ಚಾಮರಾಜನಗರ: ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ನಡೆದ ದುಃಖದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಕೇವಲ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಮೃತ ಬಾಲಕನನ್ನು ಕುಲಗಾಣ ಗ್ರಾಮದ ಮೂರ್ತಿ ಹಾಗೂ ಮಹೇಶ್ವರಿಯ ಪುತ್ರ ಉಲ್ಲಾಸ್ ಎಂದು ಗುರುತಿಸಲಾಗಿದೆ. ಈ ಹುಡುಗ ಬೇಗೂರಿನ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದನು.
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದ ಬಾಲಕನಿಗೆ ತಕ್ಷಣವೇ ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.ಇದನ್ನು ಓದಿ –ಮಂಡ್ಯ KSRTC ಬಸ್ ಡಿಕ್ಕಿ – ಇಬ್ಬರು ಬೈಕ್ ಸವಾರರ ದುರ್ಮರಣ
ಈ ಅನಾಹುತದಿಂದ ಕುಟುಂಬ ಹಾಗೂ ಗ್ರಾಮದ ಜನ ದುಃಖದಲ್ಲಿ ಮುಳುಗಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.