- ಟ್ರಂಪ್ ಘೋಷಣೆ : ಆಗಸ್ಟ್ 1 ರಿಂದ ಜಾರಿಗೆ
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಹೊಸ ತಿರುವು ಪಡೆದುಕೊಂಡಿದೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲಿನ ವಾಣಿಜ್ಯ ಸುಂಕವನ್ನು ಶೇ 25ರಷ್ಟು ಎಂದು ಘೋಷಣೆ ಮಾಡಿದರು.
ಈ ಸುಂಕ ಆಗಸ್ಟ್ 1ರಿಂದಲೇ ಭಾರತಕ್ಕೆ ಅನ್ವಯವಾಗಲಿದೆ ಎಂದು ಟ್ರಂಪ್ ಟ್ವಿಟರ್ ಸಮಾನ ಮಾಧ್ಯಮವಾದ “ಟ್ರುಥ್ ಸೋಶಿಯಲ್” ಮೂಲಕ ತಿಳಿಸಿದ್ದಾರೆ.
ಈ ಸುಂಕ ಆಗಸ್ಟ್ 1ರಿಂದಲೇ ಭಾರತಕ್ಕೆ ಅನ್ವಯವಾಗಲಿದೆ ಎಂದು ಟ್ರಂಪ್ ಟ್ವಿಟರ್ ಸಮಾನ ಮಾಧ್ಯಮವಾದ “ಟ್ರುಥ್ ಸೋಶಿಯಲ್” ಮೂಲಕ ತಿಳಿಸಿದ್ದಾರೆ.
ವ್ಯಾಪಾರ ಒಪ್ಪಂದದ ಕುರಿತು ಭಾರತ–ಅಮೆರಿಕ ನಡುವೆ ಕಳೆದ ಹಲವು ತಿಂಗಳಿನಿಂದ ಮಾತುಕತೆ ನಡೆಯುತ್ತಿದ್ದು, ಈ ನಡುವೆ ಟ್ರಂಪ್ ಘೋಷಣೆ ಮಹತ್ವ ಪಡೆದಿದೆ. ಭಾರತದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವುದರ ಜೊತೆಗೆ ಪೆನಾಲ್ಟಿಯನ್ನೂ ವಿಧಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವ್ಯಾಪಾರದ ನಿಖರ ಚಿತ್ರಣ:
ಈ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ ಅಮೆರಿಕಕ್ಕೆ \$25.51 ಬಿಲಿಯನ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದು, ಇದು ಶೇ. 22.8ರಷ್ಟು ಹೆಚ್ಚಳವಾಗಿದೆ. ಇದಕ್ಕೆ ವಿರುದ್ಧವಾಗಿ ಭಾರತ ಅಮೆರಿಕದಿಂದ \$12.86 ಬಿಲಿಯನ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದು, ಇದು ಶೇಕಡಾ 11.68ರಷ್ಟು ಹೆಚ್ಚಳವಾಗಿದೆ.
ಟ್ರಂಪ್ ಅವರ ಪ್ರಕಾರ, ಭಾರತೀಯ ಮಾರುಕಟ್ಟೆಗೆ ಅಮೆರಿಕದ ಉತ್ಪನ್ನಗಳಿಗೆ ಹೆಚ್ಚಿನ ಪ್ರವೇಶ ಬೇಕು ಎಂಬುದು ಅವರ ಪ್ರಧಾನ ಬೇಡಿಕೆ. ಈ ಕುರಿತು ಚರ್ಚೆಗಳು ನಡೆದಿದ್ದರೂ, ಯಾವುದೇ ಅಂತಿಮ ವ್ಯಾಪಾರ ಒಪ್ಪಂದ ಇನ್ನೂ ಅಂತಿಮ ವಾಗಿಲ್ಲ.
ಹಿಂದೆ ಏಪ್ರಿಲ್ 2ರಂದು ಭಾರತದ ಕೆಲ ಸರಕುಗಳ ಮೇಲೆ ಶೇಕಡಾ 26ರಷ್ಟು ಸುಂಕ ಘೋಷಿಸಲಾಗಿತ್ತು. ಆದರೆ ಬಳಿಕ ತಾತ್ಕಾಲಿಕವಾಗಿ ಈ ಸುಂಕವನ್ನು ಹಿಂಪಡೆದು ಇರಿಸಲಾಗಿತ್ತು. ಇದೀಗ ಆಗಸ್ಟ್ 1ರಿಂದ ಶೇಕಡಾ 25ರಷ್ಟು ಸುಂಕ ಜಾರಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ.ಇದನ್ನು ಓದಿ –ಕಾಶ್ಮೀರದ ದೇಗ್ವಾರ್ ಸೆಕ್ಟರ್‌ನಲ್ಲಿ ಗುಂಡಿನ ಚಕಮಕಿ
ಟ್ರಂಪ್ ಅವರ ಇತ್ತೀಚಿನ ಘೋಷಣೆಯು ಭಾರತ–ಅಮೆರಿಕ ನಡುವಿನ ವ್ಯಾಪಾರ ಸಂಬಂಧಕ್ಕೆ ಸ್ಪಷ್ಟ ಸಂದೇಶವನ್ನ ನೀಡಿದ್ದು, ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಸಂಬಂಧಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದನ್ನು ನಿರೀಕ್ಷಿಸಬೇಕಿದೆ.