ಬೆಂಗಳೂರು: ನಗರದಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದ್ದು, ತಾಯಿ ಮತ್ತು ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ನಗೊಂಡನಹಳ್ಳಿಯಲ್ಲಿ ನಡೆದಿದೆ.
ಮೃತರು:
- ತಾಯಿ: ರಚಿತಾ ರೆಡ್ಡಿ (46)
- ಮಗಳು: ಶ್ರೀಜಾ ರೆಡ್ಡಿ (24)
ಶ್ರೀಜಾ ರೆಡ್ಡಿ ಖಾಸಗಿ ಕಂಪನಿಯಲ್ಲಿ ಡೇಟಾ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ-ಮಗಳು ಇಬ್ಬರೂ ಮೂಲತಃ ಆಂಧ್ರಪ್ರದೇಶದವರು. ಅವರು ನಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಘಟನೆ ವಿವರ: ಇಂದು ಬೆಳಿಗ್ಗೆ ಶ್ರೀಜಾ ರೆಡ್ಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಾಯಿ ರಚಿತಾ ರೆಡ್ಡಿ ತಮ್ಮ ಅಳಿಯನಿಗೆ ಮಾಹಿತಿ ನೀಡಿದ್ದಾರೆ. ನಂತರ ತಾನೂ ಬದುಕಲು ಇಚ್ಛೆ ಇಲ್ಲವೆಂದು ತಿಳಿಸಿ, ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದನ್ನು ಓದಿ –ದೇಶದ 2ನೇ ಅತಿದೊಡ್ಡ ಕೇಬಲ್ ಸೇತುವೆ ‘ಸಿಗಂದೂರು ಸೇತುವೆ’ ಲೋಕಾರ್ಪಣೆ
ಪೊಲೀಸರ ತಪಾಸಣೆ:
ಘಟನೆ ನಡೆದ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ಮುಂದುವರಿಯುತ್ತಿದೆ.