ಹೈದರಾಬಾದ್: ಅಕ್ರಮ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ. ಈ ಪಟ್ಟಿಲ್ಲಿರುವ ಪ್ರಮುಖ ನಟರು ವಿಜಯ್ ದೇವರಕೊಂಡ ಹಾಗೂ ರಾಣಾ ದಗ್ಗುಬಾಟಿ ಆಗಿದ್ದಾರೆ.
ED ಅಧಿಕಾರಿಗಳ ಪ್ರಕಾರ, ಸೈಬರಾಬಾದ್ ಪೊಲೀಸರ ಎಫ್‌ಐಆರ್ ಆಧಾರವಾಗಿ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ನಟ ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಶ್ರೀಮುಖಿ ಸೇರಿ ಹಲವು ಕಲಾವಿದರು ಸೇರಿದ್ದಾರೆ.
ಇವರು ಬೆಟ್ಟಿಂಗ್ ಆಪ್‌ಗಳ ಪ್ರಚಾರಕ್ಕೆ ಸಂಪರ್ಕ ಹೊಂದಿರುವುದು ಹಾಗೂ ಸಾರ್ವಜನಿಕರಿಗೆ ಪ್ರೇರಣೆಯಾದರೆಂಬ ಆರೋಪಗಳು ಕೇಳಿಬಂದಿವೆ. ಈ ಆಪ್‌ಗಳು ಹಣಹರಿವು ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದು, ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದೆ.ಇದನ್ನು ಓದಿ –ದೆಹಲಿಯಲ್ಲಿ 4.4 ತೀವ್ರತೆಯ ಭೂಕಂಪನ – ಜನರಲ್ಲಿ ಆತಂಕ
ಈ ಪ್ರಕರಣದ ಬಳಿಕ ದಕ್ಷಿಣ ಭಾರತ ಸಿನಿಮಾ ಕ್ಷೇತ್ರದ ಹಲವರು ಕಾನೂನು ಕಷ್ಟದಲ್ಲಿದ್ದಾರೆ. ತನಿಖೆಯ ಪ್ರಗತಿಯ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.