ಉಡುಪಿ: ಬಡತನ ಮತ್ತು ಸಾಲದ ಬಲೆಗೆ ಸಿಲುಕಿದ ತಂದೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ, ರಕ್ಷಿಸಲು ಹೋದ ಮಗನೂ ಮೃತಪಟ್ಟಿರುವ ದುರ್ಘಟನೆ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ನಡೆದಿದೆ.
ಅಂಕದಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಧವ ದೇವಾಡಿಗ ಎಂಬವರು ಇಂದು ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದರು. ಈ ದೃಶ್ಯ ನೋಡಿ ಆತಂಕಗೊಂಡ ಅವರ ಪುತ್ರ ಪ್ರಸಾದ್ ಕೂಡ ತಂದೆಯನ್ನು ಉಳಿಸಲು ಬಾವಿಗೆ ಹಾರಿದ್ದಾನೆ. ಆದರೆ ದುರಾದೃಷ್ಟವಶಾತ್ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇದನ್ನು ಕಂಡ ಪತ್ನಿ ತಾರಾ ದೇವಾಡಿಗ ಕೂಡ ರಕ್ಷಣೆಗೆ ಮುಂದಾದರೂ ಪತಿ ಮತ್ತು ಮಗ ಇಬ್ಬರನ್ನು ಉಳಿಸಲು ಸಾಧ್ಯವಾಗಲಿಲ್ಲ. ತಾರಾ ದೇವಾಡಿಗ ಬಾವಿಯ ಪೈಪ್ ಹಿಡಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.ಇದನ್ನು ಓದಿ –ರೈಲ್ವೆ ಇಲಾಖೆ: 9970 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ, ಬಾವಿಯಿಂದ ಮೃತದೇಹಗಳನ್ನು ಹೊರತೆಗೆಯಿತು. ತಾರಾ ದೇವಾಡಿಗ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.