ಜೈಪುರ: 2026ರ ಐಪಿಎಲ್‌ಗೆ ಮುನ್ನವೇ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. 2024ರಲ್ಲಿ ನೇಮಕಗೊಂಡಿದ್ದ ಅವರು ಕೇವಲ ಒಂದು ವರ್ಷ ಸೇವೆ ಸಲ್ಲಿಸಿ ಫ್ರಾಂಚೈಸಿಯಿಂದ ಹೊರಬಿದ್ದಿದ್ದಾರೆ.
ಟೀಂ ಇಂಡಿಯಾದ ಕೋಚ್ ಹುದ್ದೆಯಿಂದ ಹೊರಬಂದ ಬಳಿಕ, ದ್ರಾವಿಡ್ RR ಜೊತೆ ಬಹುವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ 2025ರ ಐಪಿಎಲ್‌ನಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತು – 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಸಾಧಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತು.
ಇದನ್ನು ಓದಿ –ಕಾಲ್ತುಳಿತ ದುರಂತ: ಸಂತ್ರಸ್ತರ ಕುಟುಂಬಗಳಿಗೆ RCBಯಿಂದ 25 ಲಕ್ಷ ರೂ. ನೆರವು
“ದ್ರಾವಿಡ್ ಅವರ ನಾಯಕತ್ವ ತಂಡದ ಆಟಗಾರರ ಮೇಲೆ ಪ್ರಭಾವ ಬೀರಿತ್ತು. ಆದರೆ ಹೊಸ ಸ್ಥಾನ ನೀಡುವ ನಮ್ಮ ಆಫರ್ ಸ್ವೀಕರಿಸದೆ ಅವರು ಹಿಂದೆ ಸರಿದಿದ್ದಾರೆ” ಎಂದು ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.