ಮೈಸೂರು: ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (ಸಿ.ಎಂ.ಐ.ಡಿ.ಪಿ) ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಮಂಜುರಾಗಿರುವ 50.00 ಕೋಟಿ ರೂಪಾಯಿಗಳ ಅನುದಾನದಡಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-5ರ ವಾರ್ಡ್ ನಂ.2 ಮಂಚೇಗೌಡನಕೊಪ್ಪಲು ವ್ಯಾಪ್ತಿಯಲ್ಲಿ ಅಂದಾಜು 5.82 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್ ಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಫೆನ್ಸಿಂಗ್ ಆಗಿರುವ ಮುಡಾ ಕ್ರೀಡಾಂಗಣವನ್ನು ಸಾರ್ವಜನಿಕರ ಬಳಕೆಗೆ ಉದ್ಘಾಟಿಸಿದರು. ಕಾಮಗಾರಿಯಲ್ಲಿ ಮಂಚೇಗೌಡನ ಕೊಪ್ಪಲು ವ್ಯಾಪ್ತಿಯಲ್ಲಿ ಮಹಾಜನ ಲೇಔಟ್ ಬಡಾವಣೆಯ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಕಟ್ಟೆಹೊಸೂರಿನ ದೊಡ್ಡ ಮಳೆನೀರು ಚರಂಡಿಯ ಪಕ್ಕದ ಅಡ್ಡ ರಸ್ತೆಗಳ ಮತ್ತು ಅರಳಿ ಮರದ ಪಕ್ಕದ ರಸ್ತೆಯ ರಸ್ತೆ ಮತ್ತು ಚರಂಡಿ, ಡೆಕ್ ಅಭಿವೃದ್ಧಿ ಹಾಗೂ ಮಂಚೇಗೌಡನಕೊಪ್ಪಲಿನ ಸರ್ಕಾರಿ ಕಾಲೇಜು ಹಿಂಭಾಗದ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ, ಗ್ರಾಮದ ಅಡ್ಡ ರಸ್ತೆಗಳ ಹಾಗೂ ಮಾರಿಗುಡಿ ಬೀದಿಯ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಎಲ್ಲಮ್ಮ ತಾಯಿ ದೇವಸ್ಥಾನದ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಹೆಬ್ಬಾಳು 2ನೇ ಹಂತದ ಅಡ್ಡ ರಸ್ತೆಗಳ ರಸ್ತೆ | ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಇದ್ದು , ಯು.ಜಿ.ಡಿ. ಕಾಮಗಾರಿಯಲ್ಲಿ ಮಾವಿನ ತೋಪಿನ ಹತ್ತಿರದ ರಸ್ತೆಯಿಂದ ಸೌದೇ ಡಿಪೋ ಮುಖಾಂತರ ಹೆಬ್ಬಾಳ್ ಮುಖ್ಯ ರಸ್ತೆಯವರೆಗೆ, ಸರ್ಕಾರಿ ಶಾಲೆ ಹಿಂಭಾಗದ ಅಡ್ಡ ರಸ್ತೆಗಳಲ್ಲಿ ಒಳಚರಂಡಿ ಕೊಳವೆಮಾರ್ಗ ಅಳವಡಿಸಿ ಯಂತ್ರಗುಂಡಿಗಳನ್ನು ನಿರ್ಮಿಸುವ ಕಾಮಗಾರಿಯಾಗಿದೆ.
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಡಿ.ರಾಮಚಂದ್ರು, ಯು.ರಮೇಶ್, ಪಟೇಲ್ ಗೋವಿಂದರಾಜು, ಇ.ರವೀಂದ್ರ, ದೊಡ್ಡೇಗೌಡ, ಮಾಜಿ ಉಪಮೇಯರ್ ಮಹದೇವಪ್ಪ, ಜಯರಾಮಚಾರಿ, ಪೈಲ್ವಾನ್ ನಾರಾಯಣ್, ನಗರಪಾಲಿಕೆ ಮಾಜಿ ಸದಸ್ಯ ಪ್ರೇಮ ಶಂಕರೇಗೌಡ, ವಾರ್ಡ್ ಅಧ್ಯಕ್ಷ ಆರ್.ಶ್ರೀಧರ್, ಮಹದೇವಮ್ಮ, ಸುಜಾತ, ಲೋಕೇಶ್, ಪುಟ್ಟರಾಜು, ಅವಿನಾಶ್, ಡೆಲ್ಲಿ ರವಿ,ಆಟೋ ಸತೀಶ್ ಗೌಡ, ದೇವರಾಜ ಬ್ಲಾಕ್ ಅಧ್ಯಕ್ಷ ಡಿ ನಾಗಭೂಷಣ್, ಮಾಜಿ ಮೇಯರ್ ಗಳಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಪಾಲಿಕೆ ಮಾಜಿ ಸದಸ್ಯ ಪೈಲ್ವಾನ್ ಶ್ರೀನಿವಾಸ್, ಜೆ.ಗೋಪಿ, ಪಾಲಿಕೆ ಸೂಪರಿಂಡೆಂಟ್ ಇಂಜಿನಿಯರ್ ಮಂಜು, ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್, ವಲಯ ಕಚೇರಿ 5 ರ ಅಭಿವೃದ್ಧಿ ಅಧಿಕಾರಿ ಹಿತೇಂದ್ರ,ಇಂಜಿನಿಯರ್ ಶಿಲ್ಪಾ, ಮುದ್ದು ಮಲ್ಲೇಗೌಡ ಸೇರಿ ಇನ್ನಿತರರು ಭಾಗಿಯಾಗಿದ್ದರು.








