By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಚಾಮರಾಜನಗರದಲ್ಲಿ ತಾಯಿ ಹುಲಿ ಸೆರೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Chamrajnagar > ಚಾಮರಾಜನಗರದಲ್ಲಿ ತಾಯಿ ಹುಲಿ ಸೆರೆ
ChamrajnagarKarnataka

ಚಾಮರಾಜನಗರದಲ್ಲಿ ತಾಯಿ ಹುಲಿ ಸೆರೆ

Team Varthaman
Last updated: January 10, 2026 11:25 AM
Team Varthaman
Published: January 10, 2026
Share
SHARE

ಚಾಮರಾಜನಗರ: ಕಳೆದ ಒಂದೂವರೆ ತಿಂಗಳಿನಿಂದ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡು ಏಳು ಗ್ರಾಮಗಳ ಜನರಲ್ಲಿ ಭಾರೀ ಆತಂಕ ಮೂಡಿಸಿದ್ದ ತಾಯಿ ಹುಲಿ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.

ಆದರೆ ಅದರ ನಾಲ್ಕು ಮರಿ ಹುಲಿಗಳು ನಾಪತ್ತೆಯಾಗಿರುವುದು ಅರಣ್ಯ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ.

ಕಾಡಿನಿಂದ ಬಹುದೂರ ಇರುವ ಗ್ರಾಮ ಪ್ರದೇಶದಲ್ಲಿ, ರೈತರೊಬ್ಬರ ತೋಟದಲ್ಲಿ ತಾಯಿ ಹುಲಿ ಹಾಗೂ ಅದರ ನಾಲ್ಕು ಪಡ್ಡೆ ಮರಿಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ್ದವು. ಈ ಐದು ಹುಲಿಗಳ ಸಂಚಾರದ ದೃಶ್ಯ ತೋಟದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಬಳಿಕ ಅರಣ್ಯ ಇಲಾಖೆ ನೂರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಐದು ಸಾಕಾನೆಗಳೊಂದಿಗೆ ಹತ್ತು ದಿನಗಳ ಕಾಲ ಹುಲಿ ಸೆರೆ ಕಾರ್ಯಾಚರಣೆ ನಡೆಸಿತ್ತು.

Join WhatsApp Group

ಕಾರ್ಯಾಚರಣೆಯ ವೇಳೆ ಸುಮಾರು ಎಂಟು ದಿನಗಳ ಹಿಂದೆ ಮತ್ತೊಂದು ಗಂಡು ಹುಲಿ ಸೆರೆಸಿಕ್ಕಿತ್ತು. ಆದರೆ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದರಿಂದ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ನಿನ್ನೆ ಬೆಳಗ್ಗೆ ಬುಲೆಟ್ ಮಾದಪ್ಪ ಎಂಬ ರೈತರಿಗೆ ಸೇರಿದ ಬಾಳೆ ತೋಟದಲ್ಲಿ ಅಳವಡಿಸಿದ್ದ ಬೃಹತ್ ಬೋನಿಗೆ ತಾಯಿ ಹುಲಿ ಸೆರೆಯಾಗಿದೆ. ಬೋನಿನಲ್ಲಿ ಕಟ್ಟಿದ್ದ ಹಸುವನ್ನು ಹುಲಿ ಕೊಂದುಹಾಕಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಕುಮಾರಸ್ವಾಮಿ ಎಂಬುವರ ತೋಟದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬೆಳಗಿನ ಜಾವ ಹುಲಿಯೊಂದು ಸಂಚರಿಸುತ್ತಿರುವ ದೃಶ್ಯವೂ ದಾಖಲಾಗಿದೆ. ಬೋನಿಗೆ ಸಿಕ್ಕಿರುವ ಹುಲಿ ಅದೇನಾ ಎಂಬುದು ವೈಜ್ಞಾನಿಕ ಪರಿಶೀಲನೆಯಿಂದ ದೃಢಪಡಬೇಕಿದೆ.ಇದನ್ನು ಓದಿ –ಗ್ರೇಟರ್ ಮೈಸೂರು ಗೆ ಅಧಿಸೂಚನೆ

ತಾಯಿ ಹುಲಿ ಸೆರೆಯಾದ ಬಳಿಕ ಮರಿ ಹುಲಿಗಳನ್ನು ಕೂಡ ಶೀಘ್ರ ಪತ್ತೆಹಚ್ಚಿ ಸೆರೆಹಿಡಿಯಬೇಕು. ಇಲ್ಲವಾದರೆ ರೈತರು ಮತ್ತು ಗ್ರಾಮಸ್ಥರು ನಿತ್ಯ ಆತಂಕದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ .

  • ಉಡುಗೊರೆ ಹೊರೆಯಾಗದಿರಲಿ
    by Team Varthaman
    May 16, 2026
  • ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    by Team Varthaman
    May 16, 2026
  • ಇಂಧನ ದರ ಏರಿಕೆ: ಖಾಸಗಿ ಬಸ್‌ ಪ್ರಯಾಣ ದರ ಹೆಚ್ಚಳ
    by Team Varthaman
    May 16, 2026
  • ಪೆಟ್ರೋಲ್‌, ಡೀಸೆಲ್ ದರ ಏರಿಕೆ ಹಿಂಪಡೆಯಲಿ: ಸಿದ್ದರಾಮಯ್ಯ
    by Team Varthaman
    May 16, 2026
  • ದರ್ಶನ್‌ಗೆ ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ
    by Team Varthaman
    May 15, 2026
ಮೈಸೂರಿನಲ್ಲಿ ವೈಯಕ್ತಿಕ ದ್ವೇಷದಿಂದ ಯುವಕನ ಬರ್ಬರ ಹತ್ಯೆ
ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಗುಪ್ತಚರ ಇಲಾಖೆ: 3717 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕೆಆರ್‌ಎಸ್ ಡ್ಯಾಂ ಭರ್ತಿಗೆ ಇನ್ನು 11 ಅಡಿ ಬಾಕಿ
ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ
TAGGED:breakingnewsChamarajanagarlatestnewstiger
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaWeather

ರಾಜ್ಯದಾದ್ಯಂತ ಚದುರಿದ ಪೂರ್ವ ಮುಂಗಾರು ಮಳೆಯ ಮುನ್ಸೂಚನೆ

Team Varthaman
Team Varthaman
April 25, 2025
ಭಾರತದ ಆಮದುಗಳ ಮೇಲೆ 24 ಗಂಟೆಗಳಲ್ಲಿ ಭಾರೀ ಸುಂಕ ಹೆಚ್ಚಳ: ಟ್ರಂಪ್
31 ಕೃಷ್ಣಮೃಗಗಳ ಸಾವು: HS ಬ್ಯಾಕ್ಟೀರಿಯಾ ಕಾರಣವೆಂದು ದೃಢ
ಹಿರಿಯ ಪತ್ರಕರ್ತ , ವಿಧಾನ ಪರಿಷತ್ತಿನ ಮಾಜಿ ಸದಸ್ಯಪಿ . ರಾಮಯ್ಯ ಇನ್ನಿಲ್ಲ
ಕೋಶ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?