ಹೈದರಾಬಾದ್: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಖ್ಯಾತ ತೆಲುಗು ಗಾಯಕಿ ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ಮಂಗಳವಾರ ರಾತ್ರಿ ತೆಲಂಗಾಣದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ ಮತ್ತು 9 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಹೈದರಾಬಾದ್ ಚೆವೆಲ್ಲಾದಲ್ಲಿರುವ ತ್ರಿಪುರಾ ರೆಸಾರ್ಟ್ನಲ್ಲಿ ಗಾಯಕಿ ಮಂಗ್ಲಿ ಬರ್ತ್ ಡೇ ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದಾರೆ.
ಇದನ್ನು ಓದಿ -19 ವರ್ಷದ ಯುವಕನಿಗೆ ಹೃದಯಾಘಾತ – ಸ್ಥಳದಲ್ಲೇ ದುರ್ಮರಣ
ಒಂಬತ್ತು ಜನ ಗಾಂಜಾ ಸೇವಿಸಿರುವುದು ಕಂಡುಬAದಿದೆ. ವಿದೇಶಿ ಮದ್ಯ ಸಹ ಪತ್ತೆಯಾಗಿದೆ. ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನುಮತಿಯಿಲ್ಲದೆ ವಿದೇಶಿ ಮದ್ಯ ಆಮದು ಮಾಡಿಕೊಂಡಿದ್ದಕ್ಕಾಗಿ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.