- SBI, HDFC, ICICI ಸೇರಿದಂತೆ ಪ್ರಮುಖ ಬ್ಯಾಂಕುಗಳಿಂದ ಹೊಸ ನಿಯಮಗಳು ಜಾರಿಗೆ
ನವದೆಹಲಿ, ಏಪ್ರಿಲ್ 30: ಮೇ 1, 2025 ರಿಂದ ಭಾರತದಲ್ಲಿ ಎಟಿಎಂ ವಹಿವಾಟುಗಳ ಮೇಲಿನ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ವಿವಿಧ ಪ್ರಮುಖ ಬ್ಯಾಂಕುಗಳು ನಿರ್ಧರಿಸಿವೆ. SBI, HDFC, ICICI ಹಾಗೂ ಇತರ ಪ್ರಮುಖ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಕುರಿತು ಮಾಹಿತಿ ನೀಡಿದ್ದು, ಉಚಿತ ವಹಿವಾಟು ಮಿತಿಯನ್ನು ಮೀರಿದ ನಂತರ ಹೆಚ್ಚಿನ ಶುಲ್ಕಗಳನ್ನು ವಿಧಿಸಲಾಗುತ್ತದೆ.
ಪ್ರಸ್ತುತ, ಉಚಿತ ಎಟಿಎಂ ವಹಿವಾಟು ಮಿತಿಯನ್ನು ಮೀರಿದ ಗ್ರಾಹಕರಿಗೆ ಪ್ರತಿ ಹಣಕಾಸು ವಹಿವಾಟಿಗೆ 21 ರೂ. ಶುಲ್ಕವಿತ್ತು. ಹೊಸ ನಿಯಮದ ಪ್ರಕಾರ, ಈ ಶುಲ್ಕವನ್ನು 23 ರೂ.ಗೆ ಏರಿಸಲಾಗಿದೆ. ಈ ಜೊತೆಗೆ ಜಿಎಸ್‌ಟಿ ಸೇರಿಸಲಾಗುವುದು. ಹಣಕಾಸುೇತರ ವಹಿವಾಟುಗಳಿಗೂ ಇದೀಗ 11 ರೂ. ಶುಲ್ಕ ವಿಧಿಸಲಾಗುತ್ತದೆ.
ಉಚಿತ ಎಟಿಎಂ ವಹಿವಾಟಿನ ಮಿತಿಗಳು ಹೀಗಿವೆ:
- ಬ್ಯಾಂಕ್ ಸ್ವಂತ ಎಟಿಎಂಗಳು: ಪ್ರತಿ ತಿಂಗಳು 5 ಉಚಿತ ವಹಿವಾಟುಗಳು
- ಇತರ ಬ್ಯಾಂಕುಗಳ ಎಟಿಎಂಗಳು (ಮೆಟ್ರೋ ನಗರಗಳಲ್ಲಿ): 3 ಉಚಿತ ವಹಿವಾಟುಗಳು
- ಇತರ ಬ್ಯಾಂಕುಗಳ ಎಟಿಎಂಗಳು (ಮೆಟ್ರೋ ಅಲ್ಲದ ನಗರಗಳಲ್ಲಿ): 5 ಉಚಿತ ವಹಿವಾಟುಗಳು
ಈ ಮಿತಿಗಳನ್ನು ಮೀರಿದಾಗ ಹೊಸ ಪ್ರಮಾಣದ ಶುಲ್ಕಗಳು ಅನ್ವಯವಾಗುತ್ತವೆ. ಉಚಿತ ವಹಿವಾಟುಗಳ ಸಂಖ್ಯೆಯು ರಾಜ್ಯ, ಸ್ಥಳ ಮತ್ತು ಬ್ಯಾಂಕಿನ ನಿಯಮಗಳ ಮೇಲೆ ನಿರ್ಧರಿಸಲಾಗುತ್ತದೆ.
ಬ್ಯಾಂಕುಗಳ ಪ್ರಕಟಣೆಗಳು:
HDFC ಬ್ಯಾಂಕ್ ಹೇಳಿಕೆಯಲ್ಲಿ, “ಮೇ 1 ರಿಂದ ಉಚಿತ ಮಿತಿಯನ್ನು ಮೀರಿದ ಹಣಕಾಸು ವಹಿವಾಟಿಗೆ 23 ರೂ. ಹಾಗೂ ಹಣಕಾಸುೇತರ ವಹಿವಾಟಿಗೆ 11 ರೂ. ಶುಲ್ಕ ವಿಧಿಸಲಾಗುವುದು” ಎಂದು ತಿಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹ ಈ ಬಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಇತರೆ ಬ್ಯಾಂಕುಗಳು ಕೂಡ ತಮ್ಮ ಗ್ರಾಹಕರಿಗೆ ಸೂಕ್ತವಾಗಿ ಮಾಹಿತಿ ನೀಡಿವೆ.ಇದನ್ನು ಓದಿ –ರಜಾದಿನಗಳಲ್ಲೂ ಸಬ್‌ರಿಜಿಸ್ಟ್ರಾರ್ ಕಚೇರಿಗಳು ತೆರೆಯಲು ಸೂಚನೆ
ಹೀಗಾಗಿ ಗ್ರಾಹಕರು ಮುಂದಿನ ದಿನಗಳಲ್ಲಿ ಎಟಿಎಂ ಬಳಕೆಯಲ್ಲಿ ಹೆಚ್ಚು ಎಚ್ಚರತೆ ವಹಿಸುವುದು ಅಗತ್ಯವಾಗಿದೆ.