ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಇಂದು (ಆಗಸ್ಟ್ 25) ಎರಡನೇ ಹಂತದ ಗಜಪಡೆ ಮೈಸೂರಿಗೆ ಆಗಮಿಸಿದೆ.
ಈ ಹಂತದಲ್ಲಿ ಶ್ರೀಕಂಠ, ರೂಪಾ, ಗೋಪಿ, ಸುಗ್ರೀವ ಮತ್ತು ಹೇಮಾವತಿ ಆನೆಗಳು ಸಂಜೆ 4 ಗಂಟೆಗೆ ಅರಮನೆ ಪ್ರವೇಶಿಸಲಿದ್ದು, ಸ್ವಾಗತ ಕಾರ್ಯಕ್ರಮಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
Contents
ಮೊದಲ ಹಂತದಲ್ಲಿ ಈಗಾಗಲೇ ಒಂಬತ್ತು ಆನೆಗಳು ಮೈಸೂರಿಗೆ ಬಂದಿದ್ದು, ಈ ಬಾರಿ ಒಟ್ಟು 14 ಆನೆಗಳು ದಸರಾ ಗಜಪಡೆಯಾಗಿ ಭಾಗವಹಿಸಲಿವೆ.
ಮೊದಲ ಹಂತದಲ್ಲಿ ಬಂದ ಆನೆಗಳ ಪಟ್ಟಿ:
- ಅಭಿಮನ್ಯು (ಅಂಬಾರಿ ಹೊರುವ ಗಜರಾಜ)
- ಭೀಮ
- ಕಂಜನ್
- ಧನಂಜಯ
- ಪ್ರಶಾಂತ್
- ಮಹೇಂದ್ರ
- ಏಕಲವ್ಯ
- ಕಾವೇರಿ
- ಲಕ್ಷ್ಮಿ
ವಿಮೆ ವ್ಯವಸ್ಥೆ
ಈ ಬಾರಿ ದಸರಾ ಗಜಪಡೆಯಾದ ಆನೆಗಳು, ಮಾವುತರು, ಕಾವಡಿಗಳು ಮತ್ತು ಅರಣ್ಯ ಅಧಿಕಾರಿಗಳನ್ನು ಒಳಗೊಂಡಂತೆ ಅರಣ್ಯ ಇಲಾಖೆಯು ಒಟ್ಟು ₹2.04 ಕೋಟಿ ವಿಮೆ ಮಾಡಿಸಿದೆ.
- ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಪ್ರತಿಯೊಂದು ಗಂಡಾಣೆಗೆ ₹5 ಲಕ್ಷ ವಿಮೆ (ಒಟ್ಟು ₹50 ಲಕ್ಷ).
- ದಸರಾ ಆನೆಗಳಿಂದ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ₹50 ಲಕ್ಷ ವಿಮೆ ಪರಿಹಾರ ಲಭ್ಯವಾಗಲಿದೆ.
ಇದನ್ನು ಓದಿ –ಗೌರಿ-ಗಣೇಶ ಹಬ್ಬ : ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಅದ್ಭುತ ವೈಭವದ ಮೈಸೂರು ದಸರಾ ಜಂಬೂಸವಾರಿಗೆ ಈ ಗಜಪಡೆ ಮುಖ್ಯ ಆಕರ್ಷಣೆಯಾಗಲಿದೆ.