ಅಮೆರಿಕದ ಒತ್ತಡ ಹಾಗೂ ಸುಂಕ ಸಮರದ ನಡುವೆಯೂ ಭಾರತ ಮತ್ತು ರಷ್ಯಾ ಹೆಚ್ಚುವರಿ S-400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಕುರಿತು ಮಾತುಕತೆ ನಡೆಸುತ್ತಿವೆ.
ರಷ್ಯಾದ ಹಿರಿಯ ರಕ್ಷಣಾ ರಫ್ತು ಅಧಿಕಾರಿಯೊಬ್ಬರು ರಾಜ್ಯ ಸುದ್ದಿ ಸಂಸ್ಥೆ TASS ಗೆ ನೀಡಿದ ಮಾಹಿತಿಯಂತೆ, ಭಾರತ ಈಗಾಗಲೇ S-400 ವ್ಯವಸ್ಥೆಯನ್ನು ಬಳಸುತ್ತಿದ್ದು, ಹೊಸ ವಿತರಣೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ರಷ್ಯಾದ ಮಿಲಿಟರಿ–ತಾಂತ್ರಿಕ ಸಹಕಾರದ ಫೆಡರಲ್ ಸೇವೆಯ ಮುಖ್ಯಸ್ಥ ಡಿಮಿಟ್ರಿ ಶುಗಾಯೆವ್ ಹೇಳುವಂತೆ, ಭಾರತಕ್ಕೆ ಹೆಚ್ಚಿನ ಪೂರೈಕೆಯ ಕುರಿತು ಚರ್ಚೆಗಳು ಸಕ್ರಿಯವಾಗಿವೆ.ಇದನ್ನು ಓದಿ –2 ದಿನಗಳ GST ಮಂಡಳಿ ಸಭೆ ಪ್ರಾರಂಭ – ಅಗತ್ಯ ವಸ್ತುಗಳ ದರ ಕಡಿತ ನಿರೀಕ್ಷೆ
ಚೀನಾದ ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಭಾರತವು 2018ರಲ್ಲಿ ರಷ್ಯಾದೊಂದಿಗೆ 5.5 ಬಿಲಿಯನ್ ಡಾಲರ್ ಮೌಲ್ಯದ ಐದು S-400 Triumf ವ್ಯವಸ್ಥೆಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಪೂರೈಕೆ ಪದೇಪದೇ ವಿಳಂಬಗೊಂಡಿದ್ದು, ಅಂತಿಮ ಎರಡು ಘಟಕಗಳನ್ನು 2026 ಮತ್ತು 2027ರಲ್ಲಿ ವಿತರಿಸುವ ಯೋಜನೆ ಇದೆ.