- SSLC, PUC ಪಾಸಾದ ಮಹಿಳೆಯರಿಗೆ ಉತ್ತಮ ಅವಕಾಶ
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು (WCD Mysuru) 2025ರ ನೇಮಕಾತಿಯಡಿಯಲ್ಲಿ 319 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಅರ್ಜಿ ಸಲ್ಲಿಕೆ ವಿವರಗಳು
10ನೇ ತರಗತಿ (SSLC) ಅಥವಾ 12ನೇ ತರಗತಿ (PUC) ಪಾಸಾದ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ 2025 ಮೇ 16ರಂದು ಪ್ರಾರಂಭವಾಗಿದ್ದು, ಜೂನ್ 15, 2025 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mysore.nic.in ಅಥವಾ ನೇರವಾಗಿ ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:
https://karnemakaone.kar.nic.in/abcd/ApplicationForm_JA_org.aspx
ವಯೋಮಿತಿ
- ಕನಿಷ್ಠ ವಯಸ್ಸು: 19 ವರ್ಷ
- ಗರಿಷ್ಠ ವಯಸ್ಸು: 35 ವರ್ಷ
- ಮೀಸಲಾತಿಯ ಪ್ರಕಾರ ವಯೋಸಡಿಲಿಕೆ ಅನ್ವಯವಾಗಲಿದೆ.
ಅರ್ಹತಾ ಮಾನದಂಡ
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ: PUC (12ನೇ ತರಗತಿ) ಪಾಸಾಗಿರಬೇಕು
- ಅಂಗನವಾಡಿ ಸಹಾಯಕಿ ಹುದ್ದೆಗೆ: SSLC (10ನೇ ತರಗತಿ) ಪಾಸಾಗಿರಬೇಕು
ಮುಖ್ಯ ದಿನಾಂಕಗಳು
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 16-05-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2025
ಇದನ್ನು ಓದಿ –ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ ಇಬ್ಬರು ಬಂಧನ
ಈ ಹುದ್ದೆಗಳು ಗ್ರಾಮೀಣ ಹಾಗೂ ನಗರ ಭಾಗದ ಮಹಿಳೆಯರಿಗೆ ಉದ್ಯೋಗದ ಉತ್ತಮ ಅವಕಾಶವನ್ನು ನೀಡಲಿದ್ದು, ಆಸಕ್ತರು ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.