By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ನೇಮಕ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ನೇಮಕ
BengaluruKarnatakaMain NewsTrending

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ನೇಮಕ

Team Varthaman
Last updated: July 31, 2026 11:17 AM
Team Varthaman
Published: July 31, 2026
Share
SHARE
  • 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಇಂದೇ ಅಧಿಸೂಚನೆ

ಬೆಂಗಳೂರು, ಜುಲೈ 31: ಪಾರದರ್ಶಕ ಹಾಗೂ ವ್ಯವಸ್ಥಿತ ನೇಮಕಾತಿ ಪ್ರಕ್ರಿಯೆಗೆ ಒತ್ತು ನೀಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ ಮೊದಲ ಬಾರಿಗೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮಾದರಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. 2026–27ನೇ ಸಾಲಿನ ಕೆಎಎಸ್‌ನ 39 ಹುದ್ದೆಗಳು ಸೇರಿದಂತೆ ಒಟ್ಟು 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಶುಕ್ರವಾರ (ಜುಲೈ 31) ಅಧಿಸೂಚನೆ ಪ್ರಕಟಿಸಲಾಗುತ್ತಿದೆ.

ಕೆಪಿಎಸ್‌ಸಿ ಆಯೋಗದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮೂರು ಹಂತಗಳಲ್ಲಿ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿಗೂ ಅನುಮೋದನೆ ನೀಡಲಾಗಿದೆ.

Contents
  • ಬೆಂಗಳೂರು, ಜುಲೈ 31: ಪಾರದರ್ಶಕ ಹಾಗೂ ವ್ಯವಸ್ಥಿತ ನೇಮಕಾತಿ ಪ್ರಕ್ರಿಯೆಗೆ ಒತ್ತು ನೀಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ ಮೊದಲ ಬಾರಿಗೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮಾದರಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. 2026–27ನೇ ಸಾಲಿನ ಕೆಎಎಸ್‌ನ 39 ಹುದ್ದೆಗಳು ಸೇರಿದಂತೆ ಒಟ್ಟು 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಶುಕ್ರವಾರ (ಜುಲೈ 31) ಅಧಿಸೂಚನೆ ಪ್ರಕಟಿಸಲಾಗುತ್ತಿದೆ.
  • ಒಟ್ಟು 319 ಹುದ್ದೆಗಳ ವಿವರ
  • ಪರೀಕ್ಷಾ ವೇಳಾಪಟ್ಟಿ
  • ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳು
Join WhatsApp Group

ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಮಾಹಿತಿ ನೀಡಿದ್ದು, “ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳಿಗೆ ಆಯೋಗ ಅನುಮೋದನೆ ನೀಡಿದೆ. ಆಗಸ್ಟ್‌ 1ರಿಂದ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. 2027ರ ಜೂನ್‌ 5ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳಿಗೆ ಅವಕಾಶ ನೀಡಿದ ಬಳಿಕ ಜೂನ್‌ ಅಂತ್ಯದೊಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಅವರು ಮತ್ತಷ್ಟು ವಿವರಿಸಿ, “ಯುಪಿಎಸ್‌ಸಿ ಅನುಸರಿಸುವ ಪರೀಕ್ಷಾ ಹಾಗೂ ನೇಮಕಾತಿ ವಿಧಾನವನ್ನು ಕೆಪಿಎಸ್‌ಸಿ ಕೂಡ ಇದೇ ಮೊದಲ ಬಾರಿಗೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅಳವಡಿಸಿಕೊಳ್ಳಲಿದೆ” ಎಂದು ಹೇಳಿದ್ದಾರೆ.

ಒಟ್ಟು 319 ಹುದ್ದೆಗಳ ವಿವರ

2026–27ನೇ ಸಾಲಿನ ನೇಮಕಾತಿಯಲ್ಲಿ ಒಟ್ಟು 319 ಹುದ್ದೆಗಳಿದ್ದು, ಅವುಗಳಲ್ಲಿ 117 ಗ್ರೂಪ್–’ಎ’ ಹಾಗೂ 202 ಗ್ರೂಪ್–’ಬಿ’ ಹುದ್ದೆಗಳಿವೆ.

ಪ್ರಮುಖ ಹುದ್ದೆಗಳ ವಿವರ:

  • ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ – 50
  • ಕಾರ್ಯನಿರ್ವಾಹಕ ಅಧಿಕಾರಿ – 15
  • ತಹಶೀಲ್ದಾರ್ (ಗ್ರೇಡ್–2) – 25
  • ವಾಣಿಜ್ಯ ತೆರಿಗೆ ಅಧಿಕಾರಿ – 74
  • ಮುಖ್ಯಾಧಿಕಾರಿ (ಗ್ರೇಡ್–1) – 20

ಉಳಿದ ಹುದ್ದೆಗಳಿಗೂ ಸರ್ಕಾರದ ಜಾರಿಯಲ್ಲಿರುವ ಮೀಸಲಾತಿ ನಿಯಮಗಳ ಪ್ರಕಾರ ವರ್ಗೀಕರಣ ಮಾಡಿ ನೇಮಕಾತಿ ನಡೆಸಲಾಗುತ್ತದೆ.

ಪರೀಕ್ಷಾ ವೇಳಾಪಟ್ಟಿ

  • ಅರ್ಜಿ ಸಲ್ಲಿಕೆ: ಆಗಸ್ಟ್‌ 1 ರಿಂದ 30
  • ಪೂರ್ವಭಾವಿ ಪರೀಕ್ಷೆ: ನವೆಂಬರ್‌ 15
  • ಪೂರ್ವಭಾವಿ ಪರೀಕ್ಷೆ ಫಲಿತಾಂಶ: ಡಿಸೆಂಬರ್‌ 15
  • ಮುಖ್ಯ ಪರೀಕ್ಷೆ: 2027ರ ಫೆಬ್ರವರಿ 12, 14, 16 ಮತ್ತು 18
  • ಮುಖ್ಯ ಪರೀಕ್ಷೆ ಫಲಿತಾಂಶ: ಏಪ್ರಿಲ್‌ 27
  • ವ್ಯಕ್ತಿತ್ವ ಪರೀಕ್ಷೆ: ಮೇ 10 ರಿಂದ 31
  • ತಾತ್ಕಾಲಿಕ ಆಯ್ಕೆ ಪಟ್ಟಿ: ಜೂನ್‌ 5
  • ಅಂತಿಮ ಆಯ್ಕೆ ಪಟ್ಟಿ: ಜೂನ್‌ ಅಂತ್ಯ

ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳು

ಕೆಪಿಎಸ್‌ಸಿ ಈ ಬಾರಿ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದೆ.

  • ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಯ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಗಳಿಗೆ.
  • ಪ್ರತಿ ಅಭ್ಯರ್ಥಿಯ ಒಎಂಆರ್‌ ಶೀಟ್‌ ದಾಖಲೆಯಾಗುವಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ.
  • ಮುಖಚಹರೆ ಗುರುತಿಸುವ (Face Recognition) ತಂತ್ರಜ್ಞಾನ ಹಾಗೂ ಮೊಬೈಲ್‌ ಜಾಮರ್‌ ವ್ಯವಸ್ಥೆ.
  • ಪರೀಕ್ಷೆ ಮುಗಿದ ತಕ್ಷಣ ಉತ್ತರ ಪತ್ರಿಕೆಗಳನ್ನು ಪೊಲೀಸ್‌ ಭದ್ರತೆಯಲ್ಲಿ ನೇರವಾಗಿ ಕೆಪಿಎಸ್‌ಸಿ ಕೇಂದ್ರ ಕಚೇರಿಗೆ ಸಾಗಣೆ.
  • ಕೇಂದ್ರ ಕಚೇರಿಗೆ ತಲುಪಿದ ಕೂಡಲೇ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌.
  • ಪೂರ್ವನಿಗದಿತ ವೇಳಾಪಟ್ಟಿಯಂತೆ ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆ ನಡೆಸಲು ಕ್ರಮ.

ಕೆಪಿಎಸ್‌ಸಿ ಈ ಹೊಸ ಮಾದರಿಯ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವೇಗ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ರಾಮ ಮಂದಿರ ಪ್ರಕರಣ: ವಕಾಲತ್ತು ವಹಿಸದಿರಲು ನಿರ್ಧಾರ
ಮಂತ್ರಾಲಯ ಮಠದಲ್ಲಿ ಭದ್ರತಾ ಬಿಗಿತ: ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ತಪಾಸಣೆ
ವಿಮಾನ ಪತನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು: ಸಾವಿನ ಸಂಖ್ಯೆ 130 ಕ್ಕೆ ಏರಿಕೆ
ಮುಡಾ ಹಗರಣ: ₹100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಏಷ್ಯಾಕಪ್ ಪಂದ್ಯದ ಶುಲ್ಕವನ್ನು ಪಹಲ್ಗಾಮ್ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯಕುಮಾರ್
TAGGED:breakingnewslatestnewsUPSC Examಕೆಪಿಎಸ್‌ಸಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaWeather

ರಾಜ್ಯದ 20 ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆ

Team Varthaman
Team Varthaman
October 3, 2025
ಅವಕಾಶ ಸಿಕ್ಕರೆ ದಲಿತ ಸಿಎಂ: ಸಚಿವ ಕೆ.ಜೆ. ಜಾರ್ಜ್
ಮೈಸೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆ ಬಹಿರಂಗ
ಡಿಎಪಿಗೆ ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಸಿ
ಗೌರಿ-ಗಣೇಶ ಹಬ್ಬ : ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?