By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: ಮುಂಬೈನಲ್ಲಿ ಮಳೆಯ ರೌದ್ರನರ್ತನ: ಕಟ್ಟಡ ಕುಸಿದು 6 ಮಂದಿ ಬಲಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Trending > ಮುಂಬೈನಲ್ಲಿ ಮಳೆಯ ರೌದ್ರನರ್ತನ: ಕಟ್ಟಡ ಕುಸಿದು 6 ಮಂದಿ ಬಲಿ
Trending

ಮುಂಬೈನಲ್ಲಿ ಮಳೆಯ ರೌದ್ರನರ್ತನ: ಕಟ್ಟಡ ಕುಸಿದು 6 ಮಂದಿ ಬಲಿ

Team Varthaman
Last updated: July 6, 2026 11:19 AM
Team Varthaman
Published: July 6, 2026
Share
SHARE
  • ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಭಾರೀ ಅವಾಂತರಗಳಿಗೆ ಕಾರಣವಾಗಿದ್ದು, ಮನ್ಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಮತ್ತೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮನ್ಖುರ್ದ್‌ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದಲ್ಲಿದ್ದ ಕಟ್ಟಡದ ಒಂದು ಭಾಗ ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಏಕಾಏಕಿ ಕುಸಿದಿದೆ. ಕಟ್ಟಡ ಕುಸಿದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿದ್ದು, ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಮುಂಬೈ ಅಗ್ನಿಶಾಮಕ ದಳ, ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು.

Contents
  • ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಭಾರೀ ಅವಾಂತರಗಳಿಗೆ ಕಾರಣವಾಗಿದ್ದು, ಮನ್ಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಮತ್ತೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
  • ಮಳೆಗೆ ಮುಂಬೈ ಅಸ್ತವ್ಯಸ್ತ
  • ವಿಮಾನ ಸಂಚಾರಕ್ಕೂ ಹೊಡೆತ
  • ಮಳೆ ಸಂಬಂಧಿತ ಇತರೆ ದುರಂತಗಳು
  • ಹವಾಮಾನ ಇಲಾಖೆ ಎಚ್ಚರಿಕೆ
Join WhatsApp Group

ಬಿಎಂಸಿ ಅಧಿಕಾರಿಗಳ ಪ್ರಕಾರ, ಅವಶೇಷಗಳಡಿಯಿಂದ ನಾಲ್ವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಹೊರತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮತ್ತೊಬ್ಬರಿಗೆ ಚಿಕಿತ್ಸೆ ಮುಂದುವರಿದಿದ್ದು, ಇನ್ನೂ ಒಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಭಾರೀ ಮಳೆಯ ನಡುವೆಯೂ ಮುಂದುವರಿದಿದೆ.

ಮಳೆಗೆ ಮುಂಬೈ ಅಸ್ತವ್ಯಸ್ತ

ನಿರಂತರ ಮಳೆಯಿಂದ ಮುಂಬೈನ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಜನಜೀವನಕ್ಕೆ ತೀವ್ರ ಅಡಚಣೆ ಎದುರಾಗಿದೆ.

ವಿಮಾನ ಸಂಚಾರಕ್ಕೂ ಹೊಡೆತ

ಭಾರೀ ಮಳೆ, ಬಿರುಗಾಳಿ ಹಾಗೂ ರನ್‌ವೇ ಸಮೀಪ ಮರಗಳು ಕುಸಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ಗಂಟೆ ಕಾಲ ವಿಮಾನಗಳ ಹಾರಾಟ ಮತ್ತು ಇಳಿಯುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಬೆಳಗ್ಗೆ 10.17ರಿಂದ 11.17ರವರೆಗೆ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಹವಾಮಾನ ಸುಧಾರಿಸಿದ ಬಳಿಕ ಸೇವೆ ಪುನರಾರಂಭಿಸಲಾಯಿತು. ಆದಾಗ್ಯೂ, ಇಂಡಿಗೋದ ನಾಲ್ಕು ವಿಮಾನಗಳನ್ನು ರದ್ದುಪಡಿಸಲಾಗಿದ್ದು, 13 ಆಗಮನ ವಿಮಾನಗಳನ್ನು ಅಹಮದಾಬಾದ್ ಸೇರಿದಂತೆ ಸಮೀಪದ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು. ನಂತರ ಹವಾಮಾನ ಅನುಕೂಲಕರವಾದ ಬಳಿಕ ಅವುಗಳನ್ನು ಮತ್ತೆ ಮುಂಬೈಗೆ ಕರೆತರಲಾಯಿತು. ಹಲವಾರು ವಿಮಾನಗಳು ಒಂದು ಗಂಟೆಗೂ ಅಧಿಕ ವಿಳಂಬವಾಗಿ ಸಂಚರಿಸಿದವು.

ಮಳೆ ಸಂಬಂಧಿತ ಇತರೆ ದುರಂತಗಳು

ಕುರ್ಲಾ ಪ್ರದೇಶದಲ್ಲಿ ಮರವೊಂದು ಅಂಗಡಿಯ ಮೇಲೆ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಲ್ಲಿ ಮರ ಬಿದ್ದು ಸಂಭವಿಸಿದ ಎರಡನೇ ಸಾವಿನ ಘಟನೆ ಇದಾಗಿದೆ.

ನವಿ ಮುಂಬೈನ ವಾಶಿ ಸೆಕ್ಟರ್-11ರಲ್ಲಿ ರಾಮ ನಿವಾಸ್ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಮೂವರು ಗಾಯಗೊಂಡಿದ್ದು, ಅವರಲ್ಲಿ 35 ವರ್ಷದ ರಾಜೇಶ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಬ್ಬರು ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೀವಂಡಿಯ ಕಂವರಿ ನದಿಯಲ್ಲಿ ಸ್ನೇಹಿತರೊಂದಿಗೆ ಏಡಿಗಳನ್ನು ಹಿಡಿಯಲು ತೆರಳಿದ್ದ 17 ವರ್ಷದ ಬಾಲಕ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಥಾಣೆಯ ದಿವಾ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡದ ಮೆಟ್ಟಿಲಿನ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಪರಿಣಾಮ ಐವರು ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಪಾಲ್ಘರ್ ಜಿಲ್ಲೆಯ ವಸೈ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ವಸತಿ ಸಮುಚ್ಚಯದ ಕಾಂಪೌಂಡ್ ಗೋಡೆ ಕುಸಿದು ಪಕ್ಕದ ವಸತಿ ಪ್ರದೇಶದ ಮೇಲೆ ಬಿದ್ದ ಪರಿಣಾಮ ಸುಮಾರು 15 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹವಾಮಾನ ಇಲಾಖೆ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವು ಪ್ರದೇಶಗಳಲ್ಲಿ 200 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಸುಮಾರು 300 ಮಿ.ಮೀ. ಮಳೆಯಾಗಿದೆ.

ನಗರಕ್ಕೆ ಭಾನುವಾರ ಘೋಷಿಸಿದ್ದ ರೆಡ್ ಅಲರ್ಟ್ ಮುಂದುವರಿಸಲಾಗಿದ್ದು, ಸೋಮವಾರಕ್ಕೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ, ಬಿರುಗಾಳಿ ಹಾಗೂ ಜಲಾವೃತ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.ಇದನ್ನು ಓದಿ –ದೇಶಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ

ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಬಿಎಂಸಿ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಬಿಎಂಸಿ ಸಾರ್ವಜನಿಕರಿಗೆ ಮನವಿ ಮಾಡಿದೆ.

  • ಮಹಿಳೆಯರ ಸಬಲೀಕರಣಕ್ಕೆ ಮತ್ತಷ್ಟು ಹೊಸ ಯೋಜನೆಗಳು: ಡಿ.ಕೆ. ಶಿವಕುಮಾರ್
    by Team Varthaman
  • ಮುಂಬೈನಲ್ಲಿ ಮಳೆಯ ರೌದ್ರನರ್ತನ: ಕಟ್ಟಡ ಕುಸಿದು 6 ಮಂದಿ ಬಲಿ
    by Team Varthaman
  • ದೇಶಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ
    by Team Varthaman
  • ಕೋಪವೆಂಬುದನರ್ಥ
    by Team Varthaman
  • ಲಂಚ ಪಡೆಯುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ
    by Team Varthaman
ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹಣೆಯಲ್ಲಿ 71% ಪ್ರಗತಿ
ಗೋಕುಲ್ ಚಿತ್ರಮಂದಿರದಲ್ಲಿ ಅಗ್ನಿ ಅವಘಡ: ಓರ್ವ ಸಜೀವದಹನ
ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ಬಳಿಕ ಸಾವು
ಬ್ರಾಂಡೆಡ್ ಔಷಧಿಗಳಿಗೆ 100% ಸುಂಕ
ಸಿ.ಪಿ. ರಾಧಾಕೃಷ್ಣನ್ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆ
TAGGED:breakingnewslatestnewsMumbaiRain AlertRED ALERT
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
NationalTrending

ರೈಲ್ವೆ ಬೋಗಿಗಳಲ್ಲೇ ATM ಸೇವೆ: ಶೀಘ್ರದಲ್ಲಿ ಆರಂಭಗೊಳ್ಳುವ ಹೊಸ ಸೌಲಭ್ಯ

Team Varthaman
Team Varthaman
April 16, 2025
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ: 24 ಗಂಟೆಗಳಲ್ಲಿ ಇಬ್ಬರ ಹತ್ಯೆ
ಪೆಟ್ಟು‌ ಬಿದ್ದ ಜಾಗಕ್ಕೇ ಮತ್ತೆಮತ್ತೆ ಪೆಟ್ಟು ಬೀಳೋ ಬದುಕಿನ ವಿಸ್ಮಯ!
ಬಕೆಟ್ ನಲ್ಲಿ ಮುಳುಗಿ ಮಗು ಸಾವು: ಮನನೊಂದ ತಾಯಿ ಆತ್ಮಹತ್ಯೆ
ಮತ್ತೆ ತೈಲ ದರ ಏರಿಕೆ: ವಾಹನ ಸವಾರರಿಗೆ ಶಾಕ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?