- ಕೊಮಾರನಹಳ್ಳಿ ರಂಗನಾಥಸ್ವಾಮಿ ರಥೋತ್ಸವ ಪ್ರಯುಕ್ತ
ಹಿರಿಯೂರು : ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನ ನಾಡಿಗ್ ಬಂಧುಗಳ ಸಮ್ಮಿಲನ ಕ್ರಿಕೆಟ್ ಕ್ರೀಡಾಕೂಟ ಹಿರಿಯೂರಿನ ವಿಜ್ಙಾನ ಕಾಲೇಜು ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಕೊಮಾರನಹಳ್ಳಿ ರಂಗನಾಥ ಸ್ವಾಮಿ ದೇವರ ರಥೋತ್ಸವದ ಅಂಗವಾಗಿ ನಡೆದ ಈ ಕ್ರೀಡಾ ಕೂಟದಲ್ಲಿ ಮೂರು ತಂಡಗಳು ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯದಲ್ಲಿ ಮಲೇಬೆನ್ನೂರು ಮಾಸ್ಟರ್ಸ್ , ಕುಮಾರನಹಳ್ಳಿ ಕಿಂಗ್ ಹಾಗೂ ಹಿರಿಯೂರು ಹಿಟ್ಟರ್ಸ್ ತಂಡಗಳು ಪಾಲ್ಗೊಂಡಿದ್ದವು.
ಈ ಮೂರು ತಂಡಗಳ ಕಪ್ತಾನರಾಗಿ ಪ್ರಮುಕ್ತ ನಾಡಿಗ್, ಸಚ್ಚಿನ್ ನಾಡಿಗ್ ಹಾಗೂ ಅನುಪ್ ಶಾಸ್ತ್ರಿ ದೊಡ್ಡವಾಡ ಕ್ರೀಡಾ ಕೂಟವನ್ನು ಸಮರ್ಥವಾಗಿ ನಿರ್ವಹಿಸಿದರು.
ಹಿರಿಯ ಪತ್ರಕರ್ತ ಕೆ ಎನ್ ರವಿ ಟೆಪ್ ಕಟ್ ಮಾಡಿ ಉದ್ಘಾಟಿಸಿ ಶುಭ ಕೋರಿ, ಟಾಸ್ ಹಾಕಿ ಪಂದ್ಯಕ್ಕೆ ಚಾಲನೆ ನೀಡಿದರು.
ಸೀಮಿತ ಓವರ್ ಗಳ ಈ ಪಂದ್ಯಾವಳಿಯಲ್ಲಿ ಮೊದಲಿಗೆ ಮಲೇಬೆನ್ನೂರು ಮಾಸ್ಟರ್ಸ್ ಹಾಗೂ ಕೊಮಾರನಹಳ್ಳಿ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮಲೇಬೆನ್ನೂರು ತಂಡ ಉತ್ತಮ ಬ್ಯಾಟಿಂಗ್ ಹಾಗೂ ಬೋಲಿಂಗ್ ಪ್ರದರ್ಶನ ಗೆಲುವಿನ ನಗೆ ಬೀರಿದರು.

ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಹಿರಿಯೂರು ಹಿಟ್ಟರ್ಸ್ ಹಾಗೂ ಕೊಮಾರನಹಳ್ಳಿ ಕಿಂಗ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹಿರಿಯೂರು ಹಿಟ್ಟರ್ಸ್ ತಂಡ ಜಯಭೇರಿ ಬಾರಿಸಿದರು.
ಹಿರಿಯೂರು ಹಿಟ್ಟರ್ಸ್ ಗೆ ಕಪ್ :
ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಮಲೇಬೆನ್ನೂರು ಮಾಸ್ಟರ್ಸ್ ವಿರುದ್ದ ಹಿರಿಯೂರು ಹಿಟ್ಟರ್ಸ್ ತಂಡ ಕಪ್ ಗೆದ್ದು ಬೀಗಿದರು. ಹಿಟ್ಟರ್ಸ್ ತಂಡ ಆಟಗಾರರು ನಡೆಸಿದ ಸಾಂಘಿಕ ಹೋರಾಟದ ನಡೆವೆಯೂ ಬೋಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಪ್ ತಮ್ಮದಾಗಿಸಿಕೊಂಡರು .

ಪಂದ್ಯದ ವಿವರ :
- ಕಪ್ ವಿಜೇತರು – ಹಿರಿಯೂರು ಹಿಟ್ಟರ್ಸ್
- ಎರಡನೇ ಸ್ಥಾನ – ಮಲೇಬೆನ್ನೂರು ಮಾಸ್ಟರ್ಸ್
- 3ನೇ ಸ್ಥಾನ – ಕೊಮಾರನಹಳ್ಳಿ ಕಿಂಗ್ಸ್
ಫೈನಲ್ಸ್ – ಹಿರಿಯೂರು ಹಿಟ್ಟರ್ಸ್ vs ಮಲೇಬೆನ್ನೂರು ಮಾಸ್ಟರ್ಸ್, ಹಿರಿಯೂರು ಹಿಟ್ಟರ್ಸ್ 18 ರನ್ ಗಳಿಂದ ಗೆದ್ದರು
- ಅತ್ಯುತ್ತಮ ಬ್ಯಾಟ್ಸ್ ಮನ್ – ಅವಿನಾಶ್ ಭಟ್
- ಅತ್ಯುತ್ತಮ ಬೌಲರ್ – ಅಭಿನವ್ ನಾಡಿಗ್
- ಅತ್ಯುತ್ತಮ ಆಲ್ ರೌಂಡರ್ – ಪ್ರತೀಕ್ ಪಿ ಡಿ
ಈ ಕ್ರಿಕೆಟ್ ಪಂದ್ಯದಲ್ಲಿ ರಾಮೇಶ್ವರ್ ರಾವ್ , ಅನುಷಾ ಗಿರೀಶ್ , ರಂಗನಾಥ್ ನಾಡಿಗ್ , ಪ್ರದೀಪ್ ಜಿಗಳಿ ಸೊಗಸಾದ ವೀಕ್ಷಕ ವಿವರಣೆ ನೀಡಿದರು.
ಸಂಜೆ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ವಿಶ್ವನಾಥ್ ಕುಲ್ಕರ್ಣಿ ಹಾಗೂ ಕೆ ಎನ್ ರವಿ , ಪಂದ್ಯಾವಳಿಯ ಸೂತ್ರದಾರರಾದ ಎನ್ ಎಸ್ ಮಂಜುನಾಥ್ ,ಎನ್ ಕೆ ಶಶಿಕಾಂತ್ , ಎನ್ ಎಸ್ ರಂಗನಾಥ್ , ಸಂತೋಷ್ ನಾಡಿಗೇರ್ , ಕಿರಣ್ ಜ್ಯೋತಿ, ಪ್ರದೀಪ್ ನಾಡಿಗ್, ಎನ್.ಕೆ.ರಾಜಶೇಖರ್ ಮತ್ತು ಎನ್.ಕೆ.ಗಿರೀಶ್ ಸೇರಿದಂತೆ ಕುಟುಂಬ ಸದಸ್ಯರು, ವಿಜೇತ ತಂಡಗಳಿಗೆ, ವೈಯಕ್ತಿಕ ಬಹುಮಾನ ವಿತರಣೆ ಮಾಡಿದರು . ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .
- ಪಹಲ್ಗಾಮ್ ಉಗ್ರರು ಚೆನ್ನೈನಿಂದ ಶ್ರೀಲಂಕಾಗೆ ಪರಾರಿ?
- ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
- ಯೂನಿಯನ್ ಬ್ಯಾಂಕ್‌ನಲ್ಲಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗೋವಾ ಶಿರಗಾವ್ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
- ಮೈಸೂರು ನಗರದ ವಿವಿಧೆಡೆ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಬೆದರಿಕೆ