By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: ಆಹಾರಕ್ಕೆ ರುಚಿ ಹಾಗೂ ವಿಶಿಷ್ಟ ಸುವಾಸನೆ ನೀಡುವ ಜಾಯಿಕಾಯಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಆಹಾರಕ್ಕೆ ರುಚಿ ಹಾಗೂ ವಿಶಿಷ್ಟ ಸುವಾಸನೆ ನೀಡುವ ಜಾಯಿಕಾಯಿ
Articles

ಆಹಾರಕ್ಕೆ ರುಚಿ ಹಾಗೂ ವಿಶಿಷ್ಟ ಸುವಾಸನೆ ನೀಡುವ ಜಾಯಿಕಾಯಿ

Team Varthaman
Last updated: June 1, 2025 4:40 AM
Team Varthaman
Published: June 1, 2025
Share
SHARE

ಆಹಾರಕ್ಕೆ ರುಚಿ, ವಿಶಿಷ್ಟ ಸುವಾಸನೆ ಹೆಚ್ಚಿಸುವ ವಿಶೇಷ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದ ಮಸಾಲೆ ಪದಾರ್ಥವೆಂದರೆ ಜಾಯಿ ಕಾಯಿ.ಈಗಿನ ಕಾಲದವರಾದ ನಾವು ನೀವು ಜಾಯಿಕಾಯಿ ಎಂದರೆ ಕಣ್ಣು ಬಾಯಿ ಬಿಡುತ್ತೇವೆ! ಏಕೆಂದರೆ ಅದನ್ನು ನೋಡಿರುವುದೂ ಇಲ್ಲ ಮತ್ತು ಅದರ ಬಗ್ಗೆ ಕೇಳಿರುವುದೂ ಇಲ್ಲ. ಆದರೆ ಹಿಂದಿನ ಕಾಲದಲ್ಲಿ ಜಾಕಾಯಿಗೆ ವಿಶೇಷವಾದ ಮಹತ್ವವಿತ್ತು. ಆಯುರ್ವೇದ ಪದ್ಧತಿಯಲ್ಲಿ ಇದು ತುಂಬಾ ಹೆಚ್ಚಾಗಿ ಬಳಕೆ ಆಗುತ್ತಿತ್ತು.

ಇಂದು ಕೇವಲ ಗ್ರಂಧಿಗೆ ಅಂಗಡಿಗಳಲ್ಲಿ ಮಾತ್ರ ಸಿಗುವ ಮಟ್ಟಿಗೆ ಜಾಕಾಯಿ ಬಂದು ತಲುಪಿದೆ. ಸಾಧಾರಣವಾಗಿ ಜಾಕಾಯಿ ಒಂದು ಮಸಾಲೆ ಪದಾರ್ಥವಾಗಿದ್ದು, ಜಾಯಿಕಾಯಿ ಗಿಡ ‘ ಜಾವಿತ್ರಿ ‘ ಮತ್ತು ‘ ಜಾಯಿಕಾಯಿ ‘ ಎಂಬ ಎರಡು ಬಗೆಯ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಎರಡಕ್ಕೂ ಕೂಡ ತಮ್ಮದೇ ಆದ ಆರೋಗ್ಯ ಪ್ರಯೋಜನಗಳು ಇವೆ. ಇದನ್ನು ಜತಿಫಲ್, ಜಾಕಾಯಿ, ಜಾಜಿಕಾಯಿ, ಜಾಪತ್ರೆ, ಜಾಧಿಕಾಯ್, ಅಟ್ರಮ್, ಜಾತಿಫಲಂ, ಸುರಭಿ, ಜವಂತ್ರಿ, ಜಾಫಲ್, ಜಾಯಿಕಾಯಿ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಸಾಂಬಾರ ಪದಾರ್ಥಗಳಲ್ಲಿ ಒಂದಾದ ಸುವಾಸನೆ ಭರಿತವಾದ ಜಾಕಾಯಿಯನ್ನು ಭಾರತ, ಬರ್ಮಾ, ಮಲೇಷಿಯಾ, ಇಂಡೋನೇಷಿಯಾ ಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನ ಪಡೆದಿರುವ ಜಾಯಿಕಾಯಿಗೆ ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಬಳಸುವ ಮಸಾಲೆ ಪದಾರ್ಥ ಇದಾಗಿದೆ.

ಜಾಕಾಯಿಯನ್ನು ಅಡಿಗೆಗೆ ಮಾತ್ರವಲ್ಲದೆ, ಆಯುರ್ವೇದ ಔಷಧೀಯವಾಗಿಯೂ, ಆರೋಗ್ಯ ರಕ್ಷಣೆಯಲ್ಲೂ ಬಳಸುತ್ತಾರೆ.

Join WhatsApp Group

ಮನೆಯಲ್ಲಿ ಜಾಯಿಕಾಯಿ ಇದ್ಯಾ..ಹಾಗಿದ್ರೆ ಆರೋಗ್ಯವೇ ನಿಮ್ಮೊಂದಿಗೆ ಇದ್ದಂತೆ, ಬನ್ನಿ ಏನೆಲ್ಲಾ ಉಪಯೋಗ ಇದೆ ಎಂದೂ ನಾವಿoದು ನೋಡೋಣ.

1) ತಾಂಬೂಲದಲ್ಲಿ ಜಾಕಾಯಿ ಸೇರಿಸಿ ಜಗಿದರೆ ಬಾಯಿ ದುರ್ವಾಸನೆ ದೂರವಾಗುತ್ತೆ. ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತೆ. ಅಲ್ಲದೇ ಕ್ರಿಮಿಗಳು ಸಾಯುತ್ತವೆ.

2) ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಿದ್ದರೆ ಹೃದಯದಲ್ಲಿನ ನೋವು ಶಮನವಾಗುತ್ತೆ.

3) ಜಾಕಾಯಿ ಚೂರ್ಣವನ್ನು ಒಂದು ಲೋಟ ಹಾಲಿನಲ್ಲಿ 1 ಚಮಚ ಕಲಸಿ ದಿನವೂ ಕುಡಿಯುತ್ತಿದ್ದರೆ, ದೇಹದ ಚರ್ಮವು ಕಾಂತಿಯಿಂದ ಹೊಳೆಯುತ್ತೆ.

4) ದೇಹದ ಚರ್ಮ ಸುಕ್ಕುಗಟ್ಟುವುದಿಲ್ಲ. ಅಧಿಕ ದಾಹವನ್ನು ತಣಿಸುತ್ತೆ. ಮನದಲ್ಲಿನ ಆಂದೋಲನ, ಉದ್ರೇಕವನ್ನು ತಗ್ಗಿಸಿ ಮನಸ್ಸು ಪ್ರಶಾಂತವಾಗಿರಲು ಸಹಕರಿಸುತ್ತೆ. ಚಿಟಿಕೆ ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಮಾನಸಿಕ ಒತ್ತಡ ಕೆಡಿಮೆಯಾಗಿ, ಮನಸ್ಸು ಪ್ರಶಾಂತವಾಗುತ್ತದೆ.

5) ಕೆಮ್ಮು, ಕಫ ದೂರವಾಗಿ, ಮೆದಳು ಚುರುಕಾಗಿ ಕೆಲಸ ಮಾಡಲು ಅನವುಮಾಡಿಕೊಡುತ್ತೆ. ಮೂತ್ರ ಪಿಂಡಗಳಲ್ಲಿನ ಕಲ್ಲು ಕರಗಿಸುವುದಲ್ಲದೆ, ಮೂತ್ರ ಪಿಂಡಗಳು ಸುಗುಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತೆ.

6) ನಿದ್ರಾಹೀನತೆಯಿಂದ ಬಳಲುವವರು ಮಲಗುವ 15 ನಿಮಿಷ ಮುನ್ನ ಜಾಕಾಯಿ ಚೂರ್ಣ 1/2 ಚಮಚ, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದರೆ ನಿದ್ರೆ ಚೆನ್ನಾಗಿ ಬರುತ್ತೆ.

7) ಮಕ್ಕಳಿಗೆ ಅತಿಸಾರ ಬೇಧಿ ಇದ್ದಾಗ ತಾಯಿ ಹಾಲಿನಲ್ಲಿ ಗಂಧ ತೇಯ್ದು ದಿನಕ್ಕೆ ಮೂರು ಬಾರಿ ನೆಕ್ಕಿಸುತ್ತಿದ್ದರೆ ಶೀಘ್ರ ಉಪಶಮನವಾಗುತ್ತೆ.

8) ಮಕ್ಕಳಿಗೆ ಅತಿಸಾರ ಬೇಧಿ ಇದ್ದಾಗ ತಾಯಿ ಹಾಲಿನಲ್ಲಿ ಗಂಧ ತೇಯ್ದು ದಿನಕ್ಕೆ ಮೂರು ಬಾರಿ ನೆಕ್ಕಿಸುತ್ತಿದ್ದರೆ ಶೀಘ್ರ ಉಪಶಮನವಾಗುತ್ತೆ.

9) ಮುಖದಮೇಲೆ ಬಂಗು ಬಂದಾಗ ಹಸುವಿನ ಹಾಲಿನಲ್ಲಿ ಜಾಕಾಯಿ ಗಂಧ ತೇಯ್ದು, ದಿನಕ್ಕೆ ಮೂರ್ನಾಲ್ಕು ಬಾರಿ ಲೇಪಿಸುತ್ತಾ, 2-3 ತಿಂಗಳು ಪಾಲಿಸಿದರೆ ಸಮಸ್ಯೆ ನಿವಾರಣೆಯಾಗುತ್ತೆ.

ಜಾಯಿಕಾಯಿ ನೀರಿನ ಅರೋಗ್ಯಕಾರಿ ಉಪಯೋಗಗಳು.

ಆಯುರ್ವೇದದ ಪ್ರಕಾರ, ಜಾಯಿಕಾಯಿ ನೀರು ಆರೋಗ್ಯಕ್ಕೆ ತುಂಬಾ ಉಪಯುಕ್ತ .ಗ್ಯಾಸ್, ಅಸಿಡಿಟಿ ಮತ್ತು ಮಲಬದ್ಧತೆಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರುವ ಖಂಡಿತವಾಗಿಯೂ ದೈನಂದಿನ ಆಹಾರ ಯೋಜನೆಯಲ್ಲಿ ಜಾಯಿಕಾಯಿ ನೀರನ್ನು ಒಂದು ಭಾಗವಾಗಿ ಮಾಡಿಕೊಂಡಾಗ. ಜಾಯಿಕಾಯಿ ನೀರಿನಲ್ಲಿ ಕಂಡುಬರುವ ಅಂಶಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಇದಲ್ಲದೇ, ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಜಾಯಿ ಕಾಯಿ ಎಣ್ಣೆ ಉಪಯೋಗಗಳು

ಜಾಯಿಕಾಯಿ ಎಣ್ಣೆಯ ರುಚಿ ತುಂಬಾ ಸಿಹಿಯಾಗಿರುತ್ತದೆ. ಇದನ್ನು ಭಕ್ಷ್ಯಗಳಲ್ಲಿ ಮಿತವಾಗಿ ಬಳಸಲಾಗುತ್ತದೆ. ಈ ಎಣ್ಣೆಯನ್ನು ಹೆಚ್ಚಾಗಿ ಔಷಧಗಳು ಮತ್ತು ಸೌಂದರ್ಯವರ್ಧಕ ವಸ್ತುಗಳಿಗೆ ಬಳಸಲಾಗುತ್ತದೆ.

ದೇಹದ ಚರ್ಮ ಒರಟಾಗಿ ಇದ್ದವರು, ಜಾಕಾಯಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು 1 ಗಂಟೆಯ ನಂತರ ಸ್ನಾನ ಮಾಡಿದರೆ ಚರ್ಮವು ಮೃದುವಾಗಿ ಕಾಂತಿಯಿಂದ ಹೊಳೆಯುತ್ತೆ.

ಹಾಗೆಯೆ ಜಾಯಿಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಗಳಿವೆ. ಇದು ಚರ್ಮದಿಂದ ಮೊಡವೆ ಮತ್ತು ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಬಹು ಉಪಯೋಗಿ ಜಾಯಿ ಕಾಯಿ ಎಲೆ

ಜಾಯಿಕಾಯಿ ಎಲೆಗಳನ್ನು ಜಗಿಯುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನವಿದೆ. ಈ ಎಲೆಗಳು ರುಚಿಯಲ್ಲಿ ತೊಗರಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜಾಯಿಕಾಯಿ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು ಒಂದಲ್ಲ. ಇದು ದೇಹದ ಹಲವಾರು ಅಂಗಗಳಿಗೆ ಪ್ರಯೋಜನವನ್ನು ನೀಡುತ್ತವೆ. ಉದಾಹರಣೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ನಿಯಂತ್ರಿಸುತ್ತದೆ.

ಸೂಚನೆ!! ಇಲ್ಲಿರುವ ವಿಷಯಗಳು ಕೇವಲ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ತಜ್ಞರನ್ನು ಸಂಪರ್ಕಿಸಿ.

ಸೌಮ್ಯ ಸನತ್

  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
“ಆರೋಗ್ಯ, ಆಧ್ಯಾತ್ಮದ ಮೂಲ ಯೋಗ”
ಮಕ್ಕಳ ಬಾಲ್ಯ
ಮನರಂಜನೆ ನೀಡಿರುವ ದಾಸರ ಪದಗಳು
ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
ಕಾರ್ಡಿಯೋ ಫೋಬಿಯ
TAGGED:foodHealthhealthy foodKannada Articlenutmegspicesಜಾಯಿಕಾಯಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
ChamrajnagarKarnatakaTrending

ಈಜಲು ಹೋದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

Team Varthaman
Team Varthaman
April 26, 2025
ಯೋಗೇಶ್ ಗೌಡ ಕೊಲೆ ಪ್ರಕರಣ : ತೀರ್ಪು ಏ.15ಕ್ಕೆ ಮುಂದೂಡಿಕೆ
ಸರ್ಕಾರದ ವೈಫಲ್ಯ ಮುಚ್ಚಲು ಸರ್ಕಾರದ ತಂತ್ರ: ಪ್ರತಾಪಸಿಂಹ
ಡಿಎಪಿಗೆ ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಸಿ
ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?