ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಪರಿಸ್ಥಿತಿಯನ್ನು ಪರಿಗಣಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ (ಮೇ 5) ಮಹತ್ವದ ಮುಚ್ಚಿದ ಸಮಾಲೋಚನಾ ಸಭೆ ನಡೆಸಲಿದೆ.
ಪಾಕಿಸ್ತಾನವು ಈ ಸಭೆಗೆ ಕೋರಿಕೆಯನ್ನಿಟ್ಟು, ಇಸ್ಲಾಮಾಬಾದ್ ಮನವಿ ಹಿನ್ನೆಲೆಯಲ್ಲಿ ಗ್ರೀಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪಾಕಿಸ್ತಾನವು ಪ್ರಸ್ತುತ 15 ಸದಸ್ಯರ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಗ್ರೀಸ್ ಈ ಮೇ ತಿಂಗಳಲ್ಲಿ ಅಧ್ಯಕ್ಷತೆಯ ವಹಿಸಿಕೊಂಡಿದೆ.
ಈ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ರಾಷ್ಟ್ರಗಳೊಂದಿಗೆ ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪಾಕಿಸ್ತಾನ, ಪನಾಮಾ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸೊಮಾಲಿಯಾ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.ಇದನ್ನು ಓದಿ –ಮೈಸೂರಿನಲ್ಲಿ ವೈಯಕ್ತಿಕ ದ್ವೇಷದಿಂದ ಯುವಕನ ಬರ್ಬರ ಹತ್ಯೆ
ಉಭಯ ದೇಶಗಳ ನಡುವಿನ ಯುದ್ಧೋನ್ಮಾದ ಮತ್ತು ಕಡೆಯ ದಿನಗಳಲ್ಲಿ ಉಂಟಾದ ಬೆಳವಣಿಗೆಯ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.