ಕುತಂತ್ರಿ ನಿಲುವನ್ನು ಮುಂದುವರೆಸುತ್ತಿರುವ ಪಾಕಿಸ್ತಾನಕ್ಕೆ ಟರ್ಕಿ ಇದೀಗ ಸ್ಪಷ್ಟ ಬೆಂಬಲ ನೀಡಿದ್ದು, 6 ಟರ್ಕಿ ಸೇನಾ ವಿಮಾನಗಳು ಪಾಕಿಸ್ತಾನದ ಭೂಮಿಯಲ್ಲಿ ಯಶಸ್ವಿಯಾಗಿ ಬರುವ ಮೂಲಕ ಆ ಬೆಂಬಲವನ್ನು ಪ್ರತಿಬಿಂಬಿಸಿದೆ.
ಗಡಿಭಾಗದಲ್ಲಿ ಹೆಚ್ಚುತ್ತಿರುವ ಸವಾಲುಗಳು ಮತ್ತು ಆತಂಕದ ನಡುವಿನ ಈ ಬೆಳವಣಿಗೆ, ವಿಶೇಷವಾಗಿ ಕಾಶ್ಮೀರ ವಿಚಾರದಲ್ಲಿ ಭಾರತ-ಪಾಕಿಸ್ತಾನ ನಡುವೆ ತೀವ್ರವಾಗುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಪ್ರಾದೇಶಿಕ ಅಸ್ಥಿರತೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಟರ್ಕಿಯ ಸೇನಾ ಬೆಂಬಲ ಪಾಕಿಸ್ತಾನಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಅಂದಾಜಿಸಲಾಗಿದೆ.ಇದನ್ನು ಓದಿ –ಮಂತ್ರಾಲಯ ಮಠದಲ್ಲಿ ಭದ್ರತಾ ಬಿಗಿತ: ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ತಪಾಸಣೆ
ಚೀನಾದಿಂದಲೂ ಪಾಕಿಸ್ತಾನಕ್ಕೆ ಡ್ರೋನ್‌ಗಳು ಮತ್ತು ಇತರೆ ರಕ್ಷಣಾ ಉಪಕರಣಗಳ ರೂಪದಲ್ಲಿ ಬೆಂಬಲ ಲಭಿಸುತ್ತಿರುವುದರಿಂದ, ಟರ್ಕಿಯ ಹೊಸ ಸಹಾಯ ಪಾಕ್ ಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.