ಬೆಂಗಳೂರು – ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ವಿರುದ್ಧ ಮುಂಬೈನ ಅಂಬೋಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಸಿನಿಮಾ ನಿರ್ದೇಶಕ ರಾಘವೇಂದ್ರ ಅವರಿಂದ 3.15 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ಪ್ರಕಾರ, ಹೊಸ ಸಿನಿಮಾದ ಶೂಟಿಂಗ್‌ಗೆ ಬರುವುದಾಗಿ ಹೇಳಿ ಧ್ರುವ ಸರ್ಜಾ 3.15 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದರೂ, ಶೂಟಿಂಗ್‌ಗೆ ಹಾಜರಾಗಲಿಲ್ಲ ಎಂಬುದು ಆರೋಪ.ಇದನ್ನು ಓದಿ –ಸೋಮವಾರದಿಂದ ವಿಧಾನಮಂಡಲ ಮಳೆಗಾಲ ಅಧಿವೇಶನ ಆರಂಭ
ಈ ಸಂಬಂಧ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗವಾಗುವ ನಿರೀಕ್ಷೆಯಿದೆ.