- ಇಂದು ನೊಂದಣಿಗೆ ಕೊನೆಯ ದಿನ
ಬೆಂಗಳೂರು: 2025ರ SSLC ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಪ್ರಕಟವಾಗಿದೆ. ಇವರು ಪರೀಕ್ಷೆ-2ಗೆ ಅರ್ಜಿ ಸಲ್ಲಿಸಲು ಮೇ 10, ಅಂದರೆ ಇಂದೇ ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ತಕ್ಷಣ ಸಂಬಂಧಿತ ಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದು, ಫಲಿತಾಂಶಗಳನ್ನು ಮೇ 2ರಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದರು. ವಿದ್ಯಾರ್ಥಿಗಳು ಫಲಿತಾಂಶವನ್ನು kseab.karnataka.gov.in ಅಥವಾ karresults.nic.in ನಲ್ಲಿ ಪರಿಶೀಲಿಸಬಹುದು.
ಅನುತ್ತೀರ್ಣರಾದವರಿಗೆ ಪರೀಕ್ಷೆ-2 ಮೇ 26ರಿಂದ ಜೂನ್ 2ರವರೆಗೆ ನಡೆಯಲಿದೆ. ವಿಶೇಷವಾಗಿ, ಈ ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶದಲ್ಲಿ ಶ್ರೇಷ್ಠತೆ ಪ್ರದರ್ಶಿಸಿದ ಟಾಪ್ 10 ಜಿಲ್ಲೆಗಳು:
- ದಕ್ಷಿಣ ಕನ್ನಡ – 91.12%
- ಉಡುಪಿ – 89.96%
- ಉತ್ತರ ಕನ್ನಡ – 83.19%
- ಶಿವಮೊಗ್ಗ – 82.29%
- ಕೊಡಗು – 82.21%
- ಹಾಸನ – 82.12%
- ಶಿರಸಿ – 80.21%
- ಚಿಕ್ಕಮಗಳೂರು – 77.9%
- ಬೆಂಗಳೂರು ಗ್ರಾಮಾಂತರ – 74.02%
- ಬೆಂಗಳೂರು ದಕ್ಷಿಣ – 72.3%
ಇತ್ತ, ಕಲಬುರಗಿ ಜಿಲ್ಲೆ ಶೇಕಡಾ 66.14ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.ಇದನ್ನು ಓದಿ –ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಶೇ.7.5 ರಷ್ಟು ಏರಿಕೆ
ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಪೋಷಕರಿಗೂ ಮನವಿ ಮಾಡಿದೆ.