By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
    ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    April 18, 2026
    ಅಪ್ರತಿಮ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
    April 14, 2026
    ಫನ ಮಹಿಮ ಶರಣ ಶಂಕರ ದಾಸಿಮಯ್ಯ
    April 14, 2026
  • Sports
  • National
  • International
  • Crime
Reading: ಮುಂದಿನ 6 ತಿಂಗಳಲ್ಲಿ ಪೆಟ್ರೋಲ್ ದರದಷ್ಟೇ ಇವಿ ಬೆಲೆ: ನಿತಿನ್ ಗಡ್ಕರಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > New Delhi > ಮುಂದಿನ 6 ತಿಂಗಳಲ್ಲಿ ಪೆಟ್ರೋಲ್ ದರದಷ್ಟೇ ಇವಿ ಬೆಲೆ: ನಿತಿನ್ ಗಡ್ಕರಿ
New DelhiTrending

ಮುಂದಿನ 6 ತಿಂಗಳಲ್ಲಿ ಪೆಟ್ರೋಲ್ ದರದಷ್ಟೇ ಇವಿ ಬೆಲೆ: ನಿತಿನ್ ಗಡ್ಕರಿ

Team Varthaman
Last updated: October 7, 2025 10:13 AM
Team Varthaman
Published: October 7, 2025
Share
SHARE

ನವದೆಹಲಿ: ಮುಂದಿನ ನಾಲ್ಕು ರಿಂದ ಆರು ತಿಂಗಳೊಳಗೆ ಎಲೆಕ್ಟ್ರಿಕ್ ವಾಹನಗಳ (EV) ಬೆಲೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬೆಲೆಗೆ ಸಮಾನವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FICCI) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಎಲೆಕ್ಟ್ರಿಕ್ ವಾಹನಗಳ ಯೋಜನೆ ಆರಂಭಿಸಿದಾಗ, ಒಂದು ಕಿಲೋವ್ಯಾಟ್-ಗಂಟೆಯ ಬ್ಯಾಟರಿಯ ಬೆಲೆ ಸುಮಾರು 150 ಡಾಲರ್ ಇತ್ತು. ಈಗ ಅದು 55 ರಿಂದ 65 ಡಾಲರ್‌ಗಳ ನಡುವೆ ಇಳಿಕೆಯಾಗಿದೆ. ಮುಂದಿನ ನಾಲ್ಕು ರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಕಾರುಗಳು ಮತ್ತು ಬಸ್‌ಗಳ ಬೆಲೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಟ್ಟಕ್ಕೆ ಬರಲಿದೆ ಎಂದು ನನಗೆ ನಂಬಿಕೆ ಇದೆ,” ಎಂದರು.

Join WhatsApp Group

ಗಡ್ಕರಿ ಅವರು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ದೇಶದ ಆರ್ಥಿಕತೆಗೆ ದೊಡ್ಡ ಭಾರವೆಂದು ಹೇಳಿದರು. “ಭಾರತವು ಪ್ರತಿ ವರ್ಷ ಸುಮಾರು 22 ಲಕ್ಷ ಕೋಟಿ ರೂಪಾಯಿಗಳನ್ನು ಇಂಧನ ಆಮದಿಗೆ ಖರ್ಚು ಮಾಡುತ್ತಿದೆ. ಹೀಗಾಗಿ ನಾವು ಎಥೆನಾಲ್, ಸಿಎನ್‌ಜಿ ಅಥವಾ ಐಸೋಬುಟನಾಲ್‌ನಿಂದ ಸಂಚರಿಸುವ ಎಲೆಕ್ಟ್ರಿಕ್ ಟ್ರಾಕ್ಟರ್‌ಗಳು ಮತ್ತು ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಟ್ರಾಕ್ಟರ್ ತಯಾರಕರು ಮತ್ತು ಕೃಷಿ ಸಂಶೋಧಕರಿಗೆ ಸೂಚಿಸಿದ್ದೇನೆ,” ಎಂದು ಅವರು ವಿವರಿಸಿದರು.

ಈ ರೀತಿಯ ನವೀನ ತಂತ್ರಜ್ಞಾನಗಳು ಡೀಸೆಲ್ ಆಮದು ಕಡಿಮೆ ಮಾಡಲು, ಮಾಲಿನ್ಯವನ್ನು ತಗ್ಗಿಸಲು ಮತ್ತು ಗ್ರಾಮೀಣ ಪ್ರದೇಶದ ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಲಿವೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.

ಅವರು ತಮ್ಮ ಸಚಿವಾಧಿಕಾರ ವಹಿಸಿಕೊಂಡ ನಂತರ ಆಟೋಮೊಬೈಲ್ ಉದ್ಯಮವು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು. “ನಾನು ಸಾರಿಗೆ ಸಚಿವನಾದಾಗ, ಭಾರತೀಯ ಆಟೋಮೊಬೈಲ್ ಉದ್ಯಮದ ಮೌಲ್ಯ 14 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಈಗ ಅದು 22 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ,” ಎಂದು ಹೇಳಿದರು.ಇದನ್ನು ಓದಿ –ಬಿಹಾರ : ನ. 6 ಮತ್ತು 11ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ

ಪ್ರಸ್ತುತ ಅಮೆರಿಕಾದ ಆಟೋಮೊಬೈಲ್ ಉದ್ಯಮದ ಗಾತ್ರ 78 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಚೀನಾ 47 ಲಕ್ಷ ಕೋಟಿಯ ಮಟ್ಟದಲ್ಲಿದೆ. ಭಾರತವು ಈ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

  • ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    by Team Varthaman
    April 18, 2026
  • ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    by Team Varthaman
    April 18, 2026
  • ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    by Team Varthaman
    April 18, 2026
  • ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
    by Team Varthaman
    April 17, 2026
  • ಚಾರಣಿಗರಿಗೆ ಕಡ್ಡಾಯ ಟ್ರ್ಯಾಕಿಂಗ್ ಆಪ್: ಗೈಡ್ ಇಲ್ಲದೆ ಅರಣ್ಯ ಪ್ರವೇಶಕ್ಕೆ ನಿಷೇಧ
    by Team Varthaman
    April 17, 2026
ಇಂದು ಹಲವು ಜಿಲ್ಲೆಗಳಲ್ಲಿ ಮಳೆ, ಮೇ 9ರಿಂದ ಭಾರಿ ಮಳೆಯ ನಿರೀಕ್ಷೆ
ಉಚಿತ ಟಿಕೆಟ್ ಘೋಷಣೆ ಕಾಲ್ತುಳಿತಕ್ಕೆ ಕಾರಣ: IPS ಅಧಿಕಾರಿ ದಯಾನಂದ್ ಹೇಳಿಕೆ
ಜಾನುವಾರು ರಕ್ಷಣೆ ಹೆಸರಿನಲ್ಲಿ ಹಣ ವಸೂಲಿ – ಏಳು ಮಂದಿ ಅರೆಸ್ಟ್
ಭಾರತ ವಿರುದ್ಧ ಸುಳ್ಳು ಆರೋಪ ಮಾಡಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ
ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ
TAGGED:breakingnewsEV Car priceEV pricelatestnewsNitin Gadkari
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ನಿಸ್ವಾರ್ಥ ಜೀವಿ ಜ್ಞಾನದ ಭುವಿ

Team Varthaman
Team Varthaman
September 5, 2025
ಬೆಂಗಳೂರಿನಲ್ಲಿಆರ್ ಸಿ ಬಿ ಸಂಭ್ರಮಾಚರಣೆ: 7 ಮಂದಿ ಕಾಲು ತುಳಿತಕ್ಕೆ ಬಲಿ
ಸ್ಥಳೀಯರ ಸಲಹೆಯೊಂದಿಗೆ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಕೆಶಿ
ಕಮರ್ಷಿಯಲ್ LPG ಸಿಲಿಂಡರ್ ದರ ₹195 ಏರಿಕೆ
ಜ.17ರಂದು ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?