್ನದ ದರ (ಜುಲೈ 07, 2025):ಇಂದಿನ ಬೆಳ್ಳಿ ದರ:
ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಶೀಘ್ರದಲ್ಲೇ ಒಂದು ಲಕ್ಷ ರೂಪಾಯಿಯ ಗಡಿಗೆ ತಲುಪುವ ಸಾಧ್ಯತೆ ಇದ್ದರೂ ಇದೀಗ ಅದೇ ಚಿನ್ನದ ದರ ಭಾರೀ ಇಳಿಕೆಯಾಗುತ್ತಿದೆ. ಈ ಪರಿಣಾಮದಿಂದ ಚಿನ್ನದ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
ಇಂದಿನ ಚಿನ್ನದ ದರ (ಜುಲೈ 07, 2025):
- 18 ಕ್ಯಾರೆಟ್ ಚಿನ್ನ:
- 1 ಗ್ರಾಂ: ₹7,412
- 10 ಗ್ರಾಂ: ₹74,120
- ಕಳೆದ ದಿನಕ್ಕೆ ಹೋಲಿಸಿದರೆ ₹10 ಇಳಿಕೆ
- 22 ಕ್ಯಾರೆಟ್ ಚಿನ್ನ:
- 1 ಗ್ರಾಂ: ₹9,059
- 10 ಗ್ರಾಂ: ₹90,590
- 24 ಕ್ಯಾರೆಟ್ ಚಿನ್ನ:
- 1 ಗ್ರಾಂ: ₹9,882
- 10 ಗ್ರಾಂ: ₹98,820
ಇಂದಿನ ಬೆಳ್ಳಿ ದರ:
- 1 ಗ್ರಾಂ ಬೆಳ್ಳಿ: ₹110
- 1 ಕೆಜಿ ಬೆಳ್ಳಿ: ₹1,10,000
- ಬೆಳ್ಳಿಯ ದರದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ.