ಬೆಂಗಳೂರು: ಮಾರ್ಚ್ 3ರಂದು ಕೇತುಗ್ರಸ್ತ ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ಹೋಳಿ ಹಬ್ಬದಂದೇ ಆಕಾಶದಲ್ಲಿ ಕೆಂಪು ಬಣ್ಣದ ಚಂದ್ರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ ಮಾಸದ ಹುಣ್ಣಿಮೆಯ ದಿನವೇ ಈ ಗ್ರಹಣ ಸಂಭವಿಸುವುದಾಗಿ ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಭಾರತದಲ್ಲೂ ಈ ಗ್ರಹಣ ಗೋಚರವಾಗಲಿದ್ದು, ಕರ್ನಾಟಕದಲ್ಲಿ ಸುಮಾರು 25 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದೆ. ಭಾರತದಲ್ಲಿ ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯವಾಗಲಿದೆ ಎಂದು ತಿಳಿಸಲಾಗಿದೆ.
ಗ್ರಹಣದ ವೇಳೆ ಅನುಸರಿಸಬೇಕಾದ ಆಚರಣೆಗಳು
– ಗ್ರಹಣದ ಮೊದಲು ಹಾಗೂ ಮೋಕ್ಷದ ನಂತರ ಮನೆ ಮತ್ತು ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸುವುದು
– ಧ್ಯಾನ, ಭಜನೆ, ಕೀರ್ತನೆಗಳಲ್ಲಿ ತೊಡಗುವುದು
– ಚಂದ್ರನಿಗೆ ಸಂಬಂಧಿಸಿದ ಮಂತ್ರಗಳು ಹಾಗೂ ಮಹಾಮೃತ್ಯುಂಜಯ ಮಂತ್ರ ಪಠಿಸುವುದು
– ಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡುವುದು
– ದೇವರ ವಿಗ್ರಹಗಳಿಗೆ ಗಂಗಾಜಲ ಸಿಂಪಡಿಸಿ ದರ್ಬೆ ಕಟ್ಟಿ ಇಡುವುದು
– ಆಹಾರ, ಪಾನೀಯಗಳ ಮೇಲೆ ದರ್ಬೆ ಅಥವಾ ತುಳಸಿ ಇಡುವುದು
ಗ್ರಹಣದಂದು ಮಾಡಬಾರದ ಕಾರ್ಯಗಳು
– ಶುಭಕಾರ್ಯಗಳನ್ನು ನೆರವೇರಿಸುವುದು ನಿಷಿದ್ಧ
– ಮದುವೆ, ಗೃಹಪ್ರವೇಶ, ಹೊಸ ವಾಹನ ಖರೀದಿ ಅಥವಾ ಹೊಸ ಉದ್ಯೋಗ ಆರಂಭ ಮಾಡುವುದು ಒಳ್ಳೆಯದಲ್ಲ
– ಗ್ರಹಣ ಸಮಯದಲ್ಲಿ ಆಹಾರ ತಯಾರಿಕೆ ಹಾಗೂ ಸೇವನೆ ಮಾಡಬಾರದು
– ಗರ್ಭಿಣಿಯರು ಅನಾವಶ್ಯಕವಾಗಿ ಹೊರಗೆ ಹೋಗುವುದು ತಪ್ಪಿಸಬೇಕು
ಈ ರಕ್ತಚಂದ್ರಗ್ರಹಣದ ವಿಸ್ಮಯವನ್ನು ವೀಕ್ಷಿಸಲು ಆಸಕ್ತರು ಸುರಕ್ಷಿತ ವಿಧಾನಗಳನ್ನು ಅನುಸರಿಸುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.








