By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
    April 12, 2026
    ನಾವೇನು ಕೊಟ್ವಿ
    April 6, 2026
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
  • Sports
  • National
  • International
  • Crime
Reading: ಸಾರಿಗೆ ನೌಕರರಿಗೆ ಬಿಗ್ ಶಾಕ್ – ಮುಷ್ಕರದ ಅವಧಿಯಲ್ಲಿ ರಜೆ ಇಲ್ಲ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಸಾರಿಗೆ ನೌಕರರಿಗೆ ಬಿಗ್ ಶಾಕ್ – ಮುಷ್ಕರದ ಅವಧಿಯಲ್ಲಿ ರಜೆ ಇಲ್ಲ
BengaluruKarnatakaTrending

ಸಾರಿಗೆ ನೌಕರರಿಗೆ ಬಿಗ್ ಶಾಕ್ – ಮುಷ್ಕರದ ಅವಧಿಯಲ್ಲಿ ರಜೆ ಇಲ್ಲ

Team Varthaman
Last updated: October 14, 2025 5:35 PM
Team Varthaman
Published: October 14, 2025
Share
SHARE
  • “ನೋ ವರ್ಕ್ ನೋ ಪೇ” ನಿಯಮ ಜಾರಿಗೆ ತಂದ ಕೆಎಸ್‌ಆರ್ಟಿಸಿ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ಸದ್ದು ಮತ್ತೆ ಕೇಳಿಬರುತ್ತಿರುವಾಗ, ಕೆಎಸ್‌ಆರ್ಟಿಸಿಯಿಂದ ನೌಕರರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ಮುಷ್ಕರ ಅಥವಾ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗುವ ನೌಕರರಿಗೆ ರಜೆ ನೀಡುವುದಿಲ್ಲ ಎಂದು ಸ್ಪಷ್ಟ ಆದೇಶ ಹೊರಡಿಸಲಾಗಿದೆ.

ಹೈಲೈಟ್ಸ್:

  • ಸಾರಿಗೆ ನೌಕರರ ಐದು ದಿನಗಳ ಉಪವಾಸ ಸತ್ಯಾಗ್ರಹ ಘೋಷಣೆ
  • ನೌಕರರ ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ತಯಾರಿ
  • ಕೆಎಸ್‌ಆರ್ಟಿಸಿಯಿಂದ ಕಠಿಣ ಎಚ್ಚರಿಕೆ – ರಜೆ ರದ್ದು, “ನೋ ವರ್ಕ್ ನೋ ಪೇ” ನಿಯಮ ಜಾರಿ
  • ಅಕ್ಟೋಬರ್ 15 ರಿಂದ 19 ರವರೆಗೆ ಯಾವುದೇ ರಜೆ ಅನುಮತಿ ಇಲ್ಲ
  • ಸಾರ್ವಜನಿಕ ಸೇವೆಗೆ ವ್ಯತ್ಯಯ ಆಗದಂತೆ ಕ್ರಮ

ಸಂಪೂರ್ಣ ವರದಿ:

ರಾಜ್ಯದಲ್ಲಿ ನಾಳೆಯಿಂದ ಐದು ದಿನಗಳ ಕಾಲ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹಕ್ಕೆ ಸಜ್ಜಾಗಿದ್ದಾರೆ. ಸರ್ಕಾರದ ಅನೇಕ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ, ಬಿಎಂಟಿಸಿ ಹಾಗೂ ಕೆಎಸ್‌ಆರ್ಟಿಸಿ ನೌಕರರು ಹೋರಾಟದ ಸನ್ನಾಹ ಮಾಡಿದ್ದಾರೆ.

Contents
  • ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ಸದ್ದು ಮತ್ತೆ ಕೇಳಿಬರುತ್ತಿರುವಾಗ, ಕೆಎಸ್‌ಆರ್ಟಿಸಿಯಿಂದ ನೌಕರರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ಮುಷ್ಕರ ಅಥವಾ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗುವ ನೌಕರರಿಗೆ ರಜೆ ನೀಡುವುದಿಲ್ಲ ಎಂದು ಸ್ಪಷ್ಟ ಆದೇಶ ಹೊರಡಿಸಲಾಗಿದೆ.
  • ಹೈಲೈಟ್ಸ್:
  • ಸಂಪೂರ್ಣ ವರದಿ:
Join WhatsApp Group

ಹಿಂದೆ ಆಗಸ್ಟ್ 5ರಂದು ನಡೆದ ಮುಷ್ಕರದ ವೇಳೆಯಲ್ಲಿ ಹೈಕೋರ್ಟ್ ತಡಿಯಾಜ್ಞೆ ಹಿನ್ನೆಲೆಯಲ್ಲಿ ನೌಕರರು ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಆದರೆ ಸರ್ಕಾರದಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಕಾರಣ, ನೌಕರ ಸಂಘಗಳು ಮತ್ತೆ ಹೋರಾಟಕ್ಕೆ ಮುಂದಾಗಿವೆ.

ಈ ಹಿನ್ನೆಲೆಯಲ್ಲಿ ಕೆಎಸ್‌ಆರ್ಟಿಸಿಯಿಂದ ಹೊಸ ಆದೇಶ ಹೊರಬಿದ್ದು, ಅಕ್ಟೋಬರ್ 15ರಿಂದ 19ರವರೆಗೆ ಯಾವುದೇ ನೌಕರರಿಗೆ ರಜೆ ನೀಡಲಾಗುವುದಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಅನಿವಾರ್ಯ ಕಾರಣ ಹೊರತುಪಡಿಸಿ ಯಾವುದೇ ರಜೆಯನ್ನು ಅನುಮತಿಸಬಾರದು ಎಂದು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಎಂದು ಘೋಷಿಸಲಾಗಿರುವುದರಿಂದ, ಜನರಿಗೆ ನಿರಂತರ ಮತ್ತು ಸಮರ್ಪಕ ಸಾರಿಗೆ ಸೇವೆ ಒದಗಿಸುವುದು ನಿಗಮದ ಕರ್ತವ್ಯವಾಗಿದೆ ಎಂದು ಕೆಎಸ್‌ಆರ್ಟಿಸಿ ತಿಳಿಸಿದೆ.

ಹಾಗೆಯೇ, “ನೋ ವರ್ಕ್ ನೋ ಪೇ” ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲಾಗಿದ್ದು, ಮುಷ್ಕರ ಅಥವಾ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನೌಕರರಿಗೆ ವೇತನ ನೀಡುವುದಿಲ್ಲ ಎಂದು ಎಚ್ಚರಿಸಲಾಗಿದೆ.ಇದನ್ನು ಓದಿ –ರಾಜ್ಯ ಸರ್ಕಾರದಿಂದ IAS ಅಧಿಕಾರಿಗಳ ವರ್ಗಾವಣೆ

ರಾಜ್ಯದಲ್ಲಿ ಈ ಆದೇಶದಿಂದ ಸಾರಿಗೆ ನೌಕರರ ಹೋರಾಟದ ತೀವ್ರತೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

  • ಸಚಿವ ಸ್ಥಾನ ಆಕಾಂಕ್ಷಿಗಳ ದೆಹಲಿ ಭೇಟಿ ತಪ್ಪಲ್ಲ: ಸಿಎಂ ಸಿದ್ದರಾಮಯ್ಯ
    by Team Varthaman
    April 13, 2026
  • ರಾಜ್ಯಾದ್ಯಂತ ತಾಪಮಾನ ಏರಿಕೆ ಎಚ್ಚರಿಕೆ
    by Team Varthaman
    April 13, 2026
  • ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶ
    by Team Varthaman
    April 12, 2026
  • ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ
    by Team Varthaman
    April 12, 2026
  • PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
    by Team Varthaman
    April 12, 2026
ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
ಅಕ್ರಮ ಗಣಿಗಾರಿಕೆ ಪ್ರಕರಣ : ಜನಾರ್ದನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ
₹2,350 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಅಮೆರಿಕ ಒತ್ತಡದ ನಡುವೆಯೂ ಭಾರತ–ರಷ್ಯಾ S-400 ಕ್ಷಿಪಣಿ ಒಪ್ಪಂದ ಚರ್ಚೆ
ಅಕ್ರಮ ಹಣ ವರ್ಗಾವಣೆ ಪ್ರಕರಣ: ತೆಲುಗು ನಟ ಮಹೇಶ್ ಬಾಬುಗೆ ಇ.ಡಿ ಸಮನ್ಸ್
TAGGED:Bus strikeKarnataka GovtKSRTCKSRTC Strikelatestnews
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Trending

24 ಕ್ಯಾರಟ್ ಚಿನ್ನದಲ್ಲಿ ₹12,000 ಭಾರಿ ಏರಿಕೆ!

Team Varthaman
Team Varthaman
May 16, 2025
ಹೊಸ ವರ್ಷಾಚರಣೆ: ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ
ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ ದುರಂತ – 9 ಭಕ್ತರ ದುರ್ಮರಣ
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಲಾರಿ–ಬೈಕ್ ಡಿಕ್ಕಿ: ಮೂವರು ಸಾವು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?