By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಜೆಡಿಎಸ್–ಬಿಜೆಪಿ ವಿಲೀನ ಸಾಧ್ಯತೆ: ಡಿಕೆಶಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಜೆಡಿಎಸ್–ಬಿಜೆಪಿ ವಿಲೀನ ಸಾಧ್ಯತೆ: ಡಿಕೆಶಿ
BengaluruKarnatakaPolitics

ಜೆಡಿಎಸ್–ಬಿಜೆಪಿ ವಿಲೀನ ಸಾಧ್ಯತೆ: ಡಿಕೆಶಿ

Team Varthaman
Last updated: January 8, 2026 5:34 PM
Team Varthaman
Published: January 8, 2026
Share
SHARE

ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಧೋರಣೆಯನ್ನು ಗಮನಿಸಿದರೆ, ಜೆಡಿಎಸ್ ಪಕ್ಷವು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷದ ಜೊತೆ ವಿಲೀನವಾಗುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಾವು ನೇರವಾಗಿ ಬಿಜೆಪಿ ವಿರುದ್ಧ ಹೋರಾಟ ನಡೆಸಬಹುದು ಮತ್ತುಈಗಿರುವಂತೆ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲವೂ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

Join WhatsApp Group

ಕೆಪಿಸಿಸಿ ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜು, ಅವರ ಪತ್ನಿ ಗೌರಮ್ಮ, ಚಂದ್ರಶೇಖರ್ ಹಾಗೂ ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡ ಬಳಿಕ ಅವರು ಮಾತನಾಡಿದರು.

ಗೋವಿಂದರಾಜು ಅವರು ಪಾಲಿಕೆ ಮಾಜಿ ಸದಸ್ಯರಾಗಿದ್ದು, ಜೆಡಿಎಸ್ ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಬಿಜೆಪಿ–ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ನಮ್ಮದು ಜಾತ್ಯತೀತ ಸಿದ್ಧಾಂತವಾಗಿದ್ದು, ಅದಕ್ಕಾಗಿಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಅವರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಪಾರ ಆಸಕ್ತಿ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ ಅವರು, ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106 ಹಾಗೂ ಬೆಂಗಳೂರು ಪೂರ್ವದಲ್ಲಿ 78 ಸೇರಿ ಒಟ್ಟು 779 ಮಂದಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಅರ್ಜಿ ಪಡೆದವರು ಇದೇ 10ರೊಳಗೆ ಅರ್ಜಿ ಸಲ್ಲಿಸಿದರೆ, ಪಕ್ಷದಿಂದ ತಂಡವನ್ನು ಕಳುಹಿಸಿ ವರದಿ ಪಡೆಯಲಾಗುತ್ತದೆ. ವಾರ್ಡ್ ಮಟ್ಟದಲ್ಲಿ ಯಾರು ಕೆಲಸ ಮಾಡಿದ್ದಾರೆ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂಬುದನ್ನು ಪರಿಶೀಲಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಪಕ್ಷದ ನಾಯಕರಿಗೆ ಸೂಚಿಸಿದರು.

ಬೆಂಗಳೂರು ನಗರದಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ನಾಯಕರೇ ಸ್ವಾಗತಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದ್ದು, ರಸ್ತೆ ನಿರ್ಮಾಣ ನಡೆಯುತ್ತಿದೆ. ಖಾತಾ ಪರಿವರ್ತನೆ ಹಾಗೂ ಆಸ್ತಿ ದಾಖಲೆಗಳ ಸರಿಪಡಿಸುವ ಕೆಲಸಗಳನ್ನು ನೋಡಿದರೆ, ನಮಗೆ ಭವಿಷ್ಯವಿಲ್ಲ ಎಂದು ಬಿಜೆಪಿ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಇದನ್ನು ಓದಿ –KSRTC ಪ್ರತಿಷ್ಠಿತ ಬಸ್‌ಗಳ ಪ್ರಯಾಣ ದರದಲ್ಲಿ ಭಾರೀ ರಿಯಾಯಿತಿ

ಚಾಮರಾಜಪೇಟೆ ಇತಿಹಾಸವಿರುವ ಕ್ಷೇತ್ರವಾಗಿದ್ದು, ಎಲ್ಲರನ್ನು ಸಮಾನವಾಗಿ ಜೊತೆಗೂಡಿ ಮುಂದೆ ಕರೆದೊಯ್ಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಬಯಸುವವರು ನಮ್ಮ ಸಂಪರ್ಕದಲ್ಲಿದ್ದಾರೆ. ಪಾಲಿಕೆ ಚುನಾವಣೆಗೂ ಮುನ್ನ ಅವರೆಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು.

  • ಉಡುಗೊರೆ ಹೊರೆಯಾಗದಿರಲಿ
    by Team Varthaman
    May 16, 2026
  • ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    by Team Varthaman
    May 16, 2026
  • ಇಂಧನ ದರ ಏರಿಕೆ: ಖಾಸಗಿ ಬಸ್‌ ಪ್ರಯಾಣ ದರ ಹೆಚ್ಚಳ
    by Team Varthaman
    May 16, 2026
  • ಪೆಟ್ರೋಲ್‌, ಡೀಸೆಲ್ ದರ ಏರಿಕೆ ಹಿಂಪಡೆಯಲಿ: ಸಿದ್ದರಾಮಯ್ಯ
    by Team Varthaman
    May 16, 2026
  • ದರ್ಶನ್‌ಗೆ ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ
    by Team Varthaman
    May 15, 2026
ಶೀಘ್ರದಲ್ಲೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ – ಪ್ರಿಯಾಂಕ್ ಖರ್ಗೆ
ಮುಡಾ ಪ್ರಕರಣ: ಸ್ನೇಹಮಯಿ ಕೃಷ್ಣ ಬಂಧನ
ಸಾರಿಗೆ ನೌಕರರಿಗೆ ಬಿಗ್ ಶಾಕ್ – ಮುಷ್ಕರದ ಅವಧಿಯಲ್ಲಿ ರಜೆ ಇಲ್ಲ
ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ
ಮೈಸೂರು : ಚಾಮುಂಡಿ ಬೆಟ್ಟದ ಅರ್ಚಕ ನಿಧನ – ದೇವಿ ದರ್ಶನಕ್ಕೆ ನಿರ್ಬಂಧ
TAGGED:breakingnewsJDS-BJPlatestnewsವಿಲೀನ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Blog

ಆಸ್ಪತ್ರೆಯಲ್ಲಿ ಬೆಂಕಿ ದುರಂತ: ಐಸಿಯುನಲ್ಲಿ 8 ಮಂದಿ ರೋಗಿಗಳ ಸಜೀವ ದಹನ

Team Varthaman
Team Varthaman
October 6, 2025
ದ್ವಿತೀಯಾ ಬ್ರಹ್ಮಚಾರಿಣಿಯ ಪೂಜೆ
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?