ಮೈಸೂರು :ಮೈಸೂರಿನ ಹೂಟಗಳ್ಳಿ ಕೆ.ಎಚ್.ಬಿ.ಕಾಲೋನಿ ಗಾಯತ್ರಿ ವಿಪ್ರ ಸಂಘದ ಆಶ್ರಯದಲ್ಲಿ ಅನಂತೇಶ್ವರ ಭವನದಲ್ಲಿ ಋಗ್ವೇದ ಹಾಗೂ ಯಜುರ್ವೇದ ಸಾಮೂಹಿಕ ಉಪಾಕರ್ಮ ಶನಿವಾರ ನೆರವೇರಿತು.
ವೇದ ವಿದ್ವಾಂಸ ನಾರಾಯಣ ಭಟ್ ಹಾಗೂ ಮಂಜುನಾಥ ಭಟ್ ಅವರ ಪೌರೋಹಿತ್ಯದಲ್ಲಿ ಶಾಸ್ತ್ರಬದ್ಧವಾಗಿ ವಿಪ್ರರಿಗೆ ಉಪಾಕರ್ಮ ನೆರವೇರಿತು.
ಹೂಟಗಳ್ಳಿ ಗಾಯತ್ರಿ ವಿಪ್ರ ಸಂಘದ ಅಧ್ಯಕ್ಷ ನಾರಾಯಣ ಭಟ್, ಉಪಾಧ್ಯಕ್ಷ ಜಗದೀಶ ಪ್ರಸಾದ್, ಮಹೇಶ್, ರಘು, ಮಂಜುನಾಥ ಜೋಯಿಸ್, ಚಂದ್ರಮೌಳಿ, ಎಸ್.ಆರ್.ಭಟ್ ಅವರು ಇದ್ದರು.